ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಡಿಕೆ ಶಿವಕುಮಾರ್ ಸರ್ಕಾರದ ಅವಧಿಯಲ್ಲಿ ಡ್ಯಾಂಗಳು ಖಾಲಿಯಾಗಿರುವುದನ್ನು ಟೀಕಿಸಿದ್ದಾರೆ. ಕರ್ನಾಟಕದ ರೈತರಿಗೆ ಬೆಳೆ ಬೆಳೆಯದಂತೆ ಹೇಳುವ ಸರ್ಕಾರ, ತಮಿಳುನಾಡಿಗೆ ಇದೇ ಮಾತನ್ನು ಹೇಳಲು ಸವಾಲು ಹಾಕಿದ್ದು, ಬೆಳೆ ಬೆಳೆಯದ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮಂಡ್ಯ (ಜು.4): ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಒಂದು ತಿಂಗಳಲ್ಲೇ ರಾಜ್ಯದ ಎಲ್ಲ ಡ್ಯಾಂಗಳು ಖಾಲಿ ಖಾಲಿಯಾಗಿವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಮಂಡ್ಯದ ಕೆಆರ್‌ಎಸ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಈ ಸಂದರ್ಭದಲ್ಲಿದ್ದ ಡ್ಯಾಂನ ನೀರಿನ ಮಟ್ಟದ ಕಾಲು ಭಾಗವೂ ಈ ವರ್ಷ ಇಲ್ಲ. ಈಗ ಕೇವಲ 6 ಟಿಎಂಸಿ ಮಾತ್ರ ನೀರು ಉಳಿದಿದೆ. ಆದರೆ ಪ್ರತಿ ತಿಂಗಳು ಕುಡಿಯುವ ನೀರಿಗೆ 3 ಟಿಎಂಸಿ ಬೇಕು. ಅದು ಅಲ್ಲದೆ ರೈತರು ಸುಮಾರು ಒಂದು ಲಕ್ಷ ಹೆಕ್ಟರ್‌ನಲ್ಲಿ ಬೆಳೆ ಬೆಳೆದಿದ್ದಾರೆ. ಡ್ಯಾಂ ಖಾಲಿ ಆಗಿವೆ ಬೆಳೆ ಬೆಳೆಯಬೇಡಿ ಅಂತೆಲ್ಲ ಸಿಎಂ ಹೇಳಿದ್ದಾರೆ. ಆದರೆ ನೀವು ಗಮನಿಸಿರಬೇಕು, ಮಧ್ಯಪ್ರಾಚ್ಯ ಯುದ್ಧ ನಡೆಯುವುದು ಚಿನ್ನದ ಬೆಲೆ ಭಾರೀ ಏರಿಕೆ ಆಗಿತ್ತು ಆಗ ಪ್ರಧಾನಿ ಮೋದಿಯವರು ಚಿನ್ನ ಖರೀದಿಸಬೇಡಿ ಎಂದು ಕರೆ ನೀಡಿದಾಗ, ಪ್ರಧಾನಿ ಹೇಳಿಕೆ ಖಂಡಿಸಿ ಇವರೇ(ಕಾಂಗ್ರೆಸ್) ಬಾಯಿಬಡಿದುಕೊಂಡರು ಈಗ ಬೆಳೆ ಬೆಳೆಯಬೇಡಿ ಎನ್ನುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಬೆಳೆ ಬೆಳೆಯಬೇಡಿ ಅಂತಾ ತಮಿಳುನಾಡಿಗೆ ಹೇಳಿ
ತಮಿಳನಾಡಲ್ಲೂ ಇದೇ ಕಾಂಗ್ರೆಸ್ ಹೊಂದಾಣಿಗೆ ಮಾಡಿಕೊಂಡಿರುವ ಪಕ್ಷ ಇದೆ. ಆದರೆ ಅಲ್ಲಿನ ಕಾಂಗ್ರೆಸ್ ನಾಯಕರೇ ಕರ್ನಾಟಕ ಸರ್ಕಾರಕ್ಕೆ ಧಮ್ಕಿ ಹಾಕುತ್ತಿದ್ದಾರೆ. ಸಿಎಂ ಡಿಕೆಶಿ ಅವ್ರೇ ನಮ್ಮ ರೈತರಿಗೆ ಬೆಳೆ ಬೆಳೆಯಬೇಡಿ ಅಂತಾ ಹೇಳ್ತಿರಿ, ಇದೇ ರೀತಿ ತಮಿಳುನಾಡಿಗೆ ಹೇಳಿ ನೋಡೋಣ. ಕಳೆದ ಬಾರಿ ಸ್ಟಾಲಿನ್ ಇದ್ರು. ಈ ಬಾರಿ ಟಿವಿಕೆ ಜೊತೆ ಕಾಂಗ್ರೆಸ್ ಪಾರ್ಟನರ್ ಆಗಿದೆಯಲ್ಲ. ನಮ್ಮ ರಾಜ್ಯದಲ್ಲಿ ಮಳೆಯಿಲ್ಲ, ಡ್ಯಾಂಗಳು ಖಾಲಿಯಾಗಿವೆ. ಇಲ್ಲಿನ ಜನರಿಗೆ ಕುಡಿಯೋಕೂ ನೀರಿಲ್ಲ. ಬೆಳೆ ಬೆಳೆಯಬೇಡಿ ಅಂತಾ ಹೇಳಿ ನೋಡೋಣ ಎಂದು ಸವಾಲು ಹಾಕಿದರು.
ಸರ್ಕಾರ ಇಂಥ ಸಂದರ್ಭದಲ್ಲಿ ರೈತರು, ಸರ್ವಪಕ್ಷದ ಸಭೆ ಕರೆಯಬೇಕಿತ್ತು. ಆದರೆ ಸರ್ಕಾರ ಕಸದ ಟೆಂಡರ್, ಟನಲ್ ರೋಡ್ ಟೆಂಡರ್ ಕರೆಯೋದ್ರಲ್ಲಿ ಆಸಕ್ತಿ ತೋರಿಸುತ್ತಿದೆ. ಮಳೆ ಅಭಾವದ ಸಂಧರ್ಭದಲ್ಲಿ ಆಗಬೇಕಾದ ಕ್ರಮ ಕುರಿತು ಚರ್ಚಿಸಲು ಈ ಸರ್ಕಾರಕ್ಕೆ ಮನಸಿಲ್ಲ, ಕಾಳಜಿನೇ ಇಲ್ಲ. ರೈತರ ಸಮಸ್ಯೆ ಕೇಳಲು ಕೃಷಿ ಸಚಿವರಿಲ್ಲ, ಸಂಪುಟ ರಚನೆಯಂತೂ ಪೂರ್ಣಗೊಂಡಿಲ್ಲ. ಪೇಮೆಂಟ್ ಕ್ಯಾಬಿನೆಟ್‌ಗೆ ಕಾಯ್ತಿದ್ದಾರ? ದೆಹಲಿಯವರಿಗೆ ದುಡ್ಡು ಕೊಟ್ಟು ಕ್ಯಾಬಿನೆಟ್ ಸ್ಥಾನ ಪಡೆಯಬೇಕು, ಅದರಲ್ಲಿ ಅನುಮಾನವೇ ಇಲ್ಲ. ಡಿಕೆ ಶಿವಕುಮಾರ್ ಸರ್ಕಾರ ದೆಹಲಿ ಕಾಂಗ್ರೆಸ್ ಹೈಕಮಾಂಡ್‌ನ ಎಟಿಎಂ ಅಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕುಡಿಯೋಕೂ ನೀರಿಲ್ಲದೆ ಹಾಹಾಕಾರ ಶುರುವಾಗಿದೆ. ಬೆಳೆ ಬೆಳೆಯಬೇಡಿ ಅಂತೀರಲ್ಲ ಬೆಳೆ ಬೆಳೆಯದೆ ಹೊಟ್ಟೆಗೇನು ಕಡ್ಲೇಕಾಯಿ ತಿನ್ನಬೇಕಾ? ಆಯ್ತಪ್ಪ ಬೆಳೆ ಬೆಳೆಯೋದು ಬೇಡ ಅಂದ್ರೆ ರೈತರಿಗೆ ಪರಿಹಾರ ಆದ್ರೂ ನೀಡಬೇಕಿತ್ತಲ್ಲ? ಮಳೆ ಕೈಕೊಟ್ಟಿದ್ದರಿಂದ ಪರ್ಯಾಯ ಯೋಜನೆಯಾದ್ರೂ ಈ ಸರ್ಕಾರ ಮಾಡಬೇಕಿತ್ತಲ್ವಾ? ಮಳೆ ಕೊರತೆ ಆಗಿದೆ ಹೆದರಬೇಡಿ, ನಿಮ್ಮ ಜೊತೆಗೆ ನಾವಿದ್ದೇವೆ ಅಂತ ಸರ್ಕಾರ ರೈತರ ಜೊತೆ ನಿಲ್ಲಬೇಕಿತ್ತಲ್ಲ? ಅವರಿಗಾಗುವ ನಷ್ಟ ತುಂಬಿಕೊಡ್ತೀವಿ ಎಂಬ ಧೈರ್ಯ ಹೇಳಬೇಕಿತ್ತಲ್ಲ? ಹೂಂ ಇದ್ಯಾವುದು ಹೇಳದೆ ಬೆಳೆ ಬೆಳೆಯಬೇಡಿ ಅಂದ್ರೆ ಕೃಷಿಯನ್ನೇ ಅವಲಂಬಿಸಿರೋ ರೈತರು ಹೇಗೆ ಬದುಕಬೇಕು? ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬೆಳೆ ಬೆಳೆಯದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ಕೊಡಿ:
ಬೆಳೆ ಬೆಳೆಯದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ಕೊಡುವಂತೆ ಆಗ್ರಹಿಸಿದ ಆರ್ ಅಶೋಕ್, ಸದ್ಯ ಕೆಆರ್‌ಎಸ್ ಡ್ಯಾಂಗೆ 900ಕ್ಯೂಸೆಕ್ ಒಳಹರಿವು ಇದೆ. ಒಳಹರಿವಿಗಿಂತ ಹೆಚ್ಚು ಹೊರ ಹರಿವು ಇದೆ. ಕದ್ದು ಮುಚ್ಚಿ ತಮಿಳುನಾಡಿಗೆ ನೀರು ಬಿಡುವ ಪ್ಲಾನ್ ಮಾಡ್ಕೊಂಡಿದ್ದಾರಾ, ಗೊತ್ತಿಲ್ಲ? ನಿಜಕ್ಕೂ ಈ ಸರ್ಕಾರ ಜೀವಂತ ಇದ್ರೆ ಮೊದಲು ರೈತರಿಗೆ ಪರಿಹಾರ ಕೊಡುವ ಘೋಷಣೆ ಮಾಡಲಿ. ಇಲ್ಲದಿದ್ರೆ ನಮ್ಮ ಸರ್ಕಾರ ಪಾಪಾರ್ ಆಗಿದೆ ಅಂತಾದ್ರೂ ಹೇಳಿಬಿಡಲಿ. ಅದುಬಿಟ್ಟು


