ಈ ಬಾರಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕು ಎಂಬ ಸಂಕಲ್ಪವಿದೆ, ನನಗೆ ಗೆಲ್ಲುವ ಪೂರ್ತಿ ವಿಶ್ವಾಸವಿದೆ. ಈ ಪ್ರಚಾರದ ಶುಭ ಮಹೂರ್ತ ಬಹಳ ಚೆನ್ನಾಗಿದೆ. ನಾವು ಅತ್ಯಂತ ಐತಿಹಾಸಿಕ ದಾಖಲೆಯ ವಿಜಯವನ್ನು ಸಾಧಿಸಲಿದ್ದೇವೆ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 

ಕಲಬುರಗಿ(ಮಾ.17): ಕಲಬುರಗಿಯಿಂದಲೇ ಲೋಕ ಕದನದ ಪ್ರಚಾರ ಮಾಡಿ 2019ರಲ್ಲಿ 26 ಸ್ಥಾನ ಗೆದ್ದಿರುವ ಬಿಜೆಪಿ ಈ ಬಾರಿಯೂ ಮತ್ತೆ ಕಲಬುರಗಿಯಿಂದಲೇ ಪ್ರಚಾರ ಶುರು ಮಾಡಿದ್ದು ಎಲ್ಲಾ 28 ಸ್ಥಾನ ಗೆಲ್ಲಲಿದೆ. ಬಿಜೆಪಿಗೆ, ಕಮಲಕ್ಕೆ ಕಲಬುರಗಿ ತುಂಬಾ ಲಕ್ಕಿ ಇದೆ. ಕಲಬುರಗಿಯ ವಾಸ್ತು ಬಹಳ ಚೆನ್ನಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಾರಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕು ಎಂಬ ಸಂಕಲ್ಪವಿದೆ, ನನಗೆ ಗೆಲ್ಲುವ ಪೂರ್ತಿ ವಿಶ್ವಾಸವಿದೆ. ಈ ಪ್ರಚಾರದ ಶುಭ ಮಹೂರ್ತ ಬಹಳ ಚೆನ್ನಾಗಿದೆ. ನಾವು ಅತ್ಯಂತ ಐತಿಹಾಸಿಕ ದಾಖಲೆಯ ವಿಜಯವನ್ನು ಸಾಧಿಸಲಿದ್ದೇವೆ ಎಂದರು. 

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿರೋದು ಅನ್ನ ಹಾಕೋಕೆ ಅಲ್ಲ, ಕನ್ನ ಹಾಕೋಕೆ: ಆರ್‌ ಅಶೋಕ್ ವಾಗ್ದಾಳಿ

28ಕ್ಕೆ 28 ಸ್ಥಾನಗಳನ್ನು ಇತ್ತೀಚಿನ ದಶಕಗಳಲ್ಲಿ ಗೆದ್ದಿಲ್ಲ. ಎಲ್ಲಾ ಸ್ಥಾನಗಳನ್ನು ಗೆದ್ದು ದಾಖಲೆ ನಿರ್ಮಿಸಲಿದ್ದೇವೆ. ಔಟ್ ಆಫ್ ಔಟ್ ನ್ನು ಮೋದಿ ಅವ್ರಗೆ ತೀರ್ಮಾನ ಮಾಡಿದ್ದೇವೆ ಎಂದು ಜೋಶಿ ಹೇಳಿದರು.