Asianet Suvarna News Asianet Suvarna News

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿರೋದು ಅನ್ನ ಹಾಕೋಕೆ ಅಲ್ಲ, ಕನ್ನ ಹಾಕೋಕೆ: ಆರ್‌ ಅಶೋಕ್ ವಾಗ್ದಾಳಿ

ಯುದ್ಧಕ್ಕೂ ಮೊದಲೇ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ. 20 ಮಂತ್ರಿಗಳನ್ನು ನಿಲ್ಲಿಸುವ ಮಾತನಾಡಿದ್ರು. ಆದರೆ ಈಗ ಒಬ್ರು ನಿಲ್ಲಲು ಮುಂದೆ ಬರುತ್ತಿಲ್ಲ. ಯಾಕೆಂದರೆ ಸೋಲುವ ಭೀತಿ. ಹೀಗಾಗಿ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಸೋತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Karnataka LoP leader R Ashok outraged against congress government at kalaburagi ravv
Author
First Published Mar 16, 2024, 2:46 PM IST

ಕಲಬುರಗಿ (ಮಾ.16): ಯುದ್ಧಕ್ಕೂ ಮೊದಲೇ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ. 20 ಮಂತ್ರಿಗಳನ್ನು ನಿಲ್ಲಿಸುವ ಮಾತನಾಡಿದ್ರು. ಆದರೆ ಈಗ ಒಬ್ರು ನಿಲ್ಲಲು ಮುಂದೆ ಬರುತ್ತಿಲ್ಲ. ಯಾಕೆಂದರೆ ಸೋಲುವ ಭೀತಿ. ಹೀಗಾಗಿ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಸೋತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಕಲಬುರಗಿ ಸಮಾವೇಶದಲ್ಲಿ ಮೋದಿ ಆಗಮನಕ್ಕೆ ಮುನ್ನ ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ರು. ಅವರ ಮೇಲೆ ಕಾಂಗ್ರೆಸ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದೇಶದ ಭದ್ರತೆಗಾಗಿ, ಪಾಕಿಸ್ತಾನ ಪರ ಘೋಷಣೆ ಕೂಗಿದವರ ಎಡೆಮುರಿ ಕಟ್ಟಲು ಪ್ರಧಾನಿ ನರೇಂದ್ರ ಇದ್ದಾರೆ. ದೇಶದ್ರೋಹಿಗಳ ವಿರುದ್ಧ ಸಿಂಹದ ರೀತಿ ಘರ್ಜನೆ ಮಾಡಿದಂಥವರು ನರೇಂದ್ರ ಮೋದಿ. ಮೋದಿಯಿಂದ ಮಾತ್ರ ಈ ದೇಶ ರಕ್ಷಣೆ ಮಾಡೋಕೆ ಸಾಧ್ಯ. ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಶಪಥ ಮಾಡಬೇಕು ಎಂದು ಕರೆ ನೀಡಿದರು.

ನಾಳೆ ಬಿಜೆಪಿ ಮೂರನೇ ಲಿಸ್ಟ್ ಘೋಷಣೆ ಸಾಧ್ಯತೆ, ನನ್ನ ಹೆಸರೂ ಬರಬಹುದು: ಜಗದೀಶ್ ಶೆಟ್ಟರ್ 

ನೀರಿಲ್ಲ ನೀರಿಲ್ಲ, ಎಲ್ಲೆಲ್ಲೂ ನೀರಿಲ್ಲ. ಹಿಂದೆಯೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದ್ದಾಗ ಬರಗಾಲ. ಆಮೇಲೆ ಯಡಿಯೂರಪ್ಪ ಸಿಎಂ ಆದರು ಆಗ ಎಲ್ಲೆಲ್ಲೂ ಮಳೆಯಾಗಿತ್ತು. ಸಿದ್ದರಾಮಯ್ಯನವರೇ ನಿಮಗೆ ಆತ್ಮಸಾಕ್ಷಿ ಇದ್ದರೆ ಅಭಿವೃದ್ಧಿಗೆ ಒಂದು ರೂಪಾಯಿ ಕೊಟ್ಟಿದ್ದೀರಾ ಹೇಳಿ ನೋಡೋಣ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ರೂಪಾಯಿ ಕೆಲಸ ಆಗಿಲ್ಲ. ಫ್ರೀ ಫ್ರೀ ಅಂತೀರಿ. ಆದರೆ ಕದ್ದು ಮುಚ್ಚಿ ಎಲ್ಲದಕ್ಕೂ ಟ್ಯಾಕ್ಸ್, ನನ್ನ ದುಡ್ಡು ತಗೊಂಡು ನನ್ನ ಹೆಂಡತಿಗೆ ಕೊಡೋಕೆ ನೀನು ಯಾರಯ್ಯ ಎಂದು ಸಿದ್ದರಾಮಯ್ಯ ಗೆ ಕೇಳಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ಲೋಕಸಭಾ ಟಿಕೆಟ್ ಸಿಗದ್ದಕ್ಕೆ ಈಶ್ವರಪ್ಪ ಬಂಡಾಯ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದೇನು?

ಸಿದ್ದರಾಮಯ್ಯ ಸರ್ಕಾರ ಒಂದೇ ಒಂದು ಅಕ್ಕಿಕಾಳನ್ನು ಕೊಟ್ಟಿಲ್ಲ. ಅದನ್ನು ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಿರೋದು ಅನ್ನ ಹಾಕೋಕೆ ಅಲ್ಲ, ಕನ್ನ ಹಾಕೋಕೆ ಲೂಟಿ ಮಾಡೋಕೆ ಬಂದಿರೋದು. ಸಿದ್ದರಾಮಯ್ಯ ಕಾಲಿಟ್ಟಿದ್ದೇ ಇಟ್ಟಿದ್ದು ರಾಜ್ಯದಲ್ಲಿ ಭೀಕರ ಬರಗಾಲ.

Follow Us:
Download App:
  • android
  • ios