ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ರ ಚರ್ಚೆಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೆಪಿಎಸ್ಸಿ ಹಗರಣ ಪ್ರಸ್ತಾಪಿಸಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ (ಜು.29): ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ರ ಚರ್ಚೆಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೆಪಿಎಸ್ಸಿ ಹಗರಣ ಪ್ರಸ್ತಾಪಿಸಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಗಳೇ ದೆಹಲಿಗೆ ಬಂದು ನ್ಯಾಯದ ನಾಟಕ ಆಡ್ತೀರಾ?

‘ಮಾನ್ಯ ಮುಖ್ಯಮಂತ್ರಿಗಳೇ!..ದೆಹಲಿಗೆ ಬಂದು ನ್ಯಾಯದ ನಾಟಕವಾಡುವ ನಿಮಗೆ, ಕರ್ನಾಟಕದಲ್ಲಿ ಕೆಪಿಎಸ್ಸಿಯನ್ನು ಬಟಾಬಯಲಾಗಿ ‘ಹರಾಜು ಮಾರುಕಟ್ಟೆ’ ಮಾಡಿರುವುದು ಅನ್ಯಾಯ ಅಂತ ಅನ್ನಿಸುವುದಿಲ್ಲವೇ ? 80 ಲಕ್ಷ ರು. ಚೆಲ್ಲಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಎನ್ನುವುದಾದರೆ, ಹಗಲಿರುಳು ಕಷ್ಟಪಟ್ಟು ಓದುವ ಬಡವರ ಮತ್ತು ಶ್ರಮಜೀವಿಗಳ ಮಕ್ಕಳ ಭವಿಷ್ಯವೇನು? ಅವರ ಅರ್ಹತೆಗೆ ನಿಮ್ಮ ಸರ್ಕಾರದ ದರಪಟ್ಟಿಯಲ್ಲಿ ಬೆಲೆಯೇ ಇಲ್ಲವೇ ಶಿವಕುಮಾರ್‌ ಅವರೇ?’ ಎಂದು ಪ್ರಶ್ನಿಸಿದರು.

ಕೆಪಿಎಸ್ಸಿ ಅಧ್ಯಕ್ಷರ ಅಮಾನತಿನಿಂದ ಈ ಬೃಹತ್ ಅಕ್ರಮದ ಕಳಂಕ ಮುಚ್ಚಿಹೋಗುತ್ತದೆಯೇ?

‘ಕೇವಲ ಕೆಪಿಎಸ್ಸಿ ಅಧ್ಯಕ್ಷರ ಅಮಾನತಿನಿಂದ ಈ ಬೃಹತ್ ಅಕ್ರಮದ ಕಳಂಕ ಮುಚ್ಚಿಹೋಗುತ್ತದೆಯೇ? ಕಾಂಗ್ರೆಸ್ ಸರ್ಕಾರದ ನಿಗದಿತ ದರಪಟ್ಟಿಯಲ್ಲಿ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಅವಕಾಶವೇ? ಲಕ್ಷಾಂತರ ನಿರುದ್ಯೋಗಿ ಯುವಕರ ಕಣ್ಣೀರು ಮತ್ತು ಅವರ ಕುಟುಂಬಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ’ ಎಂದು ಹೇಳಿದರು. 

Scroll to load tweet…