ಕರ್ನಾಟಕದಲ್ಲಿ ಪಕ್ಷಾಂತರ ಪರ್ವ: ಬಿಜೆಪಿಗೆ ಗುಡ್‌ಬೈ ಹೇಳ್ತಾರಾ ಮತ್ತೊಬ್ಬ ನಾಯಕ?
ಕಾಂಗ್ರೆಸ್ ದೇಶವನ್ನು 70ವರ್ಷಗಳ ಕಾಲ ಅಧಿಕಾರ ನಡೆಸಿದೆ. ಆದರೆ, ನಮ್ಮ ಸಮಾಜಕ್ಕೆ ಯಾವುದೇ ಸವಲತ್ತು ಕೊಟ್ಟಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ನಮ್ಮ ಸಮಾಜಕ್ಕೆ ಗೌರವ ನೀಡಿದ್ದಾರೆ. ಕಲಬುರಗಿ ಮಳಖೇಡ ಗ್ರಾಮದಲ್ಲಿ ನಡೆದ ಐತಿಹಾಸಿ ಸಮಾವೇಶದಲ್ಲಿ ಬಂಜಾರ ಸಮಾಜಕ್ಕೆ 50 ಸಾವಿರ ಹಕ್ಕುಪತ್ರಗಳನ್ನು ನೀಡಿದ್ದಾರೆ ಎಂದ ಉಮೇಶ ಜಾಧವ್
ಚಿಂಚೋಳಿ(ಮಾ.26): ಚುನಾವಣೆ ಸಂದರ್ಭದಲ್ಲಿ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಕೆಲವರು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ. ನನಗೆ ಬಿಜೆಪಿ ಮರ್ಯಾದೆ ಕೊಟ್ಟಿದೆ ಬಂಜಾರ ಸಮಾಜಕ್ಕೆ ಗೌರವ ನೀಡಿ ಅನೇಕ ಸವಲತ್ತುಗಳನ್ನು ನೀಡಿದೆ. ನಾನು ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲವೆಂದು ಕಲಬುರಗಿ ಬಿಜೆಪಿ ಸಂಸದ ಡಾ.ಉಮೇಶ ಜಾಧವ್ ಸ್ಪಷ್ಟಪಡಿಸಿದರು.
ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಅವರು ವಿವಿಧ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ದೇಶವನ್ನು 70ವರ್ಷಗಳ ಕಾಲ ಅಧಿಕಾರ ನಡೆಸಿದೆ. ಆದರೆ, ನಮ್ಮ ಸಮಾಜಕ್ಕೆ ಯಾವುದೇ ಸವಲತ್ತು ಕೊಟ್ಟಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ನಮ್ಮ ಸಮಾಜಕ್ಕೆ ಗೌರವ ನೀಡಿದ್ದಾರೆ. ಕಲಬುರಗಿ ಮಳಖೇಡ ಗ್ರಾಮದಲ್ಲಿ ನಡೆದ ಐತಿಹಾಸಿ ಸಮಾವೇಶದಲ್ಲಿ ಬಂಜಾರ ಸಮಾಜಕ್ಕೆ 50 ಸಾವಿರ ಹಕ್ಕುಪತ್ರಗಳನ್ನು ನೀಡಿದ್ದಾರೆ ಎಂದರು.
ಹಿಂದುಳಿದ ಕಲಬುರಗಿ ಪ್ರಗತಿಗೆ ಖರ್ಗೆ ಕಾಳಜಿ ಯಾಕೆ ತೋರಲಿಲ್ಲ: ತೇಜಸ್ವಿ ಸೂರ್ಯ ಪ್ರಶ್ನೆ
ಮಹಾರಾಷ್ಟ್ರದಲ್ಲಿರುವ ಬಂಜಾರ ಸಮಾಜದ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೋಸ್ಕರ 590 ಕೋಟಿ ರು. ಅನುದಾನವನ್ನು ನೀಡಿದ್ದಾರೆ. ಬಂಜಾರ ಅಭಿವೃದ್ಧಿ ನಿಗಮ ಸ್ಥಾಪನೆ ಬಿಜೆಪಿ ಮಾಡಿದೆ. ತಾಲೂಕಿನ ಎಲ್ಲ ಗ್ರಾಮ/ತಾಂಡಾಗಳ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಾಡುತ್ತಿದೆ. ಚಿತ್ತಾಪುರ ಶಾಸಕ ನನಗೆ ಪದೇ ಪದೇ ಜಾಧವ್ ಅಭಿವೃದ್ಧಿ ಶೂನ್ಯವಾಗಿದೆ. ಏನು ಕೊಡುಗೆ ಇಲ್ಲವೆಂದು ಟೀಕಿಸುತ್ತಿದ್ದರು. ಆದರೆ, ನಿಮ್ಮಪ್ಪ ಮಾಡಿದ ಅಭಿವೃದ್ಧಿ ಸಾಧನೆಗಳೇನು ಎಂದು ಸಂಸದ ಉಮೇಶ್ ಪ್ರಶ್ನಿಸಿದರು.
ಸಿಸಿಐ ಕುರುಕುಂಟ, ಎಮ್‌ಎಸ್‌ಕೆಮಿಲ್, ಎಸಿಸಿ ಸಿಮೆಂಟ್ ಕಂಪನಿ ಬಂದ್ ಆಗಿವೆ. ಕಾರ್ಮಿಕರ ಬದುಕು ಹೀನಾಯ ಸ್ಥಿತಿಯಲ್ಲಿದ್ದರೂ ಮಲ್ಲಿಕಾರ್ಜುನ ಖರ್ಗೆ ಯಾಕೆ ಗಮನಹರಿಸಲಿಲ್ಲವೆಂದು ಖಡಕ್ ಪ್ರಶ್ನಿಸಿದರು. ಖರ್ಗೆ ಚಿತ್ತಾಪೂರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿರುಗೇಟ ನೀಡಿದರು.