Asianet Suvarna News Asianet Suvarna News

Pancharatna Rath Yatra: ಕಲ್ಯಾಣ ಕರ್ನಾಟಕಕ್ಕೇ ಬರುತ್ತಿರುವ ಅನುದಾನ ಎಲ್ಲಿ ಹೋಗುತ್ತಿದೆ?: ಎಚ್‌ಡಿಕೆ ಪ್ರಶ್ನೆ

ಅಫಜಲಪುರದಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಎಚ್‌ಡಿ ಕುಮಾರಸ್ವಾಮಿ ಭಾಗವಹಿಸಿದ್ದು, ಹೊನ್ನಕಿರಣಗಿಯ ಶ್ರೀಚಂದ್ರಗುಂಡ ಶಿವಾಚಾರ್ಯ ಅವರು ಆಶೀರ್ವದಿಸಿ ಹಾರೈಸಿದರು. ಎಚ್‌ಡಿಕೆ ಅವರಿಗೆ ಸನ್ಮಾನಿಸಿ ರುದ್ರಾಕ್ಷಿ ಮಾಲೆ ಹಾಕಿ ಆಶೀರ್ವದಿಸಿ ಪಂಚರತ್ನ ರಥಯಾತ್ರೆಗೆ ಶುಭ ಕೋರಿದರು.

JDS Pancharatna Rath Yatra at Afzalpur in kalaburagi gow
Author
First Published Jan 12, 2023, 4:55 PM IST

ಕಲಬುರಗಿ (ಜ.12): ಅಫಜಲಪುರದಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಎಚ್‌ಡಿ ಕುಮಾರಸ್ವಾಮಿ ಭಾಗವಹಿಸಿದ್ದು, ಹೊನ್ನಕಿರಣಗಿಯ ಶ್ರೀಚಂದ್ರಗುಂಡ ಶಿವಾಚಾರ್ಯ ಅವರು ಆಶೀರ್ವದಿಸಿ ಹಾರೈಸಿದರು. ಎಚ್‌ಡಿಕೆ ಅವರಿಗೆ ಸನ್ಮಾನಿಸಿ ರುದ್ರಾಕ್ಷಿ ಮಾಲೆ ಹಾಕಿ ಆಶೀರ್ವದಿಸಿ ಪಂಚರತ್ನ ರಥಯಾತ್ರೆಗೆ ಶುಭ ಕೋರಿದರು. ಇನ್ನು ರಥಯಾತ್ರೆ ಸಮಯದಲ್ಲಿ  ಅಫಜಲಪುರ ಕ್ಷೇತ್ರದ ಹೊನ್ನಕಿರಣಗಿ ಗ್ರಾಮದ ಸಮೀಪ ಮಾರ್ಗದ ಮಧ್ಯೆ ರೈತಾಪಿ ಮಹಿಳೆಯರನ್ನು ಮಾತನಾಡಿಸಿದರು.

ಕಲ್ಯಾಣ ಕರ್ನಾಟಕಕ್ಕೇ ಬರುತ್ತಿರುವ ಅನುದಾನ ಎಲ್ಲಿ ಹೋಗುತ್ತಿದೆ? ಶೌಚಾಲಯ ಇಲ್ಲ ಎಂದು ಎಲ್ಲ ಕಡೆ ಮಹಿಳೆಯರು ಹೇಳುತ್ತಿದ್ದಾರೆ, ರಸ್ತೆಗಳು ಹಾಳು ಬಿದ್ದಿವೆ, ಎಲ್ಲಿ ಆಗಿದೆ ಪ್ರಗತಿ? ಪ್ರತಿ ವರ್ಷ 1500 ಕೋಟಿ ರೂಪಾಯಿಯನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ನೀಡುತ್ತಿದ್ದೇವೆ. ಒಬ್ಬ ಶಾಸಕರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಎಲ್ಲಿ ಹೋಗುತ್ತಿದೆ ಎಷ್ಟು ಹಣ? ಎಂದು ಕೇಳಿದ ಕುಮಾರಸ್ವಾಮಿ.

ದೇವೇಗೌಡರದು ಆಯ್ತು ; ಇದೀಗ ಅಯ್ಯಪ್ಪ ಮಾಲಾಧಾರಿಗಳ ಕೈಯಲ್ಲಿ ಸಚಿವ ಆಚಾರ ಭಾವಚಿತ್ರ!

ಕಲಬುರಗಿಯ ಹೊನ್ನಕಿರಣಗಿ ಗ್ರಾಮದಲ್ಲಿ ಮಾತನಾಡಿದ ಹೆಚ್‌ಡಿಕೆ ಹುಬ್ಬಳ್ಳಿಯಲ್ಲಿ ಇಂದು ಪ್ರಧಾನಿ ಮೋದಿಯ ಯುವ ಜನೋತ್ಸವ ಕಾರ್ಯಕ್ರಮ. ಬಿಜೆಪಿಯವರಗೆ ಯಾವುದೇ ವಿಷಯಗಳು ಇಲ್ಲ. ದೊಡ್ಡ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬರುತ್ತಿಲ್ಲ. ಸ್ವಾಮಿ ವಿವೇಕಾನಂದರ ಜಯಂತಿ ಇದೆ. ವಿವೇಕಾನಂದರ ಜನ್ಮದಿನದ ಹಿನ್ನೆಲೆ ಅದನ್ನ ದುರುಪಯೋಗ ಪಡಿಸಿಕೊಂಡು ಮತ ಕೇಳಲು ಹೊರಟಿದ್ದಾರೆ. ಕಲಬುರಗಿ ಗೆ ಹಕ್ಕು ಪತ್ರ ಕೊಡಲಿಕ್ಕೆ ಪ್ರಧಾನ ಮಂತ್ರಿ ಬರಬೇಕಾ? ರಾಜ್ಯದ ಮುಖ್ಯಮಂತ್ರಿ, ಸಚಿವರು ಕೋಡಲಿಕ್ಕೆ  ಆಗಲ್ವಾ? ಅದು ಒಂದು ದೊಡ್ಡ ಕಾರ್ಯಕ್ರಮ ಅದಕ್ಕೆ ಐದು ಲಕ್ಷ ಜನ ಸೇರಿಸುತ್ತಾರಂತೆ ಎಚ್ ಡಿಕೆ ವ್ಯಂಗ್ಯವಾಡಿದ್ದಾರೆ. ಜೊತೆಗೆ ನೋಡೋಣ ಇನ್ನೂ ಏನ್ ಏನ್ ನಾಟಕ ಆಡುತ್ತಾರೆ ಅಂತ ಎಂದಿದ್ದಾರೆ.

Assembly election: ಸಂಸದೆ ಸುಮಲತಾ ಯಾರೆಂಬುದೇ ಗೊತ್ತಿಲ್ಲ: ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ..?

ಕಳಸಾ ಬಂಡೂರಿ ವಿಚಾರ: ಕಳಸಾ ಬಂಡೂರಿಗೆ ಪ್ರಶ್ನೆಗಳನ್ನ ಕೇಳಿದ್ದಾರಲ್ಲ. ಸಂಬಂಧಿಸಿದ ಇಲಾಖೆಯಿಂದ ಪ್ರಶ್ನೆಗಳನ್ನು ಕೇಳಿದ್ದಾರೆ. ಗೋವಾದವರು ತಕರಾರು ತೆಗೆಯುತ್ತಿದ್ದಾರೆ. ಬಿಜೆಪಿ ಮಂತ್ರಿಗಳು ಹೇಳುತ್ತಿದ್ದಾರೆ ಈಗ ಏನ ಟೆಂಡರ್ ಕರೆದಿದ್ದಾರೆ. ಕೆಲಸ ಪ್ರಾರಂಭ ಮಾಡೇ ಬಿಡುತ್ತೆ ಅಂತಾ ಬಿಜೆಪಿ ಸಚಿವರು ಹೇಳಿದ್ರು. ನೋಡೊಣ ಎಲ್ಲಿಗೆ ತಂದು ನಿಲ್ಲಿಸುತ್ತಾರೆ ಅಂತಾ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಜ.16ರಂದು ಕುಮಾರಸ್ವಾಮಿ 'ರೈತ ಸಂಕ್ರಾಂತಿ': ರಾಜ್ಯದ ರೈತರ ಜತೆ ಅನ್‌ಲೈನ್ ಸಂವಾದ

Follow Us:
Download App:
  • android
  • ios