Asianet Suvarna News Asianet Suvarna News

ದೇವೇಗೌಡರದು ಆಯ್ತು ; ಇದೀಗ ಅಯ್ಯಪ್ಪ ಮಾಲಾಧಾರಿಗಳ ಕೈಯಲ್ಲಿ ಸಚಿವ ಆಚಾರ ಭಾವಚಿತ್ರ!

ಶಬರಿಮಲೆಗೆ ತೆರಳುತ್ತಿರುವ ಪಟ್ಟಣದ ಪಂಪಾ ಸನ್ನಿಧಾನ ಶ್ರೀ ಗುರು ಅಯ್ಯಪ್ಪ ಸ್ವಾಮಿ ¶ೌಂಡೇಶನ್‌ನ ಅಯ್ಯಪ್ಪ ಮಾಲಾಧಾರಿಗಳು ‘ಮತ್ತೊಮ್ಮೆ ಹಾಲಪ್ಪ ಆಚಾರ’ ಎಂದು ಬರೆದ ಸಚಿವ ಹಾಲಪ್ಪ ಆಚಾರ ಅವರ ಭಾವಚಿತ್ರ ಪ್ರದರ್ಶಿಸಿ ಅಭಿಮಾನ ಮೆರೆದರು.

Ayyappa maladhari hold portrait of the ministe halappa achar koppal rav
Author
First Published Jan 12, 2023, 9:14 AM IST

ಕುಕನೂರು (ಜ.12) : ಶಬರಿಮಲೆಗೆ ತೆರಳುತ್ತಿರುವ ಪಟ್ಟಣದ ಪಂಪಾ ಸನ್ನಿಧಾನ ಶ್ರೀ ಗುರು ಅಯ್ಯಪ್ಪ ಸ್ವಾಮಿ ¶ೌಂಡೇಶನ್‌ನ ಅಯ್ಯಪ್ಪ ಮಾಲಾಧಾರಿಗಳು ‘ಮತ್ತೊಮ್ಮೆ ಹಾಲಪ್ಪ ಆಚಾರ’ ಎಂದು ಬರೆದ ಸಚಿವ ಹಾಲಪ್ಪ ಆಚಾರ ಅವರ ಭಾವಚಿತ್ರ ಪ್ರದರ್ಶಿಸಿ ಅಭಿಮಾನ ಮೆರೆದರು.

ಈಗಾಗಲೇ ಶಬರಿಮಲೆ ಸಮೀಪ ಇರುವ ಕುಕನೂರಿನ ಮಾಲಾಧಾರಿಗಳು ಸಚಿವ ಹಾಲಪ್ಪ ಆಚಾರ(Halappa achar) ಅವರು ಮತ್ತೊಮ್ಮೆ ಕ್ಷೇತ್ರದಲ್ಲಿ ಜಯಸಾಧಿಸಿ ರಾಜ್ಯದಲ್ಲಿ ಮತ್ತೆ ಮಂತ್ರಿಯಾಗಬೇಕು ಎಂದು ಅಯ್ಯಪ್ಪಸ್ವಾಮಿ(Ayyappa swamy) ದೇವರಲ್ಲಿ ಪ್ರಾರ್ಥಿಸಲು ತೆರಳುತ್ತಿದ್ದೇವೆ ಅನ್ನುತ್ತಾರೆ.

Sabarimala: ಕಪ್ಪು ಅಶುಭ ಅಂದ ಮೇಲೆ ಅಯ್ಯಪ್ಪ ಭಕ್ತರು ಕಪ್ಪು ಬಟ್ಟೆ ಧರಿಸುವುದೇಕೆ?

ಸಾಮಾನ್ಯವಾಗಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಕುಟುಂಬ, ಮನೆ ಕಷ್ಟಪರಿಹಾರ ಹಾಗೂ ನೆಮ್ಮದಿಗಾಗಿ ಹಾಗೂ ಪ್ರತಿವರ್ಷ ಶಬರಿಮಲೆಗೆ ತೆರಳುವುದು ಸಹಜ. ಆದರೆ ಈ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ತಮ್ಮ ದಾರಿಯುದ್ದಕ್ಕೂ ಸಚಿವ ಹಾಲಪ್ಪ ಆಚಾರ ಅವರ ಫೋಟೊ ಹಿಡಿದು ತೆರಳುತ್ತಿರುವುದು ಸಚಿವರ ಮೇಲಿನ ಅಭಿಮಾನ ತೋರಿಸುತ್ತದೆ.

 

ದೇವೇಗೌಡರ ಫೋಟೋ ಹಿಡಿದು ಅಯ್ಯಪ್ಪಸ್ವಾಮಿ ದರ್ಶನ: ಕುಮಾರಸ್ವಾಮಿ ಸಿಎಂ ಆಗಲೆಂದು ಪೂಜೆ

ಚುನಾವಣೆ ಹತ್ತಿರ ಬರುತ್ತಿದ್ದು, ಸಚಿವ ಹಾಲಪ್ಪ ಆಚಾರ ಅವರು ಮತ್ತೊಮ್ಮೆ ಶಾಸಕರಾಗಲಿ ಎಂದು ಅಯ್ಯಪ್ಪಸ್ವಾಮಿಯಲ್ಲಿ ಪ್ರಾರ್ಥಿಸುತ್ತಿದ್ದೇವೆ. ಅವರ ಜನಪರ ಕಾರ್ಯ ಯಲಬುರ್ಗಾ ಕ್ಷೇತ್ರಕ್ಕೆ ಇನ್ನು ಹೆಚ್ಚಿನದಾಗಲಿ ಸಿಗಲಿ ಎಂದು ಅಯ್ಯಪ್ಪಸ್ವಾಮಿ ದೇವರಲ್ಲಿ ಮೊರೆಯಿಡುತ್ತಿದ್ದೇವೆ.

ಮಂಜು ಭಜಂತ್ರಿ, ಅಯ್ಯಪ್ಪಸ್ವಾಮಿ ಮಾಲಾಧಾರಿ, ಕುಕನೂರು

Follow Us:
Download App:
  • android
  • ios