ಕರ್ನಾಟ ವಿಧಾನಸಭಾ ಚುನಾವಣೆ 2023ರ ಚುನಾವಣಾ ಪೂರ್ವ ಜನಮತ ಯಾರಿಗೆ ಎಂಬುದರ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಿಂದ ನಡೆಸಲಾದ ಸಮೀಕ್ಷೆಯ ಪ್ರಾದೇಶಿಕವಾರು ಪಕ್ಷಗಳ ಬಲಾಬಲ ಇಲ್ಲಿದೆ.

ಬೆಂಗಳೂರು (ಮೇ 4): ರಾಜ್ಯ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ನೇರ, ದಿಟ್ಟ, ನಿರಂತರ ಸುದ್ದಿ ಪ್ರಸಾರ ಮಾಡುವ ಸುವರ್ಣ ನ್ಯೂಸ್‌ ವತಿಯಿಂದ ಜನ್‌ಕಿ ಬಾತ್‌ ಸುವರ್ಣ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎಂಬುದನ್ನು ಎರಡನೇ ಬಾರಿಗೆ ಸಂಪೂರ್ಣ ವರದಿಯನ್ನು ಸಿದ್ಧಪಡಿಸಲಾಗಿದೆ. ಇನ್ನು ರಾಜ್ಯದ ಪ್ರಾದೇಶಿಕ ವಿಭಾಗವಾರು ಯಾವ ಪಕ್ಷ ಎಷ್ಟು ಬಲವನ್ನು ಹೊಂದಲಿದೆ ಎಂಬ ಸಮೀಕ್ಷೆ ವರದಿ ಇಲ್ಲಿದೆ ನೋಡಿ..

Add Asianetnews Kannada as a Preferred SourcegooglePreferred

ರಾಷ್ಟ್ರೀಯ ವಾಹಿನಿಗಳು ನಡೆಸುವ ಸಮೀಕ್ಷೆಗಿಂತಲೂ ಸುವರ್ಣ ನ್ಯೂಸ್ ಸಮೀಕ್ಷೆ ಬಗ್ಗೆ ರಾಜ್ಯದ ಜನತೆಗೆ ಅಪಾರ ನಂಬಿಕೆ ಮತ್ತು ವಿಶ್ವಾಸ. ಶೇ.92ರಷ್ಟು ಭವಿಷ್ಯ ನುಡಿದ ಮಾಧ್ಯಮ ಸಂಸ್ಥೆ ನಮ್ಮದು. ಇದೀಗ ಈ ಬಾರಿ ಕರ್ನಾಟಕ ಚುನಾವಣೆಯ ಮೊದಲ ಹಂತದ ಚುನಾವಣಾ ಪೂರ್ವ ಸಮೀಕ್ಷೆಯನ್ನು ಈಗಾಗಲೇ ಏ.14ರಂದು ಜನರ ಮುಂದಿಡಲಾಗಿತ್ತು. ಈಗ 2ನೇ ಹಂತದ ಸಮೀಕ್ಷೆಯನ್ನು ಮಾರ್ಚ್-15 ರಿಂದ ಮೇ 01ರವರೆಗೆ ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು ಜನರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಎಲ್ಲ 224 ಕ್ಷೇತ್ರಗಳ ಮತದಾರರ ನಾಡಿ ಮಿಡಿತವನ್ನು ಹಿಡಿದಿಟ್ಟು, 2ನೇ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಿಮ್ಮ ಮುಂದೆ ಇಡಲಾಗುತ್ತಿದೆ.

Jan Ki Baat Suvarna News Survey: ಹೇಗೆ ನಡೆಯಿತು ಸಮೀಕ್ಷೆಯ ಮಹಾಸಮರ!

ರಾಜ್ಯದಲ್ಲಿ ಯಾವ ಪಕ್ಷಕ್ಕೆ ಅಧಿಕಾರ? 
ಸುವರ್ಣ ನ್ಯೂಸ್‌ನಲ್ಲಿ ಕುರುಕ್ಷೇತ್ರದ ಮಹಾ ನಂಬರ್ ಯಾರಿಗೆ ಸಿಗುತ್ತದೆ. 2023ಕ್ಕೆ ಸ್ವತಂತ್ರ ಸರ್ಕಾರ ಬರುತ್ತದೆಯೇ ಅಥವಾ ಮತ್ತೆ ಅತಂತ್ರ ಸರ್ಕಾರ ಬಂದು ರೆಸಾರ್ಟ್‌ ರಾಜಕಾರಣ ನಡೆಯುತ್ತದೆಯೇ ಎಂಬುದು ತೀವ್ರ ಕುತೂಹಲ ಕೆರಳಿದೆ. ಇನ್ನು ರಾಜ್ಯ ರಾಜಕೀಯದ ಪಕ್ಕಾ ಲೆಕ್ಕ ನಮ್ಮಲ್ಲಿ ಮಾತ್ರ ಇದೆ. ಇನ್ನು ಯಾವೊಂದು ಖಾಸಗಿ ಸಂಸ್ಥೆಯ ಮೊರೆಯನ್ನೂ ಹೋಗದೇ ನೇರವಾಗಿ ಜನರ ಬಳಿಯಿಂದಲೇ ಸಂಗ್ರಹಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ. ಇನ್ನು ಸುವರ್ಣ ನ್ಯೂಸ್‌ ವರದಿಯಂತೆಯೇ ಬಿಜೆಪಿ ಮತ್ತೆ ಅಧಿಕಾರ ಹಿಡಿದು ಗದ್ದುಗೆ ಏರುತ್ತಾ? ಕಾಂಗ್ರೆಸ್ ನಾಯಕರ ಪ್ಲಾನ್ ವರ್ಕೌಟ್ ಆಗುತ್ತಾ? ಅಥವಾ 2 ರಾಷ್ಟ್ರೀಯ ಪಕ್ಷಗಳ ಮಧ್ಯೆ ಜೆಡಿಎಸ್ ಯೋಜನೆ ಏನು ಎಂಬುದರ ಲೆಕ್ಕ ಇಲ್ಲಿದೆ.

ರಾಜ್ಯದ ಪ್ರಾದೇಶಿಕ ವಿಭಾಗವಾರು ಪಕ್ಷಗಳ ಬಲಾಬಲ ಹೀಗಿದೆ.
ಹಳೇ ಮೈಸೂರು - 57 ಕ್ಷೇತ್ರಗಳು

  • ಪಕ್ಷಗಳು ಮೊದಲ ಸಮೀಕ್ಷೆ ಹೊಸ ಸಮೀಕ್ಷೆ
  • ಬಿಜೆಪಿ 12 14
  • ಕಾಂಗ್ರೆಸ್ 23 26
  • ಜೆಡಿಎಸ್ 22 17
  • ಇತರೆ 00 00

ಕಲ್ಯಾಣ (ಹೈದರಾಬಾದ್‌) ಕರ್ನಾಟಕ - 40 ಕ್ಷೇತ್ರ

  • ಪಕ್ಷಗಳು ಮೊದಲ ಸಮೀಕ್ಷೆ ಹೊಸ ಸಮೀಕ್ಷೆ
  • ಬಿಜೆಪಿ 16 16
  • ಕಾಂಗ್ರೆಸ್ 23 21
  • ಜೆಡಿಎಸ್ 01 03
  • ಇತರೆ 00 00

ಬೆಂಗಳೂರಲ್ಲಿ ಮೋದಿ ಮೆಗಾ ರೋಡ್‌ ಶೋ ಸಮಯ ಬದಲಾವಣೆ

ಮಧ್ಯ ಕರ್ನಾಟಕ - 26 ಕ್ಷೇತ್ರ

  • ಪಕ್ಷಗಳು ಮೊದಲ ಸಮೀಕ್ಷೆ ಹೊಸ ಸಮೀಕ್ಷೆ
  • ಬಿಜೆಪಿ 13 13
  • ಕಾಂಗ್ರೆಸ್ 12 11
  • ಜೆಡಿಎಸ್ 01 02
  • ಇತರೆ 00 00

ಗ್ರೇಟರ್ ಬೆಂಗಳೂರು- 32 ಕ್ಷೇತ್ರಗಳು

  • ಪಕ್ಷಗಳು ಮೊದಲ ಸಮೀಕ್ಷೆ ಹೊಸ ಸಮೀಕ್ಷೆ
  • ಬಿಜೆಪಿ 15 15
  • ಕಾಂಗ್ರೆಸ್ 14 14
  • ಜೆಡಿಎಸ್ 03 03
  • ಇತರೆ 00 00

ಕಿತ್ತೂರು (ಮುಂಬೈ) ಕರ್ನಾಟಕ - 50 ಕ್ಷೇತ್ರ

  • ಪಕ್ಷಗಳು ಮೊದಲ ಸಮೀಕ್ಷೆ ಹೊಸ ಸಮೀಕ್ಷೆ
  • ಬಿಜೆಪಿ 31 31
  • ಕಾಂಗ್ರೆಸ್ 19 18
  • ಜೆಡಿಎಸ್ 00 01
  • ಇತರೆ 00 00

ಕರಾವಳಿ ಕರ್ನಾಟಕ - 19 ಕ್ಷೇತ್ರ

  • ಪಕ್ಷಗಳು ಮೊದಲ ಸಮೀಕ್ಷೆ ಹೊಸ ಸಮೀಕ್ಷೆ
  • ಬಿಜೆಪಿ 16 35
  • ಕಾಂಗ್ರೆಸ್ 03 04
  • ಜೆಡಿಎಸ್ 00 00
  • ಇತರೆ 00 00