Jan Ki Baat Suvarna News Survey: ಹೇಗೆ ನಡೆಯಿತು ಸಮೀಕ್ಷೆಯ ಮಹಾಸಮರ!
ಜನ್ ಕೀ ಬಾತ್ ಹಾಗೂ ಸುವರ್ಣ ನ್ಯೂಸ್ ಮಹಾ ಸಮೀಕ್ಷೆ ಬಂದಿದೆ. ಪ್ರಧಾನಿ ನರೇಂದ್ರ ಚುನಾವಣಾ ಅಖಾಡಕ್ಕೆ ಇಳಿದ ಬಳಿಕ ಆಗಿರೋ ಬದಲಾವಣೆಗಳ ಬಗ್ಗೆ ಈ ಸಮೀಕ್ಷೆ ಸಂಪೂರ್ಣ ಮಾಹಿತಿ ನೀಡಿದೆ.
ಬೆಂಗಳೂರು (ಮೇ4): ಕರ್ನಾಟಕ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ. ಮತದಾನದ ದಿನಾಂಕ ಸಮೀಪ ಬರುತ್ತಿರುವ ನಡುವೆ ಅಭ್ಯರ್ಥಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಸಮೀಕ್ಷೆಯ ಬಿಸಿ ಕೂಡ ತಾಕುತ್ತಿದೆ. ಜನ್ ಕೀ ಬಾತ್ ಹಾಗೂ ಸುವರ್ಣ ನ್ಯೂಸ್ ಸಮೀಕ್ಷೆ ಕೇವಲ ಸರ್ವೆಯಲ್ಲ. ಇದು ಜನರ ನಾಡಿಮಿಡಿತ. ಪ್ರತಿ ಬಾರಿಯೂ ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಜನ್ ಕೀ ಬಾತ್ ನಿಖರ ನಂಬರ್‌ಗಳೊಂದಿಗೆ ಜನರ ಮುಂದೆ ಬಂದಿದೆ. 2008 ಹಾಗೂ 2013ರ ಸಮೀಕ್ಷೆಗಳು ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿದ್ದವು. ಈ ಬಾರಿಯೂ ರಾಜ್ಯದಲ್ಲಿ ಜನ್ ಕೀ ಬಾತ್ ಹಾಗೂ ಸುವರ್ಣ ನ್ಯೂಸ್ ಏಪ್ರಿಲ್ 14 ರಂದು ಸಮೀಕ್ಷೆ ನಡೆಸಿ ನಂಬರ್‌ಗಳನ್ನು ಹೇಳಿತ್ತು. ಆಗ ರಾಜ್ಯದಲ್ಲಿ ಅಷ್ಟಾಗಿ ಬೆಳವಣಿಗೆಗಳು ನಡೆದಿರಲಿಲ್ಲ. ಅಭ್ಯರ್ಥಿಗಳ ಆಯ್ಕೆ, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಬಿಜೆಪಿ ತೊರೆದ ಸಂಗತಿಗಳೂ ಆಗಿರಲಿಲ್ಲ. ಈ ಸಮೀಕ್ಷೆ ನಡೆದಿರುವುದು ಏಪ್ರಿಲ್ 15 ರಿಂದ ಮೇ. 1ರವರೆಗಿನ ಅವಧಿಯಲ್ಲಿ. ಸುವರ್ಣ ನ್ಯೂಸ್‌ನಿಂದಲೇ ಈ ಸಮೀಕ್ಷೆ ನಡೆಸಲಾಗಿದೆ. ಮೂರೂ ಪಕ್ಷದಿಂದ ಅಭ್ಯರ್ಥಿಗಳು ಘೋಷಣೆಯಾದ ಬಳಿಕ ಈ ಸಮೀಕ್ಷೆ ನಡೆದಿದೆ. ರಾಜ್ಯದ 224 ಕ್ಷೇತ್ರದಲ್ಲೂ ಸುವರ್ಣ ನ್ಯೂಸ್ ಪ್ರತಿನಿಧಿಗಳಿಂದ ಸರ್ವೇ ಕಾರ್ಯ ಮಾಡಲಾಗಿದೆ. 30 ಸಾವಿರ ಮತದಾರರಿಂದ ಮಾಹಿತಿ ಸಂಗ್ರಹಿಸಿದ ನಮ್ಮ ಪ್ರತಿನಿಧಿಗಳು ಅದನ್ನು ಸಮೀಕ್ಷೆಗೆ ನೀಡಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಕ್ಷೇತ್ರವಾರು ಹಾಗೂ ಜಾತಿವಾರು ಅಭಿಪ್ರಾಯಗಳನ್ನೂ ಸಂಗ್ರಹ ಮಾಡಲಾಗಿದೆ. ಕರ್ನಾಟಕದ ವಲಯವಾರು ಸೋಲು-ಗೆಲುವಿನ ಮಾಹಿತಿ ಕೂಡ ಜನ್ ಕೀ ಬಾತ್ ಸುವರ್ಣ ನ್ಯೂಸ್ ಸರ್ವೇಯಲ್ಲಿದೆ. ಕರ್ನಾಟಕದ ಆರು ವಲಯದಲ್ಲಿ ಸೋಲು ಗೆಲುವಿನ ಲೆಕ್ಕಾಚಾರವನ್ನೂ ಸಮೀಕ್ಷೆಯಲ್ಲಿ ಮಾಡಲಾಗಿದೆ. ಏಪ್ರಿಲ್ 15 ರಿಂದ ಮೇ.1ರವರೆಗೆ ನಡೆದ ರಾಜಕೀಯ ಬೆಳವಣಿಗೆಗಳು ಜನರ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ. ಇದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಆಗುವ ಲಾಭ ನಷ್ಟದ ಲೆಕ್ಕಾಚಾರವನ್ನು ತಿಳಿಸಲಾಗಿದೆ.
Jan Ki Baat Suvarna Survey: ಫಲಿತಾಂಶಕ್ಕೂ ಮುನ್ನವೇ ಜನ್ ಕಿ ಬಾತ್ ಹೇಳುತ್ತೆ ನಿಖರ ನಂಬರ್ಸ್!
ಅಭ್ಯರ್ಥಿಗಳ ಆಯ್ಕೆಯಲ್ಲಿ ಮೂರೂ ಪಕ್ಷದಲ್ಲಿ ಆದ ಗೊಂದಲಗಳು, ಬಂಡಾಯ ಅಭ್ಯರ್ಥಿಗಳಿಂದ ಪಕ್ಷಕ್ಕೆ ಆಗುವ ನಷ್ಟಗಳು, ಟಿಕೆಟ್ ಸಿಗದೇ ಇದ್ದವರು ಪಕ್ಷೇತರರಾಗಿ ಸ್ಪರ್ಧೆ ಮಾಡುವ ಮೂಲಕ ಯಾವೆಲ್ಲಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳಿಗೆ ಹೊಡೆತ ಬೀಳಲಿದೆ ಎನ್ನುವ ಲೆಕ್ಕಾಚಾರಗಳು ಈ ಸಮೀಕ್ಷೆಯಲ್ಲಿದೆ. ಈ ಸಮೀಕ್ಷೆ ಮಾಡುವ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಪ್ರಚಾರ ಅಭಿಯಾನ ಆರಂಭವಾಗಿತ್ತು. ಅದಲ್ಲದೆ, ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದವು. ಇವುಗಳು ಪಕ್ಷದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಎನ್ನುವ ಅಂಶಗಳು ಇದರಲ್ಲಿ ಗೋಚರವಾಗುವ ಸಾಧ್ಯತೆ ಕಡಿಮೆ.
Jan Ki Baat Suvarna Survey: ಪ್ರಾದೇಶಿಕ ವಿಭಾಗವಾರು ಪಕ್ಷಗಳ ಬಲಾಬಲವೆಷ್ಟು?
ಏನೆಲ್ಲಾ ಪ್ರಶ್ನೆಗಳಿತ್ತು: ಜನರ ಮುಂದೆ ಹೋಗುವಾಗ ಕೆಲವೊಂದು ಪ್ರಶ್ನೆಗಳನ್ನೂ ಅವರ ಮುಂದೆ ಇಡಲಾಗಿತ್ತು. ಈಗಿನ ರಾಜ್ಯ ಸರ್ಕಾರದ ಕೆಲಸಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಬಸವರಾಜ್ ಬೊಮ್ಮಾಯಿ ಅವವರು ಮುಖ್ಯಮಂತ್ರಿಯಾಗಿ ಹೇಗೆ ಕೆಲಸ ಮಾಡಿದ್ದಾರೆ? ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕಿದ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ? 2018ರಲ್ಲಿ ನೀವು ಯಾವ ಪಕ್ಷಕ್ಕೆ ವೋಟ್ ಹಾಕಿದ್ದೀರಿ? 2023ರಲ್ಲಿ ನೀವು ಯಾವ ಪಕ್ಷಕ್ಕೆ ಆದ್ಯತೆ ನೀಡುತ್ತೀರಿ? 2023ರಲ್ಲಿ ಮತದಾನ ಮಾಡುವ ವೇಳೆ ಯಾವ ವಿಚಾರ ನಿಮಗೆ ಮುಖ್ಯವಾಗುತ್ತದೆ? ಈ ಮೂರು ಪಕ್ಷಗಳಲ್ಲಿ ವೋಟ್ ಹಾಕಬೇಕಾದರೆ, ಯಾವ ಪಕ್ಷಕ್ಕೆ ಯಾವ ಕಾರಣಕ್ಕಾಗಿ ಆದ್ಯತೆ ನೀಡುತ್ತೀರಿ? ನರೇಂದ್ರ ಮೋದಿ ಅವರ ಜನಪ್ರಿಯತೆ ಈ ಚುನಾವಣೆಯಲ್ಲಿ ವರ್ಕೌಟ್ ಆಗುತ್ತಾ? ಕರ್ನಾಟಕದಲ್ಲಿ ಯಾವ ಪಕ್ಷ ಹೆಚ್ಚು ಭ್ರಷ್ಟ? ಸೇರಿದಂತೆ ಇನ್ನೂ ಹಲವು ಪ್ರಶ್ನೆಗಳನ್ನು ಇರಿಸಿಕೊಂಡು ಸಮೀಕ್ಷೆ ಮಾಡಲಾಗಿತ್ತು.