DK Shivakumar political statement ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರೊಂದಿಗೆ ಬಂಡೆಯಂತೆ ನಿಂತಿದ್ದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯ ಹಾಕಿದ ಹಾದಿಯಲ್ಲೇ ಈಗಿನ ಸರ್ಕಾರ ನಡೆಯುತ್ತಿದೆ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.
ಹಾವೇರಿ (ನ.28): ಸಿದ್ದರಾಮಯ್ಯ(Siddaramaiah) ಅವರು ಮುಖ್ಯಮಂತ್ರಿ(Chief Minister) ಆಗಿದ್ದಾಗ ಅವರೊಂದಿಗೆ ನಾನು ಬಂಡೆಯಂತೆ ನಿಂತಿದ್ದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(CM DK Shivakumar) ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಹಾಕಿದ ಹಾದೀಲೆ ಈಗಿನ ಸರ್ಕಾರ ನಡೆಯುತ್ತಿದೆ
ಕಾಗಿನೆಲೆಯಲ್ಲಿ ನಡೆದ ಕನಕದಾಸರ ಜಯಂತಿ(Kanakadas jayanti) ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಸಿದ್ದರಾಮಯ್ಯ ಅವರ ಜತೆ ನಾನು ಒಂದು ಬಂಡೆಯಂತೆ ನಿಂತಿದ್ದು ನಿಮಗೆ ಅರಿವು ಇದೆ. ನಮ್ಮ ಪಕ್ಷದ ಆದೇಶದಂತೆ ನನಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಹಾಕಿದ ಹಾದಿಯಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ನಡೆಯುತ್ತಿದೆ. ನನ್ನ ಅಧಿಕಾರ ಅವಧಿಯಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.
ನಾನು ನಿಮ್ಮ ಪ್ರಜಾ ಸೇವಕನಾಗಿ ಆಡಳಿತ ಮುಂದುವರಿಸುತ್ತೇನೆ. ನಿಮ್ಮೆಲ್ಲರ ಸೇವೆಯನ್ನು ನಾನು ಪ್ರಾಮಾಣಿಕವಾಗಿ ಮಾಡುವೆ. ನಾನು ಕೂಡ ನಿಮ್ಮವನೇ, ನಿಮ್ಮ ಆರ್ಶಿವಾದ ಸದಾ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗ ಯಾರೂ ಹಸಿವಿನಿಂದ ಇರಬಾರದು ಅಂದರು. ಅದರಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ಬೆಲೆ ಏರಿಕೆ ಗಗನಕ್ಕೆ ಏರಿದೆ. ಆದಾಯ ಪಾತಾಳಕ್ಕೆ ಕುಸಿದಿದೆ. ಜಿಲ್ಲೆಯಲ್ಲಿ 7 ಜನರ ಶಾಸಕರನ್ನು ಆಯ್ಕೆ ಮಾಡಿ ಶಕ್ತಿ ಕೊಟ್ಟಿದ್ದೀರಿ ಎಂದು ಹೇಳಿದರು.
ದೊರೆ ಎನ್ನುವ ಬದಲು ಪ್ರಜಾಸೇವಕ ಅನ್ನಿ: ಡಿಕೆ
ನನ್ನನ್ನು ನಾಡಿನ ದೊರೆ, ರಾಜ ಎಂದು ಕರೆಯುವುದಕ್ಕಿಂತ ಪ್ರಜಾ ಸೇವಕ ಎಂದು ಕರೆಯಬೇಕು. ನಿಮ್ಮ ಸೇವಕನಾಗಿ ಪ್ರಾಮಾಣಿಕವಾಗಿ ನನ್ನ ಕೆಲಸ ಮುಂದುವರಿಸುವೆ ಎಂದು ಸಿಎಂ ಹೇಳಿದರು. ಹಾವೇರಿಯಲ್ಲಿ ನಡೆದ ಕನಕದಾಸರ ಜಯಂತಿಯಲ್ಲಿ ಮಾತನಾಡಿದ ಅವರು, ಕನಕದಾಸರು 300ಕ್ಕೂ ಹೆಚ್ಚು ಕೀರ್ತನೆ ರಚಿಸಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ನೀಡಿದ್ದಾರೆ. ಸಮಾಜ ಸೇವೆಗೆ ಅವರದೇ ಆದ ಸಂದೇಶ ನೀಡಿದ್ದು, ಇದೇ ಕಾಂಗ್ರೆಸ್ ಸರ್ಕಾರದ ಧ್ಯೇಯವಾಗಿದೆ ಎಂದರು.
ಅಕ್ಷರಗಳ ಮೂಲಕ ಅರಿವು ನೀಡಿ, ಕೀರ್ತನೆಗಳ ಮೂಲಕ ಭಕ್ತಿ ಬೆಳೆಸಿ, ವಿಚಾರಗಳ ಮೂಲಕ ಸಮಾಲೋಚನೆ ಜಾಗೃತಿ ಮೂಡಿಸಿದ ಮಹಾನ್ ಚೇತನ ಕನಕದಾಸರು ಎಂದು ಸ್ಮರಿಸಿದರು.
ಪ್ರಜಾಸೇವಕನಾಗಿ ನನ್ನ ಅಧಿಕಾರ ಅವಧಿಯಲ್ಲಿ ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ಕೊಂಡೊಯ್ಯುವ ಕೆಲಸ ಮಾಡಲಾಗುವುದು. ನನ್ನನ್ನು ನಾಡಿನ ದೊರೆ, ರಾಜ ಎಂದು ಕರೆಯುವುದಕ್ಕಿಂತ ಪ್ರಜಾ ಸೇವಕ ಎಂದು ಕರೆಯಬೇಕು. ನಿಮ್ಮ ಸೇವಕನಾಗಿ ಪ್ರಾಮಾಣಿಕವಾಗಿ ನನ್ನ ಕೆಲಸ ಮುಂದುವರಿಸುಕೊಂಡು ಹೋಗುವೆ ಎಂದು ಹೇಳಿದರು.














