ಸುರ್ಜೇವಾಲಾ, ಶೆಟ್ಟರ್‌ ಭೇಟಿ: ಸ್ಥಾನಮಾನದ ಕುರಿತು ಚರ್ಚೆ

ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಶೆಟ್ಟರ್‌ ಅವರಿಗೆ ಸಂಪುಟದಲ್ಲಿ ಅವಕಾಶ ಸಿಗದ ಕಾರಣ ಬೇಸರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಶೆಟ್ಟರ್‌ ಅವರನ್ನು ಸಮಾಧಾನಗೊಳಿಸಿದ್ದು, ಅವಕಾಶ ದೊರೆತಾಗ ವಿಧಾನಪರಿಷತ್‌ ಸದಸ್ಯರಾಗಲು ಒಪ್ಪಿ. ಪಕ್ಷಕ್ಕೆ ಪರಿಷತ್ತಿನಲ್ಲಿ ಸ್ಥಾನ ಬಲ ಬಂದಾಗ ಸಭಾಪತಿ ಹುದ್ದೆ ನೀಡಲಾಗುವುದು ಎಂದು ಭರವಸೆ ನೀಡಿದರು ಎನ್ನಲಾಗಿದೆ. 

Jagadish Shettar Met Randeep Singh Surjewala grg

ಬೆಂಗಳೂರು(ಜೂ.13):  ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಸೋಮವಾರ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದು, ಇದರ ಪರಿಣಾಮ ಶೆಟ್ಟರ್‌ ಅವರ ಹೆಸರು ವಿಧಾನ ಪರಿಷತ್‌ ಸ್ಥಾನಕ್ಕೆ ಪ್ರಬಲವಾಗಿ ಕೇಳಿ ಬಂದಿದೆ.

ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಶೆಟ್ಟರ್‌ ಅವರಿಗೆ ಸಂಪುಟದಲ್ಲಿ ಅವಕಾಶ ಸಿಗದ ಕಾರಣ ಬೇಸರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಶೆಟ್ಟರ್‌ ಅವರನ್ನು ಸಮಾಧಾನಗೊಳಿಸಿದ್ದು, ಅವಕಾಶ ದೊರೆತಾಗ ವಿಧಾನಪರಿಷತ್‌ ಸದಸ್ಯರಾಗಲು ಒಪ್ಪಿ. ಪಕ್ಷಕ್ಕೆ ಪರಿಷತ್ತಿನಲ್ಲಿ ಸ್ಥಾನ ಬಲ ಬಂದಾಗ ಸಭಾಪತಿ ಹುದ್ದೆ ನೀಡಲಾಗುವುದು ಎಂದು ಭರವಸೆ ನೀಡಿದರು ಎನ್ನಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಕೇಂದ್ರದಿಂದ ಸ್ಪರ್ಧಿಸಿ ಪರಾಜಿತರಾಗಿದ್ದರೂ ಶೆಟ್ಟರ್‌ ಅವರ ಪ್ರಭಾವದಿಂದಾಗಿ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಲಾಭವಾಗಿತ್ತು. ಈ ಹಿನ್ನೆಲೆಯಲ್ಲಿ ಶೆಟ್ಟರ್‌ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲು ಹೈಕಮಾಂಡ್‌ ಒಲವಿದೆ.

ಬೋಸರಾಜು, ಶೆಟ್ಟರ್‌, ಚಿಂಚನಸೂರು ಸೇರಿ 6 ಜನ ಮೇಲ್ಮನೆಗೆ?

ಯಾವ ಸ್ಥಾನ ಕೊಟ್ಟರೂ ನಿಭಾಯಿಸುವೆ:

ಸುರ್ಜೇವಾಲಾ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್‌. ‘ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ಸ್ಥಾನಮಾನ ನೀಡುವ ಬಗ್ಗೆ ಚರ್ಚೆಯಾಗಿಲ್ಲ. ಪಕ್ಷ ವಹಿಸಿದ ಜವಾಬ್ದಾರಿ ನಿರ್ವಹಿಸುತ್ತೇನೆ. ಪರಿಷತ್‌ ಸದಸ್ಯ ಸ್ಥಾನ ಸೇರಿದಂತೆ ಯಾವ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಕಾಂಗ್ರೆಸ್‌ನವರು ಕೊಟ್ಟಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಪಕ್ಷ ಸೇರಿದ್ದು ಸಮಾಧಾನ ತಂದಿದೆ’ ಎಂದು ಸ್ಪಷ್ಟಪಡಿಸಿದರು.

ಅಲ್ಲದೆ, ಲೋಕಸಭಾ ಚುನಾವಣೆ ಸಾಮೀಪ್ಯ ಹಿನ್ನೆಲೆಯಲ್ಲಿ ಶೆಟ್ಟರ್‌ ಅವರಿಗೆ ಉತ್ತಮ ಸ್ಥಾನ ನೀಡಿದರೆ ಲಿಂಗಾಯತ ಸಮುದಾಯದ ಒಲವು ಗಳಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಶೆಟ್ಟರ್‌ ಅವರೊಂದಿಗೆ ಮಾತುಕತೆ ನಡೆಸಿದ್ದು, ಪರಿಷತ್‌ ಸ್ಥಾನದ ಅಭಯ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

Latest Videos
Follow Us:
Download App:
  • android
  • ios