ಬಿಜೆಪಿ ನಾಯಕರು ಭಯ ಪಡಲಿಕ್ಕೆ ಸಿದ್ದರಾಮಯ್ಯ ಅವರೇನು ಹುಲಿನಾ, ಅವರು ಕೂಡ ನಮ್ಮಂತೆ ಮನುಷ್ಯರಲ್ಲವೇ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್‌ ನೀಡಿದರು.

ಚಿಕ್ಕಬಳ್ಳಾಪುರ (ನ.2): ಬಿಜೆಪಿ ನಾಯಕರು ಭಯ ಪಡಲಿಕ್ಕೆ ಸಿದ್ದರಾಮಯ್ಯ ಅವರೇನು ಹುಲಿನಾ, ಅವರು ಕೂಡ ನಮ್ಮಂತೆ ಮನುಷ್ಯರಲ್ಲವೇ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್‌ ನೀಡಿದರು.

ಎಂಟಿಬಿ ಹೇಳಿಕೆ ಮುಂದಿಟ್ಟುಕೊಂಡು ಹೋರಾಟಕ್ಕೆ ಮುಂದಾದ ಕಾಂಗ್ರೆಸ್

ನಗರದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ನಾ ಕಂಡರೆ ಭಯ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಂಟಿಬಿ ನಾಗರಾಜ್‌, ಯಾರು, ಯಾರನ್ನ ಕಂಡರೂ ಭಯ ಇಲ್ಲ. ನಾವು ಹುಲಿಗಳಲ್ಲ, ಸಿದ್ದರಾಮಯ್ಯ ಕೂಡ ಹುಲಿ ಅಲ್ಲ. ನಾವೆಲ್ಲಾ ಮನುಷ್ಯರೆಂದರು.

ಹೊರಗುತ್ತಿಗೆ ಕಾರ್ಮಿಕರಿಗೆ ಹೆಚ್ಚುವರಿ ವೇತನ

ಆದೇ ರೀತಿ 14, 15 ವರ್ಷಗಳಿಂದ ಟ್ರಕ್‌ ಲೋಡ​ರ್‍ಸ್, ಟ್ರಕ್‌ ಚಾಲಕರು, ವಾಲ್ವಮೆನ್‌ಗಳು, ಕಂಪ್ಯೂಟರ್‌ ಅಪರೇಟರ್‌ಗಳು ಸೇರಿ ಸುಮಾರು 4.600 ಪೌರ ಕಾರ್ಮಿಕರು ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಾಯಂಗೊಳಿಸುವವರೆಗೆ ಹೆಚ್ಚುವರಿಯಾಗಿ 5,000 ಸಾವಿರ ರು, ವೇತನ ನೀಡಲು ತಿರ್ಮಾನಿಸಲಾಗಿದೆ ಎಂದರು.

ನನ್ನನ್ನು ಸೇರಿಸಿ ತನಿಖೆ ಮಾಡಲಿ:ಎಂಟಿಬಿ

ಕೆ.ಆರ್‌.ಪುರಂ ಠಾಣೆ ಸಿಪಿಐ ನಂದೀಶ್‌ ಆತ್ಮಹತ್ಯೆ ವಿಚಾರದಲ್ಲಿ ನೀಡಿರುವ ತಮ್ಮ ಹೇಳಿಕೆ ವಿವಾದ ಎದ್ದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾನು ಮುಚ್ಚುಮರೆ ಇಲ್ಲದೇ ಮಾತನಾಡಿದ್ದೇನೆ. ನನ್ನನ್ನು ಸೇರಿಸಿ ಈ ಬಗ್ಗೆ ತನಿಖೆ ನಡೆಸಲಿ. ನಾನು ಎಲ್ಲೂ ಇಂತಹವರು ಹಣ ಕೊಟ್ಟಿದ್ದಾರೆ. ಇಂತಹವರು ಹಣ ಪಡೆದಿದ್ದಾರೆ ಎಂದು ಎಲ್ಲಯೂ ಹೇಳಿಲ್ಲ ಎಂದರು. ಅಮಾನತುಗೊಂಡಿದ್ದ ಇನ್ಸ್‌ಪೆಕ್ಟರ್ ಸಾವು , ಪೊಲೀಸ್ ಆಯುಕ್ತ ರೆಡ್ಡಿ ವಿರುದ್ದ ಸಚಿವ ಎಂಟಿಬಿ ಗರಂ