ಅಮಾನತುಗೊಂಡಿದ್ದ ಇನ್ಸ್‌ಪೆಕ್ಟರ್ ಸಾವು , ಪೊಲೀಸ್ ಆಯುಕ್ತ ರೆಡ್ಡಿ ವಿರುದ್ದ ಸಚಿವ ಎಂಟಿಬಿ ಗರಂ
ಇತ್ತೀಚೆಗಷ್ಟೇ ಅಮಾನತ್ತಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದು, ಅಮಾನತ್ತಾದ ಬಳಿಕ ಮಾನಸಿಕವಾಗಿ ಕುಗ್ಗಿದ ನಂದೀಶ್ ಅನಾರೋಗ್ಯಕ್ಕೀಡಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆನ್ನಲಾಗುತ್ತಿದೆ.
ಕೆ. ಆರ್.ಪುರಂ(ಅ.27): ಕೆಲ ದಿನಗಳ ಹಿಂದಷ್ಟೆ ಪಬ್ ವೊಂದು ತಡರಾತ್ರಿ ನಡೆಯುತ್ತಿದ್ದಕ್ಕೆ ಕೆ.ಆರ್.ಪುರಂ ಠಾಣೆ ಇನ್ಸ್‌ಪೆಕ್ಟರ್ ನಂದೀಶ್ ಸಹಕಾರವಿತ್ತು ಎಂಬ ವಿಚಾರವಾಗಿ ಅಮಾನತ್ತುಗೊಂಡಿದ್ದರು, ಇದರಿಂದ ಮಾನಸಿಕವಾಗಿ ಕುಗ್ಗಿದ ವೈಟ್ ಫೀಲ್ಡ್ ವಿಭಾಗದ ಕೆಆರ್ ಪುರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ನಂದೀಶ್ ಅನಾರೋಗ್ಯಕ್ಕೀಡಾಗಿ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ, ಅಂತಿಮ ದರ್ಶನ ಪಡೆದ ಸಚಿವ ಎಂಟಿಬಿ ನಾಗರಾಜ್ ಹಾಗೂ ಮಾಜಿ ಸಚಿವ ಹೆಚ್.ವಿಶ್ವನಾಥ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೆಆರ್ ಪುರ ಶ್ರೀ ಲಕ್ಷ್ಮಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು, ಮನೆ ಬಳಿ ಆಗಮಿಸಿದಾಗ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು, ಈ ವೇಳೆ ಕುಟುಂಬದವರಿಗೆ ಸಾಂತ್ವನ ಹೇಳಲು ಪೌರ ಆಡಳಿತ ಸಚಿವ, ಎಂಟಿಬಿ ನಾಗರಾಜ್ ನಂದೀಶ್ ಅಮಾನತಿನ ಬಗ್ಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂದೀಶ್ ಅವರನ್ನು ಕೆಲ ದಿನಗಳ ಹಿಂದಷ್ಟೆ ಪಬ್ ವೊಂದರ ವಿಚಾರವಾಗಿ ಅಮಾನತ್ತುಗೊಳಿಸಿದ್ದಕ್ಕಾಗಿ ಕಿಡಿಕಾರಿದರು, ಇನ್ಸ್‌ಪೆಕ್ಟರ್ ನಂದೀಶ್ ಗೆ ನೊಟೀಸ್ ನೀಡಿ ಎಚ್ಚರಿಕೆ ನೀಡಬಹುದಿತ್ತು, ಏಕಾಏಕಿ ಅಮಾನತಿನ ಅಗತ್ಯವಿತ್ತಾ ಎಂದು ಪ್ರಶ್ನಿಸಿದರು
ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು ಒತ್ತಡದ ಜೀವನ ಸಾಗಿಸುತ್ತಿದ್ದಾರೆ ಎಂದರು. ಕುಟುಂಬಕ್ಕೆ ಆಧಾರವಾಗಿದ್ದ ನಂದೀಶ್ ಮರು ಬರಲು ಸಾಧ್ಯವಿಲ್ಲ. ಮೃತನ ಕುಟುಂಬಕ್ಕೆ ಸರ್ಕಾರ ಏನೇ ಮಾಡಿದ್ರೂ ಜೀವ ಕೊಡಲು ಸಾಧ್ಯವಿಲ್ಲವೆನ್ನುತ್ತಾ ಇದೀಗ ಆ ಕುಟುಂಬಕ್ಕೆ ಯಾರು ಹೊಣೆಯೆಂದು ಕಮೀಷನರ್ ಗೆ ಎಂಟಿಬಿ ಪ್ರಶ್ನಿಸಿದರು. ಕುಟುಂಬಕ್ಕೆ ಆಧಾರವಾಗಿದ್ದ ನಂದೀಶ್ ಅವರನ್ನು ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟುವಂತಿತ್ತು.
ಇನ್ಸ್‌ಪೆಕ್ಟರ್ ನಂದೀಶ್ ,HL, ಜನನ, 19-06-1978
ಇಲಾಖೆಗೆ ನೇಮಕಾತಿಯಾಗಿದ್ದು : ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕವಾದರು 15-09-2003.
ಇನ್ಸ್‌ಪೆಕ್ಟರ್ ಆಗಿ 29-11-2012 ಬಡ್ತಿ ಪಡೆದರು.
ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಹೇಸೂರು ಜೆ.ಪಿ ನಗರದಲ್ಲಿ ಜನಿಸಿದ್ದರು.
ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹನಿಟ್ರ್ಯಾಪ್, ರಾಜಕಾರಣಿ
ಇತ್ತೀಚೆಗೆ ಪಬ್ ವೊಂದು ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಮೇಲೆ ಅಮಾನತುಗೊಂಡಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಅದಾದ ನಂತರ ಆನೇಕಲ್‌ನಲ್ಲಿ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಅವಧಿ ಮೀರಿ ಪಬ್ ನಡೆಸಲು ಅವಕಾಶ ನೀಡಿದ ಆರೋಪದ ಮೇಲೆ ಸಸ್ಪೆಂಡ್ ಆಗಿದ್ದರು.
ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಎದೆ ನೋವು ಕಂಡುಬಂದಿದೆ. ನಂತರ ಕೆಆರ್ ಪುರಂನ ಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರ ಸಂಬಂಧಿ ಕೂಡ ಹೌದು.
ಅಮಾನತ್ತಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ತೀವ್ರ ಹೃದಯಾಘಾತದಿಂದ ಸಾವು
ಅಮಾನತ್ತಾಗಿದ್ಯಾಕೆ: ಅವಧಿ ಸಮಯ ಮೀರಿ ತಡರಾತ್ರಿಯವರೆಗೂ ತೆರೆದಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆ.ಆರ್. ಪುರ ಇನ್‌ಸ್ಪೆಕ್ಟರ್ ಎಚ್.ಎಲ್. ನಂದೀಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಟಾನಿಕ್ ಬಾರ್ ತಡರಾತ್ರಿ 2 ಗಂಟೆಯವರೆಗೂ ತೆರೆದಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರು, ದಾಳಿ ಮಾಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.