ಎಂಟಿಬಿ ಹೇಳಿಕೆ ಮುಂದಿಟ್ಟುಕೊಂಡು ಹೋರಾಟಕ್ಕೆ ಮುಂದಾದ ಕಾಂಗ್ರೆಸ್

ಪೋಲಿಸ್ ಇಲಾಖೆಯ ಭ್ರಷ್ಟಾಚಾರ ಅನಾವರಣಕ್ಕೆ ಸಚಿವರ ಹೇಳಿಕೆಯನ್ನೇ ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಸ್ಥಳ ನಿಯೋಜನೆಗೆ 70 ಲಕ್ಷ ಲಂಚ ನೀಡಲಾಗಿದೆ ಎಂಬ ಸಚಿವ ಎಂಟಿಬಿ ನಾಗರಾಜ್ ಹೇಳಿಕೆಯೇ ಕೈ ಪಡೆಗೆ ಹೊಸ ಅಸ್ತ್ರವಾಗಿದೆ.

Inspector Nandish Death case congress planning to protest against government gow

ಬೆಂಗಳೂರು (ಅ.29): ಅಮಾನತುಗೊಂಡಿದ್ದ ಕೆ.ಆರ್.ಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಎಚ್‌.ಎಲ್‌. ನಂದೀಶ್ ಹೃದಯಾಘಾತದಿಂದ ಗುರುವಾರ ಮೃತಪಟ್ಟ ಸಂದರ್ಭದಲ್ಲಿ 70-80 ಲಕ್ಷ ಕೊಟ್ಟು ಸ್ಥಳ ನಿಯೋಜನೆ ಮಾಡಲಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯ ಭ್ರಷ್ಟಾಚಾರ ಅನಾವರಣಕ್ಕೆ ಸಚಿವರ ಹೇಳಿಕೆಯನ್ನೇ ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಸ್ಥಳ ನಿಯೋಜನೆಗೆ 70 ಲಕ್ಷ ಲಂಚ ನೀಡಲಾಗಿದೆ ಎಂಬ ಸಚಿವ ಎಂಟಿಬಿ ನಾಗರಾಜ್ ಹೇಳಿಕೆಯೇ ಕೈ ಪಡೆಗೆ ಹೊಸ ಅಸ್ತ್ರವಾಗಿದ್ದು, ಎಂಟಿಬಿ ಹೇಳಿಕೆ ಮುಂದಿಟ್ಟುಕೊಂಡು ಹೋರಾಟಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಪೋಲಿಸ್ ಅಧಿಕಾರಿ ನಂದೀಶ್ ಸಾವು ಮತ್ತು ಸಚಿವರ ಹೇಳಿಕೆಯನ್ನ ಜ‌ನರ ಮುಂದಿಡಲು ಕೈ ಮುಖಂಡರು ತೀರ್ಮಾನಿಸಿದ್ದಾರೆ. ಗೃಹ ಇಲಾಖೆಯ ಭ್ರಷ್ಟಾಚಾರ ಮತ್ತು ಹಿರಿಯ ಅಧಿಕಾರಿಗಳ ಕಿರುಕುಳ ಕುರಿತು ಪ್ರಸ್ತಾಪಿಸಲು ನಿರ್ಧಾರ ಮಾಡಲಾಗಿದ್ದು, ಈ ಹಿಂದೆ ಪಿಎಸ್ಐ ಅಕ್ರಮ ನೇಮಕಾತಿ ವಿಚಾರ ಮುಂದಿಟ್ಟುಕೊಂಡು ಕೂಡ ಕಾಂಗ್ರೆಸ್ ಹೋರಾಟ ಮಾಡಿತ್ತು. ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ಮಾಡುವ ಮೂಲಕ ಕಾಂಗ್ರೆಸ್ ಯಶಸ್ವಿಯಾಗಿತ್ತು. ಸದನದೊಳಗೆ, ಸದನದ ಹೊರಗೆ ನಿರಂತರ ನಾಯಕರು ಹೋರಾಟ ನಡೆಸಿದ್ದರು. ಇದೀಗ ಗೃಹ ಇಲಾಖೆಯ ವರ್ಗಾವಣೆಯ ಭ್ರಷ್ಟಾಚಾರವನ್ನ ಜನರ ಮುಂದೆ ತೆಗೆದುಕೊಂಡು ಹೋಗಲು ನಿರ್ಧಾರ ಮಾಡಲಾಗಿದೆ.

ಸಚಿವ ಎಂ ಟಿ ಬಿ ಹೇಳಿಕೆ ಹಿನ್ನೆಲೆ  ಕೈ ನಾಯಕರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಮಾಜಿ ಸಚಿವ ರಾಮಲಿಂಗ ರೆಡ್ಡಿ, ಶಾಸಕ ಶರತ್ ಬಚ್ಚೆಗೌಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಮಾಜಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಅನ್ನೋದಕ್ಕೆ ಎಂಟಿಬಿ ಹೇಳಿಕೆಯೇ ಸಾಕ್ಷಿ. ಸಚಿವರು ಮನಸ್ಸಲ್ಲಿ ಇರೋದನ್ನು ಹೇಳಿದ್ದಾರೆ. ಸರ್ಕಾರದಲ್ಲಿ ಇರೋ ವ್ಯವಸ್ಥೆಯನ್ನು ಸಚಿವರು ಹೇಳಿದ್ದಾರೆ. ಸಿಎಂ ಯಾವಾಗಲೂ ತಾಕತ್ತು, ಧಮ್ ಅಂತ ಹೇಳ್ತಾರೆ. ನಿಜವಾಗಿಯೂ ಸಿಎಂ ಅವರಿಗೆ ಧಮ್, ತಾಕತ್ತು ಇದ್ದರೆ ನ್ಯಾಯಾಂಗ ತನಿಖೆ ಮಾಡಲಿ. ಇಲ್ಲವೇ ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿ. ಇಲ್ಲವೇ ಯಾರು ಲಂಚದ ಬಗ್ಗೆ ಹೇಳಿಕೆ ನೀಡಿದ್ದಾರೋ ಆ ಸಚಿವರ ರಾಜೀನಾಮೆ ಪಡೆಯಿರಿ. ಈ ಭ್ರಷ್ಟಾಚಾರದ ಹಣ ಯಾರಿಗೆ ಸೇರಿದೆ ಅನ್ನೋದನ್ನು ಬಹಿರಂಗ ಪಡಿಸಿ ಎಂದು ರಾಮಲಿಂಗ ರೆಡ್ಡಿ ಒತ್ತಾಯಿಸಿದ್ದಾರೆ. 

ಪೇಸಿಎಂ ಅಭಿಯಾನ ಹಿನ್ನೆಲೆ, ಅಧಿಕಾರಿಗಳು ಹೊಸದೊಂದು ಅಭಿಯಾನಕ್ಕೆ ಮುಂದಾಗಿದ್ರು, ನಾವು ಲಂಚ ಮುಟ್ಟಲ್ಲ ಅಂತ ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ನೇತೃತ್ವದಲ್ಲಿ ಅಭಿಯಾನ ಶುರು ಮಾಡಿದ್ರು. ಎಂತಹದೇ ಅಭಿಯಾನ ಮಾಡಿದ್ರೂ, ಸರ್ಕಾರದಲ್ಲಿ ಭ್ರಷ್ಟಾಚಾರ ನಿಂತಿಲ್ಲ. ಇನ್ಸ್ಪೆಕ್ಟರ್ ನಂದೀಶ್ ಹೃದಯಾಘಾತ ಆಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಅಮಾನತುಗೊಂಡಿದ್ದ ಇನ್ಸ್‌ಪೆಕ್ಟರ್ ಸಾವು , ಪೊಲೀಸ್ ಆಯುಕ್ತ ರೆಡ್ಡಿ ವಿರುದ್ದ ಸಚಿವ ಎಂಟಿಬಿ ಗರಂ

ಮಾಜಿ ಸಚಿವ ಕೃಷ್ಣಾ ಬೈರೆಗೌಡ ಹೇಳಿಕೆ, ಭ್ರಷ್ಟಾಚಾರದ ಒತ್ತಡದಲ್ಲಿ ಸಿಲುಕಿ ಇನ್ಸ್ಪೆಕ್ಟರ್ ನಂದೀಶ್ ಸಾವಾಗಿದೆ. ನಂದೀಶ್ 70-80 ಲಕ್ಷ ರೂ ಲಂಚ ಕೊಟ್ಟು ಆ ಸ್ಟೇಷನ್ ಗೆ ಬಂದಿದ್ದಾರೆ. ಈ ಮಾತನ್ನು ಸಚಿವರೇ ಬಹಿರಂಗ ಪಡಿಸಿದ್ದಾರೆ. 1 ವರ್ಷ ಮಾತ್ರ ಇನ್ಸ್ಪೆಕ್ಟರ್ ಹುದ್ದೆಯಲ್ಲಿ ಇರಲು ಸರ್ಕಾರ ಅವಕಾಶ ಕೊಡಲಿದೆ. 365 ದಿನದ ಕೊನೆಯಲ್ಲಿ transfer ಲಿಸ್ಟ್ ರೆಡಿ ಇರುತ್ತದೆ. ಹೀಗಾಗಿ ಇರೋ ದಿನಗಳಲ್ಲಿ ಸರ್ಕಾರಕ್ಕೆ ಭ್ರಷ್ಟಾಚಾರದ ರೂಪದಲ್ಲಿ ಕೊಟ್ಟ ಹಣ ವಾಪಸ್ ಪಡೆಯುವ ಸ್ಥಿತಿ ನಿರ್ಮಾಣ ಆಗಿದೆ. ಆ ಟೆನ್ಸನ್ ನಲ್ಲಿ ನಂದೀಶ್ ಸಾವು ಆಗಿದೆ.ಇದು ನಂದೀಶ್ ನಿಧನ ಅಲ್ಲ. ಇದು ಹತ್ಯೆ - ಬಿಜೆಪಿ ಸರ್ಕಾರದ ಬಲಿ. ಗೃಹ ಸಚಿವರು, ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ನಂದೀಶ್ ಬಲಿಯಾಗಿದೆ. ಹೀಗಾಗಿ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಕೃಷ್ಣ ಬೈರೇಗೌಡ ಒತ್ತಾಯ.

 

ಉತ್ತರ ಭಾರತದ ಅಧಿಕಾರಿಗಳ ದರ್ಪಕ್ಕೆ ನಂದೀಶ್‌ ಬಲಿ: ಎಚ್‌.ಡಿ.ಕುಮಾರಸ್ವಾಮಿ

ಯಾರಿಗೆ ಭ್ರಷ್ಟಾಚಾರದ ಹಣ ಸಂದಾಯ ಆಗಿದೆ. ಗೃಹ ಸಚಿವರು ಈ ಪ್ರಕರಣದ ಹೊಣೆ ಹೊರಬೇಕು. ಬಿಜೆಪಿ ಭ್ರಷ್ಟಾಚಾರಕ್ಕೆ ರಾಜ್ಯ ಜನರು ತತ್ತರಿಸಿ ಹೋಗಿದ್ದಾರೆ. ಗೃಹ ಸಚಿವರನ್ನು ವಜಾ ಮಾಡಬೇಕು. ಪೊಲೀಸ್ ಸ್ಟೇಷನ್ ನ್ನು ರಾಜ್ಯ ಸರ್ಕಾರ ಗುತ್ತಿಗೆ ನೀಡ್ತಾ ಇದೆ. ಚಿಕ್ಕ ಜಾಲ ಸ್ಟೇಷನ್ ನಲ್ಲಿ ಒಂದು ವರ್ಷದ ಅವಧಿಯಲ್ಲಿ 3 ಇನ್ಸ್ಪೆಕ್ಟರ್ ಗಳು ಟ್ರ್ಯಾಪ್ ಆಗಿದ್ದಾರೆ. ಹೀಗಾಗಿ ನಾವು  ಈ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ನ್ಯಾಯಾಂಗ ತನಿಖೆಗೆ ಸರ್ಕಾರದ ತಿರ್ಮಾನ ಮಾಡಬೇಕು. ಈ ವಿಚಾರವನ್ನು ನಾವು ಜನತಾ ನ್ಯಾಯಾಲಯದ ಮುಂದೆ ಸಹ ತೆಗೆದುಕೊಂಡು ಹೋಗ್ತೇವೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

Latest Videos
Follow Us:
Download App:
  • android
  • ios