Asianet Suvarna News Asianet Suvarna News

ಎಲ್ಲಾ ಕ್ಷೇತ್ರದಲ್ಲೂ ಭಾರತ ಉತ್ತಮ ಸಾಧನೆ: ಸಚಿವ ಪರಮೇಶ್ವರ್‌

ಜನಸಾಮಾನ್ಯರ ಜೀವನ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಉಚಿತ ಪಡಿತರ ಹಾಗೂ ಗೃಹಲಕ್ಷ್ಮಿ ಅಂತಹ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

India is doing well in all fields Says Minister Dr G Parameshwar gvd
Author
First Published Sep 4, 2023, 11:59 PM IST

ಗುಬ್ಬಿ (ಸೆ.04): ಜನಸಾಮಾನ್ಯರ ಜೀವನ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಉಚಿತ ಪಡಿತರ ಹಾಗೂ ಗೃಹಲಕ್ಷ್ಮಿ ಅಂತಹ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್‌ ತಿಳಿಸಿದರು. ತಾಲೂಕಿನ ಜಿ. ಹೊಸಹಳ್ಳಿ ಗ್ರಾಮದಲ್ಲಿ ಆದ್ಯ ಫೌಂಡೇಶನ್‌ ಟ್ರಸ್ಟ್‌ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಸಿದ ಅವರು ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದೆ. ದೇಶದಲ್ಲಿ ಪಂಚಾಯತ್‌ ರಾಜ್‌ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ಶೇಕಡ 50 ರಷ್ಟು ಮೀಸಲಾತಿ ನೀಡಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತವು ವಿಶ್ವದ ಇತರ ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಬೆಳ್ಳಾವಿ ಖಾರದಮಠದ ಖಾರದ ವೀರಬಸವ ಸ್ವಾಮೀಜಿ ಮಾತನಾಡಿ, ಡಾ.ಜಿ.ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿಸುವುದೇ ಜಿಲ್ಲೆಯ ಜನತೆಯ ಆಶಯವಾಗಿದೆ. ಸರಳ ಸಜ್ಜನಿಕೆಯಿಂದ ಪ್ರಾಮಾಣಿಕ ಕೆಲಸ ಮಾಡುತ್ತಿರುವುದರಿಂದಲೇ ಪರಮೇಶ್ವರ್‌ರವರು ಜನ ಮನದಲ್ಲಿ ಉಳಿಯಲು ಸಾಧ್ಯವಾಗುತ್ತಿದೆ ಎಂದ ಅವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವಾಗುವುದು ಎಂದು ಹೇಳಿದರು.

ಭಾರತದ ಧ್ವಜದೊಂದಿಗೆ ದೇಶ ಪರ್ಯಟನೆಗೆ ಹೊರಟ‌ ಉತ್ತರ ಪ್ರದೇಶದ ಯುವಕ ಸನೋಜ್!

ಆದ್ಯ ಫೌಂಡೇಶನ್‌ ಟ್ರಸ್ಟ್‌ನ ಅಧ್ಯಕ್ಷ ಗಿರೀಶ್‌ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಆರೋಗ್ಯ ಒದಗಿಸುವ ಉದ್ದೇಶವನ್ನು ಟ್ರಸ್ಟ್‌ ಹೊಂದಿದೆ. ಶಿಕ್ಷಣದಿಂದ ಮಾತ್ರ ಉತ್ತಮ ಬದುಕು ಕಟ್ಟಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಸಂಸ್ಥೆಯು ಯೋಜನೆ ರೂಪಿಸುವುದು ಎಂದು ತಿಳಿಸಿದರು. ಉದ್ಯಮಿ ಎಸ್‌.ಡಿ.ದಿಲೀಪ್‌ಕುಮಾರ್‌ ಮಾತನಾಡಿದರು. ಇದೇ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ, ಸರ್ಕಾರಿ ಶಾಲೆಯ ಸುಮಾರು 2648 ಮಕ್ಕಳಿಗೆ ಸ್ಕೂಲ್‌ ಬ್ಯಾಗ್‌, ನೋಟ್‌ ಪುಸ್ತಕಗಳು ಮಕ್ಕಳಿಗೆ ನೀಡಲಾಯಿತು.

ನಂದಿಬೆಟ್ಟದಲ್ಲಿ ಕೋತಿಗಳ ದರ್ಬಾರ್‌: ಪ್ರವಾಸಿಗರಿಗೆ ಸಮಸ್ಯೆ!

ಈ ಕಾರ್ಯಕ್ರಮದಲ್ಲಿ ಕನ್ನಿಕಾ ಪರಮೇಶ್ವರ್‌, ಗುಬ್ಬಿ ಹೊಸಹಳ್ಳಿ ಸಂಸ್ಥಾನದ ಹುಚ್ಚಿರಪ್ಪಾಜಿ ಅರಸ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪುರವಾಡ್‌, ತಹಸೀಲ್ದಾರ್‌ ಬಿ.ಆರತಿ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಚ್‌.ಕೆ. ನರಸಿಂಹಮೂರ್ತಿ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಚಂದ್ರಶೇಖರ್‌, ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ರಮೇಶ್‌ ಬಾಬು, ಪ್ರಭಣ್ಣ, ಮುರಳೀಧರ್‌ ಹಾಲಪ್ಪ, ಅರುಣ್‌ಕುಮಾರ್‌, ಭಾಗ್ಯಮ್ಮ, ನರಸಿಂಹ ರಾಜು, ಹೊಸಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು, ಆದ್ಯ ಟ್ರಸ್ಟ್‌ ನ ಪದಾಧಿಕಾರಿಗಳು ಹಾಜರಿದ್ದರು.

Follow Us:
Download App:
  • android
  • ios