ಭಾರತದ ಧ್ವಜದೊಂದಿಗೆ ದೇಶ ಪರ್ಯಟನೆಗೆ ಹೊರಟ‌ ಉತ್ತರ ಪ್ರದೇಶದ ಯುವಕ ಸನೋಜ್!

ದೇಶದ ಸಂಸ್ಕೃತಿ, ಆಚಾರ- ವಿಚಾರಗಳನ್ನು ಬುಕ್ ಮೂಲಕ ದಾಖಲಿಸಿ ಮಕ್ಕಳಿಗೆ ದೇಶದ ಬಗ್ಗೆ ತಿಳಿಸುವಂತ ವಿಶಿಷ್ಠ ಕಲ್ಪನೆಯೊಂದಿಗೆ ಉತ್ತರ ಪ್ರದೇಶದ ಗೋರಖ್‌ಪುರದ ಖುಷಿನಗರ ಧರಮ್‌ಪುರ್ ನಿವಾಸಿ ಸನೋಜ್ ದೇಶ ಪರ್ಯಟನೆಗೆ ಹೊರಟಿದ್ದಾರೆ. 

Sanoj A young man from Uttar Pradesh went on a tour of the country with the Indian flag gvd

ಉತ್ತರ ಕನ್ನಡ (ಸೆ.04): ದೇಶದ ಸಂಸ್ಕೃತಿ, ಆಚಾರ- ವಿಚಾರಗಳನ್ನು ಬುಕ್ ಮೂಲಕ ದಾಖಲಿಸಿ ಮಕ್ಕಳಿಗೆ ದೇಶದ ಬಗ್ಗೆ ತಿಳಿಸುವಂತ ವಿಶಿಷ್ಠ ಕಲ್ಪನೆಯೊಂದಿಗೆ ಉತ್ತರ ಪ್ರದೇಶದ ಗೋರಖ್‌ಪುರದ ಖುಷಿನಗರ ಧರಮ್‌ಪುರ್ ನಿವಾಸಿ ಸನೋಜ್ ದೇಶ ಪರ್ಯಟನೆಗೆ ಹೊರಟಿದ್ದಾರೆ. ಹರಿಯಾಣ ಸೋನಿಪತ್‌ನಲ್ಲಿ ಕೆಮಿಕಲ್ ಎಂಜಿನಿಯರಿಂಗ್‌ ಮುಗಿಸಿದ ಸನೋಜ್, 2022 ಅಕ್ಟೋಬರ್ 21ರಿಂದ ಭಾರತದ ಧ್ವಜದೊಂದಿಗೆ ದೇಶ ಪರ್ಯಟನೆ ಪ್ರಾರಂಭಿಸಿದ್ದರು. 

ಈವರೆಗೆ 15 ರಾಜ್ಯಗಳನ್ನು ಸುತ್ತಾಡಿ ಅಲ್ಲಿನ ಸಂಸ್ಕೃತಿ, ಆಚಾರ- ವಿಚಾರಗಳ‌ನ್ನು ಪುಸ್ತಕದಲ್ಲಿ ದಾಖಲಿಸುತ್ತಿರುವ ಇವರು, ಆಗಸ್ಟ್ 15ಕ್ಕೆ ಮಂಗಳೂರಿಗೆ ಆಗಮಿಸಿ ಅಲ್ಲಿಂದ ಉಡುಪಿ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಜಿಲ್ಲೆಯ ಆದಿವಾಸಿಗಳು, ಭಿನ್ನ- ಭಿನ್ನ ಸ್ಥಳಗಳಿಗೆ ಭೇಟಿ ನೀಡಿರುವ ಇವರು ಈವರೆಗೆ 6,690ಕಿ.ಮೀ. ನಡಿಗೆಯ ಮೂಲಕವೇ ಸಾಗಿದ್ದಾರೆ. ಮುಂದೆ ಗೋವಾ, ಮಹಾರಾಷ್ಟ್ರದ ಮೂಲಕ ಉಳಿದ ರಾಜ್ಯಗಳಲ್ಲೂ ತಿರಗಾಡಲಿರುವ ಇವರು ಇನ್ನೂ ಒಂದು ವರ್ಷಗಳ ಕಾಲ ದೇಶ ಸುತ್ತಾಡಿದ ಬಳಿಕ ತನ್ನ ಊರಿಗೆ ತೆರಳಲಿದ್ದಾರೆ. 

ಬಿ.ಎಲ್‌.ಸಂತೋಷ್‌ 4 ಶಾಸಕರನ್ನು ಕರೆಸಿಕೊಳ್ಳಲಿ ನೋಡೋಣ: ಸಚಿವ ಶಿವರಾಜ ತಂಗಡಗಿ

ತಾನು ಸುತ್ತಾಡಿದಲ್ಲೆಲ್ಲಾ ಜನರು ನೀಡಿದ ಸಹಾಯ, ಆಶ್ರಯ ಪಡೆದುಕೊಂಡು, ದೇವಸ್ಥಾನ,‌‌ ಮಂದಿರ, ಹಾಲ್‌ಗಳಲ್ಲಿ ರಾತ್ರಿ ಕಳೆಯುತ್ತಾ ಪ್ರಯಾಣ ಮುಂದುವರಿಸುತ್ತಿದ್ದಾರೆ. ತನ್ನೂರಿಗೆ ತಲುಪಿದ ಬಳಿಕ ದೇಶ ಸುತ್ತಾಡಿ ತಾನು ಪಡೆದ ಅನುಭವ, ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಪುಸ್ತಕ ಪ್ರಕಟಿಸಿ ಬಡ ಮಕ್ಕಳಿಗೆ ಹಂಚುವ ಚಿಂತನೆ ಹೊಂದಿದ್ದಾರೆ. ಅಲ್ಲದೇ, ಬಡಮಕ್ಕಳಿಗಾಗಿ ಶಾಲೆಯನ್ನೂ ತೆರೆಯುವ ಉದ್ದೇಶವನ್ನೂ ಹೊಂದಿದ್ದಾರೆ. ಕೇರಳದಲ್ಲಿ ಕಹಿ ಅನುಭವ ಹೊರತುಪಡಿಸಿದರೆ, ಎಲ್ಲಾ ರಾಜ್ಯಗಳಲ್ಲಿ ಉತ್ತಮ ಸ್ವಾಗತ ದೊರಕಿದೆ. ಕರ್ನಾಟಕದಲ್ಲಂತೂ ಜನರು ಆತ್ಮೀಯವಾಗಿ ಬರಮಾಡಿಕೊಂಡಿದ್ದು, ಸಂತೋಷವಾಗಿದೆ ಅಂತಾರೆ ಸನೋಜ್.

Latest Videos
Follow Us:
Download App:
  • android
  • ios