Asianet Suvarna News Asianet Suvarna News

ನಂದಿಬೆಟ್ಟದಲ್ಲಿ ಕೋತಿಗಳ ದರ್ಬಾರ್‌: ಪ್ರವಾಸಿಗರಿಗೆ ಸಮಸ್ಯೆ!

ವಾರಾಂತ್ಯ ಮತ್ತು ಸಾರ್ವತ್ರಿಕ ರಜೆ ಬಂದ್ರೆ ಸಾಕು ಪ್ರವಾಸಿಗರೇ ದಂಡೇ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಹರಿದು ಬರುತ್ತೆ. ಇಂಥ ಗಿರಿಧಾಮದಲ್ಲಿ ಕೋತಿಗಳ ಉಪಟಳ ಮಿತಿಮೀರಿದ್ದು, ಪ್ರವಾಸಿ ಗರ ಮೇಲೆಯೇ ರೌಡಿಸಂ ಮಾಡುತ್ತವೆ.

Monkeys are a Problem for Tourists in Nandi Hill At Chikkabalapur gvd
Author
First Published Sep 4, 2023, 10:03 PM IST

ಚಿಕ್ಕಬಳ್ಳಾಪುರ (ಸೆ.04): ವಾರಾಂತ್ಯ ಮತ್ತು ಸಾರ್ವತ್ರಿಕ ರಜೆ ಬಂದ್ರೆ ಸಾಕು ಪ್ರವಾಸಿಗರೇ ದಂಡೇ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಹರಿದು ಬರುತ್ತೆ. ಇಂಥ ಗಿರಿಧಾಮದಲ್ಲಿ ಕೋತಿಗಳ ಉಪಟಳ ಮಿತಿಮೀರಿದ್ದು, ಪ್ರವಾಸಿ ಗರ ಮೇಲೆಯೇ ರೌಡಿಸಂ ಮಾಡುತ್ತವೆ. ಈ ಕೋತಿಗಳ ಕಾಟಕ್ಕೆ ಪ್ರವಾಸಿಗರು ಹೈರಾಣಾಗಿ ಹೋಗಿದ್ದು, ಮಂಕಿಗಳ ಹಾವಳಿಗೆ ಮುಕ್ತಿ ಕೊಡಿಸಿ ಅಂತ ಅವಲತ್ತುಕೊಂಡಿದ್ದಾರೆ.

ತಿಂಡಿ-ತಿನಿಸು,ನೀರಿನ ಬಾಟಲ್‌ ಮತ್ತು ಐಸ್‌ ಕ್ರೀಂ ಹಿಡಿದುಕೊಂಡಿರುವ ಪ್ರವಾಸಿಗರೇನಾದರೂ ಕಂಡರೆ ಸಾಕು ಕೋತಿಗಳು ಕ್ಷಣ ಮಾತ್ರದಲ್ಲಿ ದಾಳಿ ನಡೆಸಿ ಕೈಯಲ್ಲಿರೋ ತಿಂಡಿ-ತಿನಿಸು,ನೀರಿನ ಬಾಟಲ್‌ಮತ್ತು ಐಸ್‌ ಕ್ರೀಂ ಕಿತ್ತುಕೊಂಡು ಮರ ವೇರಿ ಸವಿಯುತ್ತವೆ. ಪ್ರವಾಸಿಗರ ಬ್ಯಾಗ್‌ ಕಂಡರೆ ಸಾಕು ಕಿತ್ತುಕೊಂಡು ಓಡಲು ಹೊಂಚು ಹಾಕುತ್ತವೆ. ಈ ರೀತಿಯಾಗಿ ಪ್ರವಾಸಿಗರ ಬೆನ್ನಿಗೆ ಬಿದ್ದು ಕೋತಿಗಳು ನಾನಾ ಉಪಟಳ ಕೊಡುತ್ತಿವೆ.

ತ.ನಾಡಿನ ನಟೋರಿಯಸ್ ರೌಡಿ, ಡಿಎಂಕೆ ಮುಖಂಡ ಅಳಗಿರಿ ಆಪ್ತನ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್!

ಪ್ರವಾಸಿಗರಿಗೆ ಕೋತಿಗಳ ಭೀತಿ: ನಂದಿಬೆಟ್ಟದಲ್ಲಿ ಕೋತಿಗಳದ್ದೇ ರಾಜ್ಯಭಾರ. ಎಲ್ಲೆಲ್ಲೂ ಹಿಂಡು ಹಿಂಡಾಗಿ ಕಾಣೋ ಕೋತಿಗಳು ಪ್ರವಾಸಿಗರಿಗೆ ಕೊಡಬಾರದ ಕಾಟ ಕೊಡ್ತಿವೆ. ಪ್ರವಾಸಿಗರು ನಂದಿಬೆಟ್ಟದಲ್ಲೂ ಏನೂ ತಿನ್ನುವಂತಿಲ್ಲ. ಏನೇ ತಿಂಡಿ ತಿನಿಸು ಕೈಯಲ್ಲಿದ್ರೂ ಚಂಗನೆ ಎದುರಿಗೆ ಬರೋ ಕೋತಿಗಳು ಬಲವಂತವಾಗಿಯೇ ಕಿತ್ತುಕೊಂಡು ಹೋಗುತ್ತವೆ. ಇಷ್ಟಲ್ಲದೇ ಪ್ರವಾಸಿಗರ ಮೇಲೆ ಮುಗಿಬಿಳೋ ಕೋತಿಗಳು ಕೈಯಲ್ಲಿರೋ ಐಸ್‌ ಕ್ರೀ. ಚಾಕ್ಲೇಟ್‌, ಬಿಸ್ಕೆಟ್‌ ಏನೇ ಆಗಲಿ ಬಿಡೋದಿಲ್ಲ. ಕೊಡಲಿಲ್ಲ ಅಂದ್ರೆ ಮೈಮೇಲೆ ಎರಗುತ್ತವೆ. ಕೈಯಲ್ಲಿ ಕವರ್‌, ಬ್ಯಾಗ್‌ ಏನೇ ಇಡ್ಕೊಂಡು ಹೋದ್ರೂ ಅದನ್ನೇ ಹಿಂಬಾಲಿಸಿ ಕಿತ್ತು ಕೊಂಡು ಮರವೇರಿ ಬಿಡುತ್ತವೆ. 

ಇದರಿಂದ ಯಾಕಪ್ಪ ಇಲ್ಲಿಗೆ ಬಂದ್ವಿ ಅನ್ನೋ ಬೇಸರ ಪ್ರವಾಸಿಗರಿಗೆ ಮೂಡುತ್ತದೆ. ಆದರೆ, ಒಂದು ಕಡೆ ಕೋತಿಗಳು ತಿಂಡಿ ತಿನಿಸುಗಳಿಗಾಗಿ ದಾಳಿ ಮಾಡಿದ್ರೆ ಮತ್ತೊಂದೆಡೆ ವಾಹನಗಳ ಮೇಲೂ ಕೋತಿಗಳ ದಾಳಿ ಮಾಡಿ ಮಿರರ್‌ ಸೀಟು, ಗಾಜು ಸೇರಿ ಬಿಡಿ ಭಾಗಗಳನ್ನ ಹಾಳು ಮಾಡ್ತವೆ. ಇದರಿಂದ ನಂದಿಬೆಟ್ಟಕ್ಕೆ ಬರೋ ಪ್ರವಾಸಿಗರು ಕೋತಿಗಳ ಉಪಟಳದಿಂದ ಹೈರಾಣಾಗಿ ಹೋಗಿದ್ದು ಕೋತಿಗಳ ಕಾಟಕ್ಕೆ ಬ್ರೇಕ್‌ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಗೃಹಲಕ್ಷ್ಮಿ ಎಫೆಕ್ಟ್: ಬ್ಯಾಂಕ್ ಮುಂದೆ ಮಹಿಳೆಯರನ್ನು ನಿಯಂತ್ರಿಸಲು ಪೊಲೀಸರು, ಸೆಕ್ಯೂರಿಟಿ ಗಾರ್ಡ್ ಹರಸಾಹಸ

ಅಧಿಕಾರಿಗಳು ಕ್ರಮ ಕೈಗೊಳ್ಳಲು ಮನವಿ: ನಗರದ ಕಾಂಕ್ರೀಟ್‌ ಕಾಡಿನಲ್ಲಿ , ವಾಹನಗಳ ಹೊಗೆ ಮತ್ತು ಜನರ ಜಂಜಾಟದಿಂದ ದೂರ ಹೋಗಲು, ಪ್ರಕೃತಿಯ ರಮ್ಯ ಮಡಿಲಲ್ಲಿ ಪರಿಸರದ ಸೊಬಗು ಸವಿಯೋಣವೆಂದು ನಂದಿ ಬೆಟ್ಟಕ್ಕೆ ಬಂದರೆ ಇಲ್ಲಿ ಕೋತಿಗಳ ಕಾಟ ಹೇಳತೀರದಾಗಿದೆ. ಸಂಬಂಧಿಸಿದವರು ಈ ಬಗ್ಗೆ ಕ್ರಮ ಕೈಗೊಂಡು ಪ್ರವಾಸಿಗರಿಗೆ ಕೋತಿ ಕಾಟದಿಂದ ಮುಕ್ತಿಕೊಡಿಸ ಬೇಕೆಂದು ಬೆಂಗಳೂರಿನ ಟೆಕ್ಕಿ ಪ್ರದೀಪ್‌ ಮನವಿ ಮಾಡಿದ್ದಾರೆ.

Follow Us:
Download App:
  • android
  • ios