ನಾನಿನ್ನೂ ಸತ್ತಿಲ್ಲ, ಹಾಸನ ಬಗ್ಗೆ ನನಗೆ ಎಲ್ಲ ಗೊತ್ತಿದೆ: ಎಚ್‌ಡಿಕೆಗೆ ರೇವಣ್ಣ ಟಾಂಗ್‌?

‘ನಾನಿನ್ನೂ ಸತ್ತಿಲ್ಲ. ಹಾಸನ ಜಿಲ್ಲೆಯಲ್ಲಿ 25 ವರ್ಷದಿಂದ ಕೆಲಸ ಮಾಡಿದ್ದೇನೆ. ಜಿಲ್ಲೆಯ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ’ ಎಂದು ಗುಡುಗಿರುವ ಮಾಜಿ ಸಚಿವ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿರುವ ಎಚ್‌.ಪಿ. ಸ್ವರೂಪ್‌ ಯಾರೆಂದೇ ಗೊತ್ತಿಲ್ಲ ಎಂದು ‘ಬಾಂಬ್‌’ ಸಿಡಿಸಿದ್ದಾರೆ. 
 

I am not dead either I know everything about Hassan Says HD Revanna gvd

ಹಾಸನ (ಮಾ.30): ‘ನಾನಿನ್ನೂ ಸತ್ತಿಲ್ಲ. ಹಾಸನ ಜಿಲ್ಲೆಯಲ್ಲಿ 25 ವರ್ಷದಿಂದ ಕೆಲಸ ಮಾಡಿದ್ದೇನೆ. ಜಿಲ್ಲೆಯ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ’ ಎಂದು ಗುಡುಗಿರುವ ಮಾಜಿ ಸಚಿವ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿರುವ ಎಚ್‌.ಪಿ. ಸ್ವರೂಪ್‌ ಯಾರೆಂದೇ ಗೊತ್ತಿಲ್ಲ ಎಂದು ‘ಬಾಂಬ್‌’ ಸಿಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರವಷ್ಟೇ ಸ್ವರೂಪ್‌ ಜತೆ ರಹಸ್ಯ ಮಾತುಕತೆ ನಡೆಸಿದ್ದರು. ಹಾಸನ ವಿಚಾರದಲ್ಲಿ ತಮ್ಮ ನಿಲುವಿಗೆ (ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡುವುದು) ಈಗಲೂ ಬದ್ಧ ಎಂದು ಹೇಳಿದ್ದರು. 

ಇದರ ಬೆನ್ನಲ್ಲೇ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಅವರು, ಕುಮಾರಣ್ಣ ಹೇಳಿರುವ ‘ಸಾಮಾನ್ಯ ಕಾರ್ಯಕರ್ತ’ ಯಾರೆಂದು ಮುಂದೆ ನೋಡೋಣ ಎಂದು ಹೇಳಿದರು. ಹಾಸನ ವಿಚಾರದಲ್ಲಿ ಪಟ್ಟು ಹಿಡಿದಿರುವ ಕುಮಾರಸ್ವಾಮಿ ವಿರುದ್ಧ ರೇವಣ್ಣ ಈ ರೀತಿ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಾನು ಹಾಸನ ಜಿಲ್ಲೆಯಲ್ಲಿ 25 ವರ್ಷದಿಂದ ಕೆಲಸ ಮಾಡಿದ್ದೇನೆ. ಜಿಲ್ಲೆಯ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ ಎನ್ನುವ ಮೂಲಕ ಇಲ್ಲಿನ ರಾಜಕೀಯ ವಿಚಾರದಲ್ಲಿ ಇನ್ನೊಬ್ಬರಿಂದ ಪಾಠ ಬೇಡ ಎಂದು ಪರೋಕ್ಷವಾಗಿ ಸಹೋದರನಿಗೆ ಸಂದೇಶ ರವಾನಿಸಿದ ಅವರು, ಟಿಕೆಟ್‌ ವಿಚಾರವಾಗಿ ನಾನು ಮುಖಂಡರ ಬಳಿ ಕೂರುತ್ತೇನೆ. 

ಮೋದಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ಈ ಬಾರಿಯೂ ಬಿಜೆಪಿಯದೇ ಅಧಿಕಾರ: ಪ್ರಲ್ಹಾದ್ ಜೋಶಿ

ಈ ವಿಚಾರದಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲ. ನಾನು ಹೆದರಿಕೊಂಡು ಓಡಿ ಹೋಗುವವನೂ ಅಲ್ಲ ಎಂದು ಸ್ಪಷ್ಟಪಡಿಸಿದರು. ವರಿಷ್ಠರು, ನಾವು ಎಲ್ಲ ಕೂತು ಚರ್ಚೆ ಮಾಡುತ್ತೇವೆ. ಇನ್ನೆರಡು ದಿನದಲ್ಲಿ ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯನ್ನು ಬಹಿರಂಗಪಡಿಸುತ್ತೇವೆ. ಇಲ್ಲಿ ಜೆಡಿಎಸ್‌ ಶಕ್ತಿಯುತವಾಗಿದ್ದು, ಪಕ್ಷದ ಮುಖಂಡರಾದ ಎಸ್‌.ದ್ಯಾವೇಗೌಡ, ಕೆ.ಎಂ.ರಾಜೇಗೌಡ ಹಾಗೂ ಬಿ.ವಿ.ಕರೀಗೌಡ ಸೇರಿದಂತೆ ಇತರೆ ಮುಖಂಡರ ಜತೆಗೆ ಚರ್ಚಿಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದರು. ಇದೇ ವೇಳೆ ಹಾಸನ ಜೆಡಿಎಸ್‌ನಲ್ಲಿ ಸಮರ್ಥ ನಾಯಕರಿದ್ದಾರೆ, ನಾನಿನ್ನೂ ಸತ್ತಿಲ್ಲ, 

ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಖಚಿತ: ಶಾಸಕ ಸಿ.ಎಸ್‌.ಪುಟ್ಟರಾಜು

ಜಿಲ್ಲೆಯಲ್ಲಿ ಪಕ್ಷದ ಸಂಸದ ಇಲ್ವಾ? ಎಂಎಲ್ಸಿ ಇಲ್ವಾ? ದೇವೇಗೌಡರದೇ ಒಂದು ಅಡಿಪಾಯ ಇದೆ. ರಾಜೇಗೌಡರಂಥ ನಾಯಕರು ಇದ್ದಾರೆ ಎಂದ ರೇವಣ್ಣ, ನಾವು ಎಲ್ಲಾ ಕೂತು ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಜಿಲ್ಲೆಯ ಕಾರ್ಯಕರ್ತರನ್ನು ಉಳಿಸಿಕೊಳ್ಳುತ್ತೇವೆ ಎಂದರು. ಜತೆಗೆ, ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ತಮ್ಮ ಪಾಲಿಗೆ ಅಗ್ನಿ ಪರೀಕ್ಷೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು. ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕುರಿತು ಬೆದರಿಕೆ ಹಾಕುವವರಿಗೆ ತಲೆಬಾಗಲ್ಲ ಎಂದು ಪರೋಕ್ಷವಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಟಾಂಗ್‌ ನೀಡಿದ್ದರು.

Latest Videos
Follow Us:
Download App:
  • android
  • ios