Asianet Suvarna News Asianet Suvarna News

ಮಾಜಿ ಪ್ರಧಾನಿ ಮನವಿ ಮೇರೆಗೆ ರಾಜಕೀಯಕ್ಕೆ ಬಂದ ಗೃಹ ಸಚಿವ ಪರಮೇಶ್ವರ ವಿದ್ಯಾಭ್ಯಾಸವೇನು?

ದೇಶದ ಮಾಜಿ ಪ್ರಧಾನಿಗಳ ಮನವಿ ಮೇರೆಗೆ ರಾಜಕೀಯ ಪ್ರವೇಶ ಪಡೆದು ಗೃಹ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜಿ. ಪರಮೇಶ್ವರ ಅವರ ವಿದ್ಯಾರ್ಹತೆ ಏನು ಗೊತ್ತಾ?

Home Minister Parameshwara politics entry from former PM Rajiv Gandhi and he qualified PHD sat
Author
First Published Aug 6, 2024, 7:36 PM IST | Last Updated Aug 6, 2024, 7:36 PM IST

ಬೆಂಗಳೂರು (ಆ.06): ಕರ್ನಾಟಕ ರಾಜ್ಯ ಕಂಡ ಧೀಮಂತ ರಾಜಕಾರಣಗಳಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರೂ ಒಬ್ಬರಾಗಿದ್ದಾರೆ. ಪರಮೇಶ್ವರ ಅವರು ದೇಶದ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ಕರೆಗೆ ಓಗೊಟ್ಟು ರಾಜಕೀಯ ಪ್ರವೇಶ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ, ಡಾ.ಜಿ. ಪರಮೇಶ್ವರ ಅವರ ವಿದ್ಯಾಭ್ಯಾಸವೇನು ಗೊತ್ತಾ? ಡಾಕ್ಟರೇಟ್ ಪದವಿ ಸಿಕ್ಕಿದ್ದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ ನೋಡಿ..

ಕರ್ನಾಟಕ ರಾಜ್ಯದ ಕಾಂಗ್ರೆಸ್ ನಾಯಕರದಲ್ಲಿ ಡಾ.ಜಿ. ಪರಮೇಶ್ವರ ಅವರು ಕೂಡ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಮಲ್ಲಿಕಾರ್ಜುನ ಖರ್ಗೆಯ ಹಾದಿಯಲ್ಲಿಯೇ ಪರಮೇಶ್ವರ ಅವರೂ ಪಕ್ಷಕ್ಕಾಗಿ ಜೀವನ ಸವೆಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಮಾಡಿದ್ದಾರೆ. ಹಾಲಿ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಸಚಿವರಾಗಿ ಕಾರ್ಯಭಾರ ಮಾಡುತ್ತಿದ್ದಾರೆ. ಇಂದು (ಆ.06) ಡಾ.ಜಿ. ಪರಮೇಶ್ವರ ಅವರ ಜನ್ಮದಿನವಾಗಿದ್ದು, ಅವರ ಅಭಿಮಾನಿಗಳು ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡಿದ್ದಾರೆ. ಪರಮೇಶ್ವರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ..

ಸಕ್ಕರೆ ನಗರ ಮಂಡ್ಯಕ್ಕೆ ಬಂದ ಕಾಡಾನೆಗಳು; ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟ ಗಜಪಡೆ

ವಿದೇಶದಲ್ಲಿ ಕೃಷಿ ಪಿಹೆಚ್‌ಡಿ ಮಾಡಿದ ಪರಮ್: 
ಗೃಹ ಪರಮೇಶ್ವರ ಅವರು ತುಮಕೂರು ಜಿಲ್ಲೆಯ ಗೊಲ್ಲಹಳ್ಳಿಯಲ್ಲಿ 1951ರ ಆ.6ರಂದು ಡಾ. ಹೆಚ್.ಎಂ.ಗಂಗಾಧರಯ್ಯ  ಮತ್ತು ಗಂಗಮಾಳಮ್ಮ ದಂಪತಿ ದ್ವಿತೀಯ ಪುತ್ರರಾಗಿದ್ದಾರೆ. ಕೃಷಿ ಕುಟುಂಬದ ಹಿನ್ನೆಲೆಯುಳ್ಳ ಪರಮೇಶ್ವರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಇದರ ನಂತರ ಆಸ್ಟ್ರೇಲಿಯಾದ ವೈಟ್ ಅಗ್ರಿಕಲ್ಚರ್ ರೀಸರ್ಚ್ ಇನ್ಸ್ಟಿಟ್ಯೂಟ್ ಯೂನಿವರ್ಸಿಟಿ ಆಫ್ ಅಡಿಲೆಡ್‌ನಿಂದ 1984ರಲ್ಲಿ ಪಿ.ಎಚ್‌ಡಿ ಪದವಿಗಳಿಸಿದ್ದಾರೆ. ಹೀಗಾಗಿ, ಅವರು ಪಿಹೆಚ್‌ಡಿ ಮೂಲಕ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.

ಮಾಜಿ ಪ್ರಧಾನಿಯಿಂದ ರಾಜಕೀಯ ಪ್ರವೇಶ:
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕರೆಗೆ ಓಗೊಟ್ಟು ಪರಮೇಶ್ವರ ರಾಜಕೀಯ ಪ್ರವೇಶ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ 1989ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಇವರ ಅದೃಷ್ಟವೆಂಬಂತೆ ವಿದೇಶದಲ್ಲಿ ಅಭ್ಯಾಸ ಮಾಡಿಕೊಂಡು ಬಂದಿದ್ದ ಪರಿಣತಿಯಿಂದಾಗಿ ಮೊದಲ ಬಾರಿ ಶಾಸಕರಾಗಿದ್ದ ಅವಧಿಯಲ್ಲೇ ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಪರಮೇಶ್ವರ ಮಂತ್ರಿ ಆಗುತ್ತಾರೆ. ಇದರ ನಂತರ ರಾಜಕೀಯದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡ ಪರಮೇಶ್ವರ್ ಅವರು ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ, ವಾರ್ತಾ ಮತ್ತು ಪ್ರಸಾರ ಖಾತೆ ನಿಭಾಯಿಸಿದರು. 2010 ರಿಂದ 2018ರವೆರೆಗೆ ಎರಡು ಅವಧಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವಧಿ 2013ರಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹಾಲಿ ಕಾಂಗ್ರೆಸ್ ಸರ್ಕಾರದ ಗೃಹಮಂತ್ರಿ ಖಾತೆಯನ್ನೂ ಸೇರಿದಂತೆ ಒಟ್ಟು ರಾಜ್ಯದಲ್ಲಿ 3 ಬಾರಿ ಗೃಹ ಸಚಿವರಾಗಿ ಖಾತೆಯನ್ನು ನಿಭಾಯಿಸುತ್ತಿದ್ದಾರೆ.

ಬಿಕಾಂ ಪದವಿ ಪರೀಕ್ಷೆಯಲ್ಲಿ ಮಹಾ ಎಡವಟ್ಟು; ಪ್ರಶ್ನೆ ಪತ್ರಿಕೆ ಬಿಟ್ಟು ಮಾದರಿ ಉತ್ತರ ಪತ್ರಿಕೆ ವಿತರಣೆ

ಪರಮೇಶ್ವರ ರಾಜಕೀಯ ಹೆಜ್ಜೆಗುರುತುಗಳು :

  • 1993ರಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ಸಂಪುಟದಲ್ಲಿ ರೇಷ್ಮೆ ಖಾತೆ ಸಚಿವ.
  • 1999 ರಿಂದ 2004ರವರೆಗೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ 
  • 2010 ರಿಂದ 2018ರವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ
  • 2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಸಭಾನಾಯಕರಾಗಿ ಆಯ್ಕೆ
  • 2015ರಲ್ಲಿ ಮೊದಲ ಬಾರಿಗೆ ಗೃಹ ಸಚಿವರಾಗಿ ಕಾರ್ಯಭಾರ
  • 2018 ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ. ಗೃಹ ಖಾತೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಣೆ. 
  • 2023ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Latest Videos
Follow Us:
Download App:
  • android
  • ios