Asianet Suvarna News Asianet Suvarna News

ಸಕ್ಕರೆ ನಗರ ಮಂಡ್ಯಕ್ಕೆ ಬಂದ ಕಾಡಾನೆಗಳು; ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟ ಗಜಪಡೆ

ಸಕ್ಕರೆ ನಗರ ಮಂಡ್ಯಕ್ಕೆ ಕಾಡಾನೆಗಳು ಲಗ್ಗೆಯಿಟ್ಟಿವೆ. ಶ್ರೀರಾಮನಗರ ಬಡಾವಣೆಯ ಪಕ್ಕದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಗಜಪಡೆ ಬೀಡುಬಿಟ್ಟಿದೆ.

Elephants came to sugar city Mandya Sriram Nagar layout sugarcane field sat
Author
First Published Aug 6, 2024, 5:57 PM IST | Last Updated Aug 6, 2024, 5:57 PM IST

ಮಂಡ್ಯ (ಆ.06): ಕರ್ನಾಟಕದ ಸಕ್ಕರೆ ನಗರ ಎಂದು ಪ್ರಸಿದ್ಧಿಪಡೆದಿರುವ ಮಂಡ್ಯ ನಗರಕ್ಕೂ ಕಾಡಾನೆಗಳು ಲಗ್ಗೆಯಿಟ್ಟಿವೆ. ಈಗಾಗಲೇ ಮದ್ದೂರು, ಮಳವಳ್ಳಿ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿತ್ತು. ಈಗ ಮಂಡ್ಯ ನಗರದ ಹೊರವಲಯದ ಕಬ್ಬಿನ ಗದ್ದೆಗಳಲ್ಲಿಯೂ ಗಜಪಡೆ ಬೀಡು ಬಿಟ್ಟಿದೆ. ಈ ದೃಶ್ಯವನ್ನು ಸ್ಥಳೀಯರು ಡ್ರೋನ್ ಕ್ಯಾಮೆರಾದ ಮೂಲಕ ಸೆರೆ ಹಿಡಿದಿದ್ದಾರೆ.

ಮಂಡ್ಯ ನಗರಕ್ಕೂ ಆವರಿಸಿದ ಕಾಡಾನೆಗಳ ಆತಂಕ ಶುರವಾಗಿದೆ. ಮಂಡ್ಯ ನಗರದ ಕೂಗಳತೆ ದೂರದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಎರಡು ಬೃಹತ್ ಗಾತ್ರದ ಕಾಡಾನೆಗಳು ಬೀಡು ಬಿಟ್ಟಿವೆ. ಮಂಡ್ಯ ನಗರದ ಶ್ರೀರಾಮ ನಗರ ಬಡಾವಣೆ ಸಮೀಪದ ಕಬ್ಬಿನ ಗದ್ದೆಯಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿವೆ. ಕಬ್ಬಿನ ಗದ್ದೆಯಲ್ಲಿರುವ ಕಾಡಾನೆಗಳನ್ನು ದೃಶ್ಯವನ್ನು ಸ್ಥಳೀಯರು ಡ್ರೋಣ್ ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾರೆ. ಇನ್ನು ಆನೆಗಳು ಬೀಡು ಬಿಟ್ಟಿರುವ ಜಮೀನಿನ ಪಕ್ಕದಲ್ಲಿಯೇ ಬೆಳಗ್ಗೆ ಜನರ ವಾಯ ವಿಹಾರ ಮಾಡುತ್ತಾರೆ. ಜೊತೆಗೆ, ಈ ಕಬ್ಬಿನ ಗದ್ದೆಯ ಪಕ್ಕದಲ್ಲಿ ಶಾಲೆ ಇದ್ದು, ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ.

ಬಿಕಾಂ ಪದವಿ ಪರೀಕ್ಷೆಯಲ್ಲಿ ಮಹಾ ಎಡವಟ್ಟು; ಪ್ರಶ್ನೆ ಪತ್ರಿಕೆ ಬಿಟ್ಟು ಮಾದರಿ ಉತ್ತರ ಪತ್ರಿಕೆ ವಿತರಣೆ

ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಮಳವಳ್ಳಿ ಹಾಗೂ ಮದ್ದೂರು ತಾಲೂಕಿನ ವಿವಿಧೆಡೆ ಕಾಡಾನೆಗಳು ಕಾಣಿಸಿಕೊಂಡು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಮಳವಳ್ಳಿ ತಾಲೂಕಿನ ಕೆಲವೆಡೆ ಕಡಾನೆಗಳ ದಾಳಿಯೂ ನಡೆದಿದೆ. ಆದರೆ, ಈಗ ಕಾಡಾನೆಗಳು ಜಿಲ್ಲಾ ಕೇಂದ್ರವಾದ ಮಂಡ್ಯ ನಗರಕ್ಕೂ ಕಾಲಿಟ್ಟಿವೆ. ಇದರಿಂದಾಗಿ ಮಂಡ್ಯ ನಗರದ ನಿವಾಸಿಗಳಲ್ಲಿ ಕಾಡಾನೆ ದಾಳಿ ಆತಂಕ ಹೆಚ್ಚಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಮಂಡ್ಯ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ನಗರದೊಳಗೆ ಕಾಡಾನೆಗಳು ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕಬ್ಬಿನ ಗದ್ದೆಯ ಪಕ್ಕದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. 

ದೇವರ ಗರ್ಭಗುಡಿಯಲ್ಲಿ ಕೊಲೆ ಆರೋಪಿ ದರ್ಶನ್ ಫೋಟೋಗೆ ಪೂಜೆ ಸಲ್ಲಿಕೆ; ಪೂಜಾರಿಯನ್ನೇ ಅಮಾನತು ಮಾಡಿದ ಸರ್ಕಾರ!

ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಮತ್ತೆ ಕಾಡಿಗೆ ಓಡಿಸಲು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆದರೆ, ಎರಡೂ ಆನೆಗಳು ಗಂಡು ಆನೆಗಳಾಗಿರುವುದರಿಂದ ಡ್ರೋನ್ ಕ್ಯಾಮೆರಾಗಳನ್ನು ನೋಡಿ ಜೊತೆಗೆ ಜನರು ಮತ್ತು ವಾಹನಗಳ ಸಂಚಾರದ ಶಬ್ದಕ್ಕೆ ಆನೆಗಳು ಬೆದರಿವೆ. ಹೀಗಾಗಿ, ಜನರ ಮೇಲೆ ದಾಳಿ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಮರಳಿ ಕಾಡಿನತ್ತ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರು ಹಾಗೂ ರೈತರು ಶ್ರೀರಾಮ ನಗರದ ಹೊರವಲಯದ ಗದ್ದೆಗಳಿಗೆ ಹೋಗದಂತೆ ಹೋಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆಯನ್ನು ನೀಡಿದ್ದಾರೆ.

Latest Videos
Follow Us:
Download App:
  • android
  • ios