Asianet Suvarna News Asianet Suvarna News

ಶಿವಮೊಗ್ಗ: ವರಿಷ್ಠರು ಲೋಕಸಭೆಗೆ ನಿಲ್ಲಬೇಡ ಎಂದಿದ್ದಾರೆ, ನಿಲ್ಲಲ್ಲ, ಬೇಳೂರು ಗೋಪಾಲಕೃಷ್ಣ

ಲೋಕಸಭೆಗೆ ನನಗೆ ನಿಲ್ಲಬೇಡ ಎಂದು ವರಿಷ್ಠರು ಹೇಳಿದ್ದಾರೆ. ಶಾಸಕನಾಗಿ ಇದ್ದೀಯಾ, ಶಾಸಕನಾಗಿ ಇರು ಅಂದಿದ್ದಾರೆ. ನಾನು ನಿಲ್ಲಲ್ಲ, ಶಾಸಕನಾಗಿ ಇರುತ್ತೇನೆ ಎಂದ ಶಾಸಕ ಬೇಳೂರು ಗೋಪಾಲಕೃಷ್ಣ

High Command Said Not Contest to Lok Sabha Elections 2024 Says Belur Gopalakrishna grg
Author
First Published Feb 5, 2024, 4:00 AM IST

ಶಿವಮೊಗ್ಗ(ಫೆ.05): ನಾನು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯ್ಕೆ ಮಾಡಿದ ಯಾರೇ ಅಭ್ಯರ್ಥಿಯಾದರೂ, ಅವರ ಗೆಲುವಿಗಾಗಿ ನಾವೆಲ್ಲರೂ ಸೇರಿ ಪ್ರಯತ್ನ ಮಾಡುತ್ತೇವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಗೆ ನನಗೆ ನಿಲ್ಲಬೇಡ ಎಂದು ವರಿಷ್ಠರು ಹೇಳಿದ್ದಾರೆ. ಶಾಸಕನಾಗಿ ಇದ್ದೀಯಾ, ಶಾಸಕನಾಗಿ ಇರು ಅಂದಿದ್ದಾರೆ. ನಾನು ನಿಲ್ಲಲ್ಲ, ಶಾಸಕನಾಗಿ ಇರುತ್ತೇನೆ ಎಂದರು.

ನನಗೆ ಪಕ್ಷ ನಿಗಮ ಮಂಡಳಿ ಸ್ಥಾನಮಾನ ನೀಡಿ, ಗೌರವಿಸಿದೆ. ಪ್ರೀತಿಯಿಂದ ಜನ ಆಶೀರ್ವದ ಮಾಡಿದ್ದಾರೆ. ಪಕ್ಷ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ನನಗೆ ನೀಡಿದ ನಿಗಮದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ಪುಣ್ಯದ ಫಲ: ಮಧು ಬಂಗಾರಪ್ಪ

ಡಿಕೆಸು ಹೇಳಿಕೆ ವೈಭವೀಕರಣ ಬೇಡ:

ಡಿ.ಕೆ.ಸುರೇಶ್ ಹೇಳಿಕೆ ಅವರ ವೈಯಕ್ತಿಕ. ಆ ಹೇಳಿಕೆಗೆ ನನ್ನ ಸಹಮತವಿಲ್ಲ. ಅದೇ ಹೇಳಿಕೆಯನ್ನು ವೈಭವೀಕರಿಸುವುದು ಬೇಡ. ಬಿಜೆಪಿಯವರು ಅನಾವಶ್ಯಕವಾಗಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಸಂಸದ ಅನಂತ್‍ಕುಮಾರ್ ಹೆಗಡೆ ಸಂವಿಧಾನವನ್ನು ಬದಲಿಸುವ ಮಾತನ್ನಾಡಿದ್ದರು. ಶಾಸಕ ಯತ್ನಾಳ್ ಪಕ್ಷದ ನಾಯಕರ ಮೇಲೆ ₹40 ಸಾವಿರ ಕೋಟಿಯ ಭ್ರಷ್ಟಾಚಾರ ಆರೋಪ ಮಾಡಿದ್ದರು. ಬಿಜೆಪಿ ಅವರಿಬ್ಬರನ್ನು ಪಕ್ಷದಿಂದ ಹೊರಕ್ಕೆ ಹಾಕಿಲ್ಲ ಏಕೆ? ಅವರಿಗೇನಾದರೂ ನೈತಿಕತೆ ಇದ್ದರೆ ಮೊದಲು ಪಕ್ಷದಿಂದ ಅವರಿಬ್ಬರನ್ನು ಉಚ್ಛಾಟಿಸಲಿ ಎಂದು ಕಿಡಿಕಾರಿದರು.

ಪಕ್ಷದ ಶಿಸ್ತಿನ ಸಿಪಾಯಿ:

ಖರ್ಗೆಯವರು ಬಾಯಿತಪ್ಪಿ ರಾಜ್ಯ ಸಭೆಯಲ್ಲಿ ಬಿಜೆಪಿಗೆ 400 ಸ್ಥಾನ ಎಂದು ಹೇಳಿದ್ದಾರೆ. ಅದನ್ನು ದೊಡ್ಡದು ಮಾಡುವುದು ಬೇಡ. ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರು ಮುಖ್ಯಮಂತ್ರಿ ಆಗಬಹುದು. ನಾನು ಕೂಡ ಆಗಲು ಅವಕಾಶವಿದೆ. 20 ತಿಂಗಳು ಮಾತ್ರ ಒಬ್ಬರಿಗೆ ಮಂತ್ರಿಗಿರಿ ಕೊಡಬೇಕು ಎಂಬ ಯಾವುದೇ ಹೇಳಿಕೆಯನ್ನು ನಾನು ಸಮರ್ಥಿಸುವುದಿಲ್ಲ. ಪಕ್ಷದ ಶಿಸ್ತಿನ ಶಿಫಾಯಿ. ನನಗೆ ಯಾವುದೇ ಅಸಮಧಾನವಿಲ್ಲ ಎಂದರು.

ಬಂಡೆ ಹೊಡೆಯುವವರು ಸಂಸದರಾಗಿದ್ದಾರೆ ಎಂಬುವುದು ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಅಪ್ಪನ ಹೆಸರಿನಲ್ಲಿ ಬೆಳಕಿಗೆ ಬಂದವರು. ಬಂಡೆ ಹೊಡೆಯುವವರು, ಕೂಲಿ ಕಾರ್ಮಿಕರು. ಅವರು ಮಂತ್ರಿಗಳು, ಸಂಸದರಾದರೆ ತಪ್ಪೇನು? ಪ್ರೀತಿಯಿಂದ ಜನ ಆಶೀರ್ವದ ಮಾಡಿದ್ದಾರೆ. ಪಕ್ಷದ ನಾಯಕರು ಒಳ್ಳೆಯ ಸ್ಥಾನ ಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಚ್.ಸಿ.ಯೋಗೀಶ್, ದೇವೇಂದ್ರಪ್ಪ, ಪಿ.ಎಸ್. ಗಿರೀಶ್‍ರಾವ್, ವಿಶ್ವನಾಥ್ ಕಾಶಿ ಮತ್ತಿತರರು ಇದ್ದರು.

ಅರಣ್ಯ, ಕೈಗಾರಿಕಾ ನಿಗಮ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಸಾಗರ: ಬೆಂಗಳೂರಿನ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಶುಕ್ರವಾರ ಶುಭ ಮುಹೂರ್ತದಲ್ಲಿ ಅರಣ್ಯ ಮತ್ತು ಕೈಗಾರಿಕಾ ನಿಗಮ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಕಚೇರಿ ಪೂಜೆ ನಡೆಸಿದರು.

ಸಂಸದ ರಾಘವೇಂದ್ರ ಗೆಲ್ಲಿಸಲು ಶಾಮನೂರು ಕರೆ ನೀಡಿದ್ದು ಸ್ವಾಗತಾರ್ಹ: ಬಿ.ಎಸ್‌.ಯಡಿಯೂರಪ್ಪ

ಕಾಂಗ್ರೆಸ್ಸಿನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್, ಆಯನೂರು ಮಂಜುನಾಥ್, ಆರ್.ಎಂ. ಮಂಜುನಾಥ್ ಗೌಡ, ನಟ ಶ್ರೀನಗರ ಕಿಟ್ಟಿ, ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ, ಸುರೇಶ್ ಬಾಬು, ಹೊಳೆಯಪ್ಪ, ದಿನೇಶ, ಆನಂದ, ಅಶೋಕ ಬೇಳೂರು, ಅನಿತಾಕುಮಾರಿ, ಪ್ರಫುಲ್ಲಾ ಮಧುಕರ್ ಸೇರಿದಂತೆ ಹತ್ತಾರು ಸ್ಥಳೀಯ ಮುಖಂಡರು, ಗಣ್ಯರು ಹಾಜರಿದ್ದು ಶಾಸಕರಿಗೆ ಶುಭ ಕೋರಿದರು.

ಮಾಜಿ ಉಪ ಪ್ರಧಾನಿ, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ದೊರೆತಿದೆ. ರಾಮ ಮಂದಿರವನ್ನು ಮೋದಿ ಉದ್ಘಾಟನೆ ಮಾಡಿ ಭಾರತ ರತ್ನ ಅವರಿಗೆ ಕೊಟ್ಟಿದ್ದಾರೆ. ಹೋರಾಟ ಅಡ್ವಾಣಿ ಅವರದ್ದು, ಕಿರೀಟ ಮೋದಿ ಅವರದ್ದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

Follow Us:
Download App:
  • android
  • ios