ಮೈಸೂರು, (ಫೆ.06): ಕಾಂಗ್ರೆಸ್-ಜೆಡಿಎಸ್‌ ತೊರೆದು ಬಿಜೆಪಿ ಸೇರಿ ಬೈ ಎಲೆಕ್ಷನ್‌ನಲ್ಲಿ ಗೆದ್ದವರ ಪೈಕಿ 10 ಶಾಸಕರು ಇಂದು (ಗುರುವಾರ) ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬೆಂಗಳೂರಿನ ರಾಜಭನದ ಗಾಜಿನಮನೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲ ವಾಜುಭಾಯಿ ವಾಲಾ ಅವರು ನೂತನ ನೂತನ ಸಚಿವರುಗಳಿಗೆ ಪ್ರಮಾಣವಚನ ಬೋಧಿಸಿದರು.

"

ಬಿಎಸ್‌ವೈ ಸಂಪುಟಕ್ಕೆ ಸೇರ್ಪಡೆಯಾದ 10 ನೂತನ ಸಚಿವರ ಒಂದಿಷ್ಟು ಮಾಹಿತಿ ನಿಮಗಾಗಿ

ಆದ್ರೆ, ಮತ್ತೊಂದೆಡೆ ಸಂಪುಟ ವಿಸ್ತರಣೆಗೆ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಮೈಸೂರಿನ ಎಚ್‌.ಡಿ.ಕೋಟೆ ತಾಲೂಕಿ ಕಂಚಮಳ್ಳಿಯಲ್ಲಿ ಮಾತನಾಡಿರುವ ಕುಮಾರಸ್ವಾಮಿ, 105 ಜನ ಬಿಜೆಪಿ ಶಾಸಕರು ಕಡುಬು ತಿಂದುಕೊಂಡು ಕೂತಿರುತ್ತಾರಾ ? ಈಗ ಎಲ್ಲರೂ ಸುಮ್ಮನಿದ್ದಾರೆ. ಮುಂದೆ ಯಾರನ್ನು ಹೊಗಳುತ್ತಾರೆ ಕಾದು ನೋಡಿ ಎಂದು ಅಚ್ಚರಿ ಹೇಳಿಕೆ ನೀಡಿದ್ದು, ಬಿಜೆಪಿಯನ್ನು ಚಿಂತಗೀಡು ಮಾಡಿದೆ.

10 ಜನ ಸಚಿವರಾಗಿದ್ದಾರೆ.  ಉಳಿದವರು ಸುಮ್ಮನೆ ಇರುತ್ತಾರಾ ? ಕೋಡಿ ಮಠದ ಸ್ವಾಮೀಜಿ ಹೇಳಿದ್ದಾರೆ. ಈಗ ಸಮಸ್ಯೆ ಇಲ್ಲ, ಮುಂದೆ ಏನಾಗುತ್ತೋ ಗೊತ್ತಿಲ್ಲ. ಭವಿಷ್ಯ ಹೇಳಲು ನಾನು ಜ್ಯೋತಿಷಿ ಅಲ್ಲ ಮಾರ್ಮಿಕವಾಗಿ ಹೇಳಿದರು.

ಆರಿದ್ರಾ ನಕ್ಷತ್ರ ಲಗ್ನದಲ್ಲಿ 10 ನೂತನ ಸಚಿವರ ಪ್ರಮಾಣವಚನ:ಘಟಾನುಘಟಿಗಳು ಗೈರು

ಸರ್ಕಾರ ರಚಿಸುವುದು, ಬೀಳುವುದು ಅವರಿಗೆ ಚನ್ನಾಗಿ ಗೊತ್ತಿದೆ. ಹಿಂದೆ ಏನೆಲ್ಲ ಮಾಡಿದರು, ಹೇಗೆ ಸರ್ಕಾರ ರಚಿಸಿದರು ಎಂಬುದನ್ನು ಜನ ನೋಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಅಂತಷ್ಟೇ ಹೇಳುತ್ತೇನೆ. ಬೆಳಗ್ಗೆ ಒಂದು ತೀರ್ಮಾನ, ಮಧ್ಯಾಹ್ನ ಒಂದು ತೀರ್ಮಾನ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಬೀಳಿಸುವ, ಸರ್ಕಾರ ರಚಿಸುವ ಕಲೆ ಗೊತ್ತಿದೆ. ಯಡಿಯೂರಪ್ಪ ಅನುಭವಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

 ಒಟ್ಟಿನಲ್ಲಿ ಎಚ್‌ಡಿಕೆ ಹೇಳಿಕೆ ಒಂದು ರೀತಿಯಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು  ಕಾದು ನೋಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.

BSY ಕಾಲಿಗೆ ನೂತನ ಸಚಿವರ ನಮೋ ನಮಃ: ಬೆಳಗಾವಿ ಸಾಹುಕಾರ ನೋ ವೇ..!

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ