BSY ಕಾಲಿಗೆ ನೂತನ ಸಚಿವರ ನಮೋ ನಮಃ: ಬೆಳಗಾವಿ ಸಾಹುಕಾರ ನೋ ವೇ..!

ಕರ್ನಾಟಕ ವಿಧಾನಸಭಾ ಉಪಚುನಾವಣೆ ಫಲಿತಾಂಶ ಹೊರಬಿದ್ದ 2 ತಿಂಗಳ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಯ್ತು. ಈ ವೇಳೆ ನೂತನ ಸಚಿವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾಲಿಗೆ ಬಿದ್ದು ಕೃತಜ್ಞತೆ ತಿಳಿಸಿರುವುದು ವಿಶೇಷವಾಗಿತ್ತು.

Some karnataka new ministers takes blessings from cm bsy after oath

ಬೆಂಗಳೂರು, (ಫೆ.06):ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಗುರುವಾರ ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ನೂತನ 10 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. 

ಬಿಎಸ್‌ವೈ ಸಂಪುಟಕ್ಕೆ ಸೇರ್ಪಡೆಯಾದ 10 ನೂತನ ಸಚಿವರ ಒಂದಿಷ್ಟು ಮಾಹಿತಿ ನಿಮಗಾಗಿ

ರಾಜ್ಯಪಾಲ ವಿ.ಆರ್. ವಾಲಾ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. 10 ಜನರ ಪೈಕಿ ರಮೇಶ್ ಜಾರಕಿಹೊಳಿ ಹಾಗೂ ಆನಂದ್ ಸಿಂಗ್ ಹೊರತುಪಡಿಸಿ ಇನ್ನುಳಿದ 8 ಜನರು ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದುಬಂದ ವೇಳೆ ಬಿಎಸ್ ಯಡಿಯೂರಪ್ಪ ಕೊಟ್ಟ ಮಾತಿನಂತೆ 11 ಜನರಲ್ಲಿ 10 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡರು. 

ಈ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕೆಲವರು ಯಡಿಯೂಪರಪ್ಪ ಅವರ ಕಾಲಿಗೆ ಬಿದ್ದು ಧನ್ಯವಾದ ತಿಳಿಸಿದರು. ಯಶವಂತಪುರ ನೂತನ ಶಾಸಕ ಎಸ್.ಟಿ ಸೋಮಶೇಖರ್ ಫಸ್ಟ್ ಪ್ರಮಾಣವಚನ ಸ್ವೀಕರಿಸಿದ ಬಳಿಕ ಯಡಿಯೂರಪ್ಪನವರ ಕಾಲಿಗೆರಗಿ ಅಭಿನಂದನೆ ತಿಳಿಸಿದರು. 

ಆರಿದ್ರಾ ನಕ್ಷತ್ರ ಲಗ್ನದಲ್ಲಿ 10 ನೂತನ ಸಚಿವರ ಪ್ರಮಾಣವಚನ:ಘಟಾನುಘಟಿಗಳು ಗೈರು

ಬೆಳಗಾವಿ ಸಾಹುಕಾರ ಹೊರತುಪಡಿಸಿ ಇಆನಂದ್ ಸಿಂಗ್, ಡಾ.ಸುಧಾಕರ್, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜ್, ಗೋಪಾಲಯ್ಯ, ನಾರಾಯಣಗೌಡ, ಬಿ.ಸಿ.ಪಾಟೀಲ್, ಶ್ರೀಮಾಂತ ಪಾಟೀಲ್ ಸೇರಿದಂತೆ ಎಲ್ಲರೂ ತಲೆ ಬಗ್ಗಿಸಿ ಬಿಎಸ್‌ವೈ ಕಾಲಿಗೆ ಬಿದ್ದು ನಮಸ್ಕರಿಸಿದರು. 

ಆದ್ರೆ, ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಮಾತ್ರ ಬರೀ ಕೈಕೊಟ್ಟು ಥ್ಯಾಂಕ್ಸ್ ಹೇಳಿ ನಡೆದರು.

Latest Videos
Follow Us:
Download App:
  • android
  • ios