ಆರಿದ್ರಾ ನಕ್ಷತ್ರ ಲಗ್ನದಲ್ಲಿ 10 ನೂತನ ಸಚಿವರ ಪ್ರಮಾಣವಚನ:ಘಟಾನುಘಟಿಗಳು ಗೈರು
ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಸಂಪುಟ ವಿಸ್ತರಣೆ ಕೊನೆಗೂ ಆಯ್ತು. ಆರಿದ್ರಾ ನಕ್ಷತ್ರದ ಲಗ್ನದ 10 ನೂತನ ಸಚಿವರ ಪ್ರಮಾಣವಚನ ಸ್ವೀಕರಿಸಿದರು.
ಬೆಂಗಳೂರು, (ಫೆ.06): ಇಂದು (ಗುರುವಾರ) ಬೆಳಗ್ಗೆ 10.30ಕ್ಕೆ ಜ್ಯೋತಿಷಿಗಳ ಸಲಹೆ ಮೇರೆಗೆ ಆರಿದ್ರಾ ನಕ್ಷತ್ರದ ಲಗ್ನದಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗಿದ್ದು, 10 ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಒಂದೆಡೆ ಸಂಪುಟ ಸಂಭ್ರಮ: ಮತ್ತೊಂದೆಡೆ ಬಿಎಸ್‌ವೈಗೆ ಹೊಸ ಸಂದೇಶ ರವಾನಿಸಿದ ಬಿಜೆಪಿ ಶಾಸಕ
ರಾಜ್ಯಪಾಲ ವಾಜುಭಾಯಿ ವಾಲಾ 10 ನೂತನ ಸಚಿವರುಗಳಿಗೆ ಪ್ರಮಾಣ ವಚನ ಬೋಧಿಸಿದರು. ರಾಜಭವನದಲ್ಲಿ ಗಾಜಿನ ಮನೆಯಲ್ಲಿ ನಡೆದ ಸಂಪುಟ ಸಂಭ್ರಮದಲ್ಲಿ ಮುಖ್ಯಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಸಚಿವರುಗಳು. ಬಿಜೆಪಿ ಶಾಸಕರು ಮತ್ತು ನಾಯಕರು ಭಾಗವಹಿಸಿದ್ದರು.
ಒಂದು ವಿಶೇಷ ಅಂದ್ರೆ 10 ನೂತನ ಸಚಿವರ ಪೈಕಿ 8 ಜನರು ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ರಮೇಶ್ ಜಾರಕಿಹೊಳಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪೌರಾಡಳಿತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆನಂದಸಿಂಗ್ ಅವರು ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
10 ಶಾಸಕರ ಪೈಕಿ 8 ಮಂದಿ ಇದೇ ಮೊದಲ ಸಲ ಮಂತ್ರಿ!
ಮೈತ್ರಿ ಸರ್ಕಾರ ಅವಧಿಯಲ್ಲಿ ಎಸ್.ಟಿ.ಸೋಮಶೇಖರ್ ಬಿಡಿಎ ಅಧ್ಯಕ್ಷರಾಗಿ, ಡಾ.ಕೆ.ಸುಧಾಕರ್ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಹಾಗೂ ಬೈರತಿ ಬಸವರಾಜು ಅವರು ಕರ್ನಾಟಕ ಸೋಪು ಮತ್ತು ಮಾರ್ಜಕ ಲಿಮಿಟೆಡ್ ಅಧ್ಯಕ್ಷರಾಗಿ ಅಲ್ಪ ಕಾಲ ಕಾರ್ಯನಿರ್ವಹಿಸಿದ್ದರು. ಇವರ ಜತೆಗೆ ನಾರಾಯಣಗೌಡ, ಬಿ.ಸಿ.ಪಾಟೀಲ್, ಶ್ರೀಮಂತ ಪಾಟೀಲ್, ಶಿವರಾಂ ಹೆಬ್ಬಾರ್ ಮತ್ತು ಗೋಪಾಲಯ್ಯ ಅವರು ಮೊದಲ ಬಾರಿಗೆ ಸಚಿವ ಭಾಗ್ಯ ಪಡೆದುಕೊಂಡಿದ್ದಾರೆ.
ಈ ಹತ್ತು ಶಾಸಕರು 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.
10 ಶಾಸಕರ ಪೈಕಿ 8 ಮಂದಿ ಇದೇ ಮೊದಲ ಸಲ ಮಂತ್ರಿ!
ಪ್ರಮಾಣ ವಚನ ಸಮಾರಂಭಕ್ಕೆ ಸಚಿವ ಸ್ಥಾನ ಆಕಾಂಕ್ಷಿಗಳ ಗೈರು
ಮಹೇಶ್ ಕುಮಟಳ್ಳಿ, ಉಮೇಶ್ ಕತ್ತಿ, ರಾಮುಲು, ಸಿ.ಪಿ.ಯೋಗೇಶ್ವರ್, ಪ್ರತಾಪ್ಗೌಡ ಪಾಟೀಲ್, ಮುನಿರತ್ನ ಮುರುಗೇಶ್ ನಿರಾಣಿ, ಎಂ.ಬಿ. ನಾಗರಾಜ್ ಸೇರಿದಂತೆ ಪ್ರಮಾಣ ವಚನಕ್ಕೆ ಡಜನ್ ಶಾಸಕರು ಗೈರಾಗಿದ್ದಾರೆ.
ಡಾ.ಕೆ.ಸುಧಾಕರ್ -ಚಿಕ್ಕಬಳ್ಳಾಪುರ
ಬಿ.ಸಿ.ಪಾಟೀಲ್ -ಹಿರೇಕೆರೂರು
ಶಿವರಾಮ್ ಹೆಬ್ಬಾರ್ -ಯಲ್ಲಾಪುರ
S.T.ಸೋಮಶೇಖರ್ - ಯಶವಂತಪುರ
ಆನಂದ್ ಸಿಂಗ್ -ವಿಜಯನಗರ (ಹೊಸಪೇಟೆ)
ನಾರಾಯಣಗೌಡ -ಕೆ.ಆರ್.ಪೇಟೆ
ಭೈರತಿ ಬಸವರಾಜ್ -ಕೆ,ಆರ್.ಪುರಂ
ಕೆ.ಗೋಪಾಲಯ್ಯ -ಮಹಾಲಕ್ಷ್ಮೀ ಲೇಔಟ್
ಶ್ರೀಮಂತ್ ಪಾಟೀಲ್ -ಕಾಗವಾಡ
ರಮೇಶ್ ಜಾರಕಿಹೊಳಿ -ಗೋಕಾಕ್
ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ