ಗುಜರಾತ್‌ನಲ್ಲಿ ಸತತ ಏಳು ಬಾರಿ ಗೆಲುವು ಸಾಧಿಸಲು ತುದಿಗಾಲಲ್ಲಿ ಇರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿಯೂ ಗೆಲ್ಲಲು ಕಮಾಲ್‌ ಮಾಡಲಿದೆಯೇ ಎಂಬುದು ಎಲ್ಲರ ನಿರೀಕ್ಷೆಯಾಗಿದೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಪ್ರಭಲವಾಗಿದ್ದು, ಏನೆಲ್ಲಾ ಸವಾಲುಗಳು ಎದುರಾಗಲಿವೆ ಎನ್ನುವುದು ಈ ಸ್ಟೋರಿಯಲ್ಲಿದೆ ನೋಡಿ.

ಏಷ್ಯಾನೆಟ್‌ ಸುವರ್ಣ ನ್ಯೂಸ್ ಸ್ಪೆಷಲ್ 

ಬೆಂಗಳೂರು (ಡಿ.7): ತವರು ರಾಜ್ಯ ಗುಜರಾತ್'ನಲ್ಲಿ ಸಪ್ತವಿಜಯಕ್ಕೆ ವೇದಿಕೆ ಸಿದ್ಧಮಾಡಿಕೊಂಡಿರುವ ನರೇಂದ್ರ ಮೋದಿವರ ಮುಂದಿನ ಟಾರ್ಗೆಟ್‌ ಕರ್ನಾಟಕದಲ್ಲಿ ಗೆಲ್ಲುವುದಾಗಿದೆ. ಇನ್ನುಮುಂದೆ ಕರ್ನಾಟಕಕ್ಕೆ ನರೇಂದ್ರ ಮೋದಿ ಅವರ 'ಯಜ್ಞಾಶ್ವ' ನುಗ್ಗಲಿದೆ. ಕರುನಾಡಲ್ಲೂ ಧೂಳೆಬ್ಬಿಸಲಿದ್ಯಾ ಮೋದಿ ಅಶ್ವಮೇಧದ ಕುದುರೆ ಎನ್ನುವುದನ್ನು ಕಾದುನೋಡಬೇಕಿದೆ.

ಗುಜರಾತಿನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಅಂತ 'ಎಕ್ಸಿಟ್ ಪೋಲ್'ಗಳು ಹೇಳ್ತಾ ಇವೆ. ಆದರೆ ಕರ್ನಾಟಕದ ಕಥೆಯೇ ಬೇರೆ ಅಂತ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಇದಕ್ಕೆ ಕಾರಣವಾಗಿರೋ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿಯೇ ಬೇರೆ ಇದೆ. ಗುಜರಾತ್ ಫಲಿತಾಂಶ ಕರ್ನಾಟಕ ಚುನಾವಣೆಗೆ ದಿಕ್ಸೂಚಿ ಆಗುತ್ತಿದೆಯೇ ಎಂದು ಕಂಡುಬರುತ್ತದೆ. ಮೋದಿ ಇದ್ದಾರೆ ಅನ್ನೋ ಕಾರಣಕ್ಕೆ ಕರ್ನಾಟಕದಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಬಿಜೆಪಿಗೆ ಮಹಾವೀರ ಮೋದಿಯವರೇ ಅಸ್ತ್ರ ಮತ್ತು ಅವರೇ ಬ್ರಹ್ಮಾಸ್ತ್ರವಾಗಿದ್ದಾರೆ. ಆ ಬ್ರಹ್ಮಾಸ್ತ್ರವನ್ನು ಕಾಂಗ್ರೆಸ್ ಹೇಗೆ ಎದುರಿಸಲಿದೆ ಎನ್ನುವುದರ ಮೇಲೆ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ನಿರ್ಧಾರವಾಗಲಿದೆ.

ಕರ್ನಾಟಕ ಚುನಾವಣೆಗೆ ಗುಜರಾತ್ ಮಾಡೆಲ್ ಅನುಸರಿಸುತ್ತಾ ಬಿಜೆಪಿ? ಆತಂಕದಲ್ಲಿ ಹಲವರು!

ಕೇಸರಿ ಕಲಿಗಳಿಂದ ಮೀಸೆ ತಿರುವುದು ಆರಂಭ: ಗುಜರಾತ್‌ನ ಫಲಿತಾಂಶವೇ ಕರ್ನಾಟಕದ ಮೇಲೆಯೂ ಬೀರಲಿದೆ ಎಂಬಂತೆ ರಾಜ್ಯದಲ್ಲಿ ಕೇಸರಿ ಕಲಿಗಳು ಮೀಸೆ ತಿರುವುತ್ತಿದ್ದಾರೆ. ಒಂದು ರಾಜ್ಯದಲ್ಲಿ ಜನರು ಸತತ ಏಳು ಬಾರಿ ಒಂದೇ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆಂದರೆ ಅದು ಸಾಮಾನ್ಯವಲ್ಲ. ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನರನ್ನು ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಮುಂದಿನ ಬಾರಿ ನೂರಕ್ಕೆ ನೂರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನರೇಂದ್ರ ಮೋದಿಗೆ ಮತಗಳು ಮೀಸಲು: ರಾಜ್ಯದ ನಗರ ಪ್ರದೇಶಗಲ್ಲಿ ನರೇಂದ್ರ ಮೋದಿ ಅವರನ್ನು ನೋಡಿ ಮತಗಳನ್ನು ಹಾಕುವ ಪ್ರತ್ಯೇಕ ವರ್ಗವೇ ಇದೆ. ಈ ಬಗ್ಗೆ 2018ರ ಚುನಾವಣೆಯಲ್ಲಿಯೂ ಸ್ಪಷ್ಟವಾಗಿ ಕಂಡುಬಂದಿದೆ. ಮುಂದಿನ ದಿನಗಳಲ್ಲಿಯೂ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆಯಲ್ಲಿಯೂ ರಾಜ್ಯಕ್ಕೆ ಮೋದಿ ಆಗಮಿಸಲಿದ್ದು, ಹೆಚ್ಚಿನ ಮತಗಳು ಬಿಜೆಪಿಗೆ ಹೋಗಲಿವೆ. ಈ ಲೆಕ್ಕಾಚಾರವನ್ನು ಬಿಜೆಪಿ ಒಂದು ಕಡೆ ನಂಬಿಕೊಂಡಿದೆ. ಜೊತೆಗೆ, ಆಡಳಿತ ಸರ್ಕಾರ ಅಧಿಕಾರದಲ್ಲಿ ಇರುವ ಹಿನ್ನೆಲೆಯಲ್ಲಿ ಸಾಧನೆಗಳನ್ನು ಜನರ ಮುಂದಿಟ್ಟು ಗೆಲ್ಲಲು ಸಿದ್ಧರೆ ನಡೆಸಿದ್ದಾರೆ. 

ಗುಜರಾತ್'ನಲ್ಲಿ ಮತ್ತೆ ಬಿಜೆಪಿ ಪಾರುಪತ್ಯ?: ಎಕ್ಸಿಟ್ ಪೋಲ್ ಏನು ಹೇಳುತ್ತಿವೆ?

ಬಿಜೆಪಿ ಕಾಂಗ್ರೆಸ್‌ ಪ್ರಭಲ ಪೈಪೋಟಿ: ರಾಜ್ಯದಲ್ಲಿ ಮೇಕೆದಾಟು, ಭಾರತ್‌ ಜೋಡೋ ಮತ್ತು ಸಿದ್ಧರಾಮೋತ್ಸವದ ಮೂಲಕ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಕೂಡ ಪ್ರಭಲವಾಗಿದೆ. ಇನ್ನು ಕಳೆದ ಏಳು ವರ್ಷಗಳಿಂದ ಸತತವಾಗಿ ಗುಜರಾತ್‌ನಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಗೆಲುವಿನ ತಂತ್ರವೇ ಬೇರೆಯಿದೆ. ಅಲ್ಲಿನ ಕಾಂಗ್ರೆಸ್‌ ಸ್ಥಿತಿಗಿಂತ ರಾಜ್ಯದ ಕಾಂಗ್ರೆಸ್‌ ಪ್ರಭಾವ ಭಾರಿ ವಿಭಿನ್ನವಾಗಿದೆ. ದೇಶದೆಲ್ಲೆಡೆ ಕಾಂಗ್ರೆಸ್‌ ಕಾಲುಮುರಿದುಕೊಂಡು ಬಿದ್ದಿದ್ದರೂ ಕರ್ನಾಟಕದಲ್ಲಿ ನಿರಂತರವಾಗಿ ಓಡುತ್ತಿದೆ. ಇಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಜೋಡೆತ್ತಿನ ಬಂಡಿಯಲ್ಲಿ ನಾಗಾಲೋಟದಿಂದ ಸಾಗುತ್ತಿದೆ. ಆದರೆ, ನರೇಂದ್ರ ಮೋದಿ ಬ್ರಹ್ಮಾಸ್ತ್ರವನ್ನು ಹೇಗೆ ನಿಯಂತ್ರಣ ಮಾಡಲಿದೆ ಎಂಬುದರ ಮೇಲೆ ಕಾಂಗ್ರೆಸ್‌ ಗೆಲುವು ನಿರ್ಧಾರವಾಗಲಿದೆ.

ರಾಜ್ಯದಲ್ಲಿ ಚುನಾವಣೆಗಿರುವ ಸವಾಲುಗಳು:

  • ಕೇಸರಿ ಪಕ್ಷಕ್ಕೆ ಹೇಗಿದೆ ಕರ್ನಾಟಕ ಚಾಲೆಂಜ್..?
  • ಕರ್ನಾಟಕ ಗೆಲ್ಲಲು ಸಿದ್ಧವಾಗ್ತಿದೆ ಮೋದಿ ರಣವ್ಯೂಹ..!
  • ರಣವಿಕ್ರಮನ ಮುಂದಿನ ಗುರಿ ಕರ್ನಾಟಕ ಕುರುಕ್ಷೇತ್ರ..!
  • ದಕ್ಷಿಣ ಭಾರತದ ಹೆಬ್ಬಾಗಿಲು ಗೆಲ್ಲಲು ಮೋದಿ ಮೆಗಾ ಪ್ಲಾನ್..!
  • ಗುಜರಾತ್‌ನಲ್ಲಿ ಮೋದಿ 30ಕ್ಕೂ ಸಮಾವೇಶ, ಶತ್ರು ನಾಮಾವಶೇಷ..!
  • ಕರುನಾಡಲ್ಲೂ ಧೂಳೆಬ್ಬಿಸಲಿದ್ಯಾ ಮೋದಿ ಅಶ್ವಮೇಧದ ಕುದುರೆ..?
  • "ಉರಗ"ವ್ಯೂಹ ಭೇಧಿಸುತ್ತಾ ಮೋದಿ ಅಶ್ವಮೇಧ ತುರಗ..?
  • ಮೋದಿ ಹೆಸರೇ ರಾಜ್ಯದಲ್ಲಿ ಬಿಜೆಪಿಗೆ ಗದ್ದುಗೆ ಗೆದ್ದು ಕೊಡುತ್ತಾ..?