ಗೃಹಜ್ಯೋತಿ ನೋಂದಣಿ ಜೂನ್ 18ರಿಂದ ಆರಂಭ, ಮಾನದಂಡ ಬಿಡುಗಡೆ, ಏನೆಲ್ಲ ದಾಖಲೆಗಳು ಬೇಕು?
ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯ ನೋಂದಣಿ ಜೂನ್ 18ರಿಂದ ಆರಂಭವಾಗಲಿದೆ ಎಂದು ರಾಜ್ಯಸರಕಾರ ತಿಳಿಸಿದೆ. ಈ ಬಗ್ಗೆ ಹಲವು ಮಾನದಂಡಗಳನ್ನು ಬಿಡುಗಡೆ ಮಾಡಿದೆ.
ಬೆಂಗಳೂರು (ಜೂ.17): ರಾಜ್ಯದ ಜನರಿಗೆ ಕೊಟ್ಟ ಭರವಸೆಯಂತೆ 5 ಗ್ಯಾರಂಟಿಗಳನ್ನು ನೀಡಲು ಕಾಂಗ್ರೆಸ್ ಸರಕಾರ ಯೋಜನೆ ಹಾಕಿಕೊಂಡಿದ್ದು, ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ - ಉಚಿತ ಬೆಳಕು, ಸುಸ್ತಿರ ಬದುಕು ಎಂಬ ಟ್ಯಾಗ್‌ಲೈನ್ ನಡಿ ಯೋಜನೆಗೆ ಸಂಬಂಧಿಸಿದ ಪ್ರಕಟಣೆ ಹೊರಡಿಸಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ನೋಂದಣಿಯನ್ನು 2023ರ ಜೂನ್ 18ರಿಂದ ಪ್ರಾರಂಭವಾಗಲಿದೆ. ಈ ಯೋಜನೆಯಡಿ ಲಾಭ ಪಡೆಯಲಿಚ್ಛಿಸುವ ಫಲಾನುಭವಿಗಳಿಗಾಗಿ ವಿಶೇಷವಾಗಿ ಸೃಜಿಸಲಾಗಿರುವ ಕಸ್ಟಮ್ ಮೇಡ್ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಬೇಕು. ಮಾಸಿಕ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯ ಬಗ್ಗೆ ಹಲವು ಮಾನದಂಡಗಳನ್ನು ಸರಕಾರ ಬಿಡುಗಡೆ ಮಾಡಿದೆ. ಜೊತೆಗೆ ಹೆಸರು ನೋಂದಾಯಿಸಲು ಕ್ಯೂ ಆರ್ ಕೋಡ್ ಕೂಡ ನೀಡಲಾಗಿದೆ.
ಗೃಹಲಕ್ಷ್ಮೀ, ಗೃಹಜ್ಯೋತಿ ಗ್ಯಾರಂಟಿಗಳಿಗೆ ಮುಹೂರ್ತ್ ಫಿಕ್ಸ್ !: ಸೋಮವಾರದಿಂದ 'ಶಕ್ತಿ'ಸ್ಮಾರ್ಟ್ ಕಾರ್ಡ್‌ಗೆ ಅರ್ಜಿ ಸ್ವೀಕಾರ
ಗೃಹಜ್ಯೋತಿ ಯೋಜನೆ ನೋಂದಣಿಯ ಪ್ರಮುಖ ಮಾನದಂಡಗಳು ಇಂತಿದೆ:
- ಗ್ರಾಹಕರು ಸೇವಾಸಿಂಧು ಪೋರ್ಟಲ್ : https://sevasindhugs.karnataka.gov.in (ಮೊಬೈಲ್/ ಕಂಪ್ಯೂಟರ್/ ಲ್ಯಾಪ್‌ಟಾಪ್ ಗಳಲ್ಲಿ) ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್, ನಾಡಕಛೇರಿ ಅಥವಾ ಎಲ್ಲಾ ವಿದ್ಯುತ್ ಕಛೇರಿಗಳಲ್ಲಿ ನೋಂದಾಯಿಸಬಹುದಾಗಿದೆ.
- ನೋಂದಣಿ ಮಾಡುವಾಗ ಆಧಾರ್ ಸಂಖ್ಯೆ, ವಿದ್ಯುತ್ ಬಿಲ್ ನಲ್ಲಿ ನೀಡಲಾದ ವಿದ್ಯುತ್ ಖಾತೆ ಸಂಖ್ಯೆ, ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ
- ಹೆಚ್ಚಿನ ಮಾಹಿತಿಗಾಗಿ ಸಮೀಪದ ವಿದ್ಯುತ್ ಕಛೇರಿಯನ್ನು ಸಂಪರ್ಕಿಸಿ ಅಥವಾ 24X7 ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆಮಾಡಿ ಅಥವಾ ಇಂಧನ ಇಲಾಖೆಯ ಅಧಿಕೃತ ವೆಬ್‌ಸೈಟ್ https://energy.karnataka.gov.in ಗೆ ಭೇಟಿ ನೀಡಿ.
ಗೃಹಜ್ಯೋತಿ ಯೋಜನೆ ಯಾರಿಗಿದೆ..ಯಾರಿಗಿಲ್ಲ. ಬಾಡಿಗೆದಾರನಿಗೂ ಸಿಗುತ್ತಾ ಬಂಪರ್..?
ಹಿಂದಿನ ವರ್ಷದ ಸರಾಸರಿ ಬಳಕೆಯ ಶೇ.10 ರಷ್ಟುಹೆಚ್ಚುವರಿ ವಿದ್ಯುತ್ ಉಚಿತವಾಗಿ ಬಳಸಬಹುದು. ಗರಿಷ್ಠ ವಿದ್ಯುತ್ ಬಳಕೆ ಮಿತಿ 200 ಯುನಿಟ್ ದಾಟಿದರೆ ಪೂರ್ಣ ಶುಲ್ಕ ಪಾವತಿಸಬೇಕು.
Karnataka Textbook Revision: ಪಠ್ಯ ಪುಸ್ತಕ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ, ಕನ್ನಡ
ಯೋಜನೆ ಹಾಗೂ ಅರ್ಜಿ ಸಲ್ಲಿಕೆ ಸಂಬಂಧ ಯಾವುದೇ ಗೊಂದಲಗಳಿದ್ದರೂ ಹೆಚ್ಚಿನ ಮಾಹಿತಿಗೆ 1912ಗೆ ಸಂಪರ್ಕಿಸಬಹುದು ಎಂದು ಇಂಧನ ಇಲಾಖೆ ಪ್ರಕಟಣೆ ಮೂಲಕ ಈಗಾಗಲೇ ತಿಳಿಸಿದೆ.