Karnataka Textbook Revision: ಪಠ್ಯ ಪುಸ್ತಕ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ, ಕನ್ನಡದ 9 ಪಾಠಕ್ಕೆ ಕೊಕ್!
ಪಠ್ಯ ಪುಸ್ತಕ ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಮಾಜ ವಿಜ್ಞಾನ ವಿಷಯಗಳಿಗೆ ಬದಲಾವಣೆ ಮಾಡಲಾಗಿದೆ. ಕನ್ನಡ ಭಾಷಾ ಪುಸ್ತಕದಲ್ಲಿ 9 ಪಾಠಕ್ಕೆ ಕೊಕ್ ನೀಡಲಾಗಿದೆ.
ಬೆಂಗಳೂರು (ಜೂ.17): ಪಠ್ಯ ಪುಸ್ತಕ ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಮಾಜ ವಿಜ್ಞಾನ ವಿಷಯಗಳಿಗೆ ಬದಲಾವಣೆ ಮಾಡಲಾಗಿದೆ. ಕೈಬಿಡುವ ಪಾಠದ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಕನ್ನಡ ಭಾಷಾ ಪುಸ್ತಕದಲ್ಲಿ 9 ಪಾಠಕ್ಕೆ ಕೊಕ್ ನೀಡಲಾಗಿದೆ. ಸಮಾಜ ವಿಜ್ಞಾನದಲ್ಲಿ 9 ಪಾಠಕ್ಕೆ ಕೊಕ್ ನೀಡಲಾಗಿದೆ. ಕೇಶವ್ ಹೆಡ್ಗೇವಾರ್ ಬರೆದಿದ್ದ ಗದ್ಯ-ನಿಜವಾದ ಆದರ್ಶಪುರುಷ ಯಾರಾಗಬೇಕು ಎಂಬ ಪಠ್ಯಕ್ಕೆ ಕೊಕ್, ಚಕ್ರವರ್ತಿ ಸೂಲಿಬೆಲೆ ಅವರ ತಾಯಿ ಭಾರತಿಯ ಅಮರ ಪುತ್ರರು ಪಾಠಕ್ಕೆ ಕತ್ತರಿ ಹಾಕಲಾಗಿದೆ. ಶತಾವಧಾನಿ ಆರ್ ಗಣೇಶ್ ಗದ್ಯ - ಶ್ರೇಷ್ಠ ಭಾರತೀಯ ಚಿಂತನೆಗಳು ಕೈಬಿಟ್ಟ ಸರ್ಕಾರ.
ಈಗಿನ ಪಠ್ಯ ಸಮಿತಿ ಜೊತೆ ಚರ್ಚೆಗೆ ಸಿದ್ಧ: ರೋಹಿತ್ ಚಕ್ರತೀರ್ಥ
ನಿರ್ಮಲಾ ಸುರತ್ಕಲ್, ರಮಾನಂದ ಆಚಾರ್ಯರ ಪಾಠಕ್ಕೂ ಕೊಕ್. ಪಾರಂಪಳ್ಳಿ ನರಸಿಂಹ ಐತಾಳ, ಲಕ್ಷ್ಮೀಶ, ಕೆ ಟಿ ಗಟ್ಟಿ ಪಾಠವೂ ಇಲ್ಲ. ಪಿ ಸತ್ಯನಾರಾಯಣ ಭಟ್ಟರ ಗದ್ಯಕ್ಕೂ ಕತ್ತರಿ ಹಾಕಲಾಗಿದೆ. ಸಾವಿತ್ರಿ ಪುಲೆ, ಜವಹರಲಾಲ್ ನೆಹರು, ಅಂಬೇಡ್ಕರ್ ಪಠ್ಯ ಸೇರ್ಪಡೆ ಮಾಡಲಾಗಿದೆ. ಸುಕುಮಾರಸ್ವಾಮಿ ಕುರಿತ ಪಠ್ಯಕ್ಕೆ ಅವಕಾಶ ನೀಡಲಾಗಿದೆ. ಸಾರಾ ಅಬೂಬ್ಕರ್, ವಿಜಯಮಾಲಾ ರಂಗನಾಥ್ ಪಾಠ ಸೇರ್ಪಡೆ ಮಾಡಲಾಗಿದೆ. ವಾಲ್ಮೀಕಿ ಮಹರ್ಷಿ, ಉರುಸ್ಗಳಲ್ಲಿ ಭಾವೈಕ್ಯತೆ ಪಾಠ ಜೋಡಣೆ ಮಾಡಲಾಗಿದೆ. ಸಮಾಜ ವಿಜ್ಞಾನ ಪಠ್ಯದಲ್ಲೂ ಹಲವು ಅಧ್ಯಾಯ ಸೇರ್ಪಡೆ ಮಾಡಲಾಗಿದೆ. ವೇದ ಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ ಕುರಿತ ಅಧ್ಯಾಯ. ಮಿರ್ಜಾ ಇಸ್ಮಾಯಿಲ್. ವಿಶ್ವೇಶ್ವರಯ್ಯ, ಒಡೆಯರ್ ಕುರಿತ ಪಾಠ ಸೇರ್ಪಡೆ ಮಾಡಲಾಗಿದೆ.
ಬಿಜೆಪಿ ಪರಿಷ್ಕರಿಸಿದ್ದ ಎಲ್ಲ ಪಾಠಗಳಿಗೂ ಕೊಕ್: ಈ ವರ್ಷ ಬರಗೂರು ಸಿದ್ಧಪಡಿಸಿದ್ದ ಪಠ್ಯ
ಈ ವರ್ಷ ಬರಗೂರು ಸಿದ್ಧಪಡಿಸಿದ್ದ ಪಠ್ಯ ಬೋಧನೆ:
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳ ಮಕ್ಕಳಿಗೆ ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿದ್ದ ಪಠ್ಯಪುಸ್ತಕಗಳಲ್ಲಿದ್ದ ಪಾಠಗಳನ್ನೇ ಸಂಪೂರ್ಣವಾಗಿ ಬೋಧಿಸಲು ಸರ್ಕಾರ ತೀರ್ಮಾನಿಸಿದೆ.
ಈ ನಿಟ್ಟಿನಲ್ಲಿ ಸುಮಾರು 100ಕ್ಕೂ ಹೆಚ್ಚು ಪುಟಗಳ ಪ್ರತ್ಯೇಕ ಪಠ್ಯ ಕೈಪಿಡಿಯೊಂದನ್ನು ಮುದ್ರಿಸಿ ಶಾಲೆಗಳಿಗೆ ರವಾನಿಸಲು ಮುಂದಾಗಿದ್ದು, ಇದಕ್ಕೆ ಸುಮಾರು 40 ಲಕ್ಷ ರು.ವೆಚ್ಚವಾಗಲಿದೆ ಎನ್ನಲಾಗಿದೆ.
ಸದ್ಯ ನಾವು ಯಾವುದೇ ಹೊಸ ಪಾಠಗಳನ್ನು ಸೇರಿಸುತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ಪರಿಷ್ಕರಣೆಯಾಗಿದ್ದ ಪಾಠಗಳನ್ನು ತೆಗೆದು ಅದಕ್ಕೂ ಮುನ್ನ ಇದ್ದ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯ ಸಮಿತಿ ಸಿದ್ಧಪಡಿಸಿದ್ದ ಪಠ್ಯಪುಸ್ತಕಗಳಲ್ಲಿ ಇದ್ದ ವಿಷಯಗಳನ್ನು ಮತ್ತೆ ಸೇರ್ಪಡೆ ಮಾಡಲಾಗುತ್ತಿದೆ. ಅಂತಹ ಪಾಠಗಳ ಪಟ್ಟಿಮಾಡಿಕೊಡಲು ಬರಗೂರು ಅವರ ಸಮಿತಿಯಲ್ಲೇ ಇದ್ದ ಐವರು ವಿಷಯ ತಜ್ಞರಿಗೆ ಸೂಚಿಸಲಾಗಿತ್ತು. ಅವರು ನೀಡಿರುವ ವರದಿಯನ್ನು ಸಚಿವ ಸಂಪುಟ ಸಭೆ ಒಪ್ಪಿದೆ. ಸೋಮವಾರ ಅಥವಾ ನಂತರದ ಕೆಲ ದಿನಗಳಲ್ಲಿ ಯಾವ ಪಾಠ ತೆಗೆದಿದ್ದೇವೆ, ಯಾವುದು ಸೇರಿಸಲಾಗಿದೆ ಎಂಬುದನ್ನು ಸಾರ್ವಜನಿಕ ವೇದಿಕೆಗೆ ಬಹಿರಂಗಪಡಿಸಲಾಗುವುದು.
- ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ