ತಮಿಳುನಾಡಿನಾದ್ಯಂತ ಡಿಎಂಕೆ ಕಾರ್ಯಕರ್ತರು ಪ್ರಧಾನಿ ಮೋದಿ ಚಿತ್ರವಿರುವ ಬಾರ್‌ಕೋಡ್‌ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಅದನ್ನು ಸ್ಕ್ಯಾನ್‌ ಮಾಡಿದರೆ ಬಿಜೆಪಿ ಸರ್ಕಾರದ ‘ಹಗರಣಗಳ’ ಮಾಹಿತಿ ಲಭಿಸುತ್ತದೆ. ಜನಪ್ರಿಯ ಗೂಗಲ್‌ ಪೇ (ಜಿ-ಪೇ) ಆ್ಯಪ್‌ನ ಹೆಸರು ಅನುಕರಿಸಿ ಇದಕ್ಕೆ ‘ಜಿ-ಪೇ’ (ಮೋದಿಜಿ ಪೇ) ಎಂದು ಹೆಸರಿಡಲಾಗಿದೆ.

ಚೆನ್ನೈ(ಏ.12): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ನವರು ಆಡಳಿತಾರೂಢ ಬಿಜೆಪಿ ವಿರುದ್ಧ ‘ಪೇಸಿಎಂ’ ಆಂದೋಲನ ನಡೆಸಿದ ಮಾದರಿಯಲ್ಲೇ ತಮಿಳುನಾಡಿನಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಡಿಎಂಕೆ ವತಿಯಿಂದ ‘ಜಿ-ಪೇ’ ಪೋಸ್ಟರ್‌ ಆಂದೋಲನ ಆರಂಭವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡಿನಾದ್ಯಂತ ಡಿಎಂಕೆ ಕಾರ್ಯಕರ್ತರು ಪ್ರಧಾನಿ ಮೋದಿ ಚಿತ್ರವಿರುವ ಬಾರ್‌ಕೋಡ್‌ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಅದನ್ನು ಸ್ಕ್ಯಾನ್‌ ಮಾಡಿದರೆ ಬಿಜೆಪಿ ಸರ್ಕಾರದ ‘ಹಗರಣಗಳ’ ಮಾಹಿತಿ ಲಭಿಸುತ್ತದೆ. ಜನಪ್ರಿಯ ಗೂಗಲ್‌ ಪೇ (ಜಿ-ಪೇ) ಆ್ಯಪ್‌ನ ಹೆಸರು ಅನುಕರಿಸಿ ಇದಕ್ಕೆ ‘ಜಿ-ಪೇ’ (ಮೋದಿಜಿ ಪೇ) ಎಂದು ಹೆಸರಿಡಲಾಗಿದೆ.

ಭಾರತದ ದಕ್ಷಿಣದ ತುದಿಯಿಂದ ಬಿಜೆಪಿ ಕಟ್ಟಲು ಮೋದಿ ತಂತ್ರ, ತಮಿಳುನಾಡಿನಲ್ಲಿ ಹೊಸ ಅಲೆ!

ಪ್ರಧಾನಿ ಮೋದಿ ಬುಧವಾರ ತಮಿಳುನಾಡಿನಲ್ಲಿ ಪ್ರಚಾರ ಸಮಾವೇಶ ನಡೆಸಿ ‘ಡಿಎಂಕೆ ಪಕ್ಷ ಈ ದೇಶದಲ್ಲಿ ಭ್ರಷ್ಟಾಚಾರಕ್ಕೆ ಮೊಟ್ಟಮೊದಲ ಕಾಪಿರೈಟ್‌ ಪಡೆದ ಪಕ್ಷ’ ಎಂದು ಟೀಕಿಸಿದ್ದರು. ಅದರ ಬೆನ್ನಲ್ಲೇ ಡಿಎಂಕೆಯಿಂದ ಮೋದಿ ವಿರುದ್ಧ ‘ಜಿ-ಪೇ’ ಪೋಸ್ಟರ್‌ ಸಮರ ಆರಂಭವಾಗಿದೆ.