ಕಟೀಲ್ ವಿದೂಷಕ, ಆತಗೆ ರಾಜಕೀಯ ಜ್ಞಾನ ಇಲ್ಲ: ಸಿದ್ದರಾಮಯ್ಯ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಕಿಡಿಕಾರಿದ್ದಾರೆ. ಅವನೊಬ್ಬ ವಿದೂಷಕ, ಆತನಿಗೆ ರಾಜಕೀಯ ಜ್ಞಾನವೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ನವದೆಹಲಿ (ಜ.31): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಕಿಡಿಕಾರಿದ್ದಾರೆ. ಅವನೊಬ್ಬ ವಿದೂಷಕ, ಆತನಿಗೆ ರಾಜಕೀಯ ಜ್ಞಾನವೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪುತ್ರರೂ ಬಿಜೆಪಿ ಸೇರುತ್ತಾರೆ ಎಂಬ ಕಟೀಲ್ ಹೇಳಿಕೆಗೆ ಸೋಮವಾರ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಆತ ಏನೇನೋ ಮಾತನಾಡುತ್ತಾನೆ ಎಂದು ಸಿಡಿಮಿಡಿಗೊಂಡರು.
ಬಿಜೆಪಿಗೆ 60-70 ಸೀಟು ಅಷ್ಟೆ: ಬಿಜೆಪಿ ರಥಯಾತ್ರೆಗೆ ಪ್ರತಿಕ್ರಿಯಿಸಿದ ಅವರು, ನಾವೇನು ರಥಯಾತ್ರೆ ಬೇಡ ಅಂತ ಹೇಳಿಲ್ಲ. ಅವರು ರಥಯಾತ್ರೆ ಮಾಡಲಿ, ಏನೂ ಸಮಸ್ಯೆ ಇಲ್ಲ. ಚುನಾವಣೆಯಲ್ಲಿ ಆ ಕುರಿತು ಜನರೇ ತೀರ್ಮಾನಿಸುತ್ತಾರೆ. ಜನ ಆಶೀರ್ವಾದ ಮಾಡದೇ ಇದ್ದರೆ ಯಾವ ರಾಜಕೀಯ ಪಕ್ಷ ಸಹ ಅಧಿಕಾರಕ್ಕೆ ಬರಲ್ಲ. ಇನ್ನು ಬಿಜೆಪಿಯ 150 ಟಾರ್ಗೆಟ್ ಕುರಿತು ವ್ಯಂಗ್ಯವಾಡಿದ ಅವರು, 60-70 ಸ್ಥಾನ ಗೆದ್ದರೆ ಅದೇ ಹೆಚ್ಚು ಎಂದರು. ಇದೇ ವೇಳೆ ಸಿದ್ದರಾಮಯ್ಯ ಕೋಲಾರದಿಂದ ಓಡಿ ಹೋಗುತ್ತಾರೆಂಬ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಾಗಂತ ಹೇಳಲು ಅವರು ಯಾರು?
ಕೈ ಮುಗಿದು ಪ್ರಾರ್ಥಿಸುವೆ, ಬಾಲಕೃಷ್ಣರ ಸೋಲಿಸಬೇಡಿ: ಸಿದ್ದರಾಮಯ್ಯ
ಕೋಲಾರದಲ್ಲಿ ನಿಲ್ತೇನೋ, ಇಲ್ವೋ, ನಾನು ಎಲ್ಲಿ ನಿಲ್ತೇನೆ ಅನ್ನುವುದನ್ನು ನಾನು ಹೇಳಬೇಕೇ ಹೊರತು ಅವರು ಹೇಗೆ ಹೇಳುತ್ತಾರೆ? ಎಂದರು. ಕರ್ನಾಟಕವು ಕಾಂಗ್ರೆಸ್‌ನ ಎಟಿಎಂ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಹಾಗಿದ್ದರೆ 40 ಪರ್ಸೆಂಟ್ ಆರೋಪ ಯಾರ ಮೇಲಿದೆ? ಎಂದು ಪ್ರಸ್ನಿಸಿದರು. ನೇರವಾಗಿ, ದಾಖಲೆಗಳೊಂದಿಗೆ ಬಿಜೆಪಿ ಮೇಲೆ ಭ್ರಷ್ಟಾಟಾರದ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಇವರ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ರಾಜ್ಯದ ಇತಿಹಾಸದಲ್ಲಿ 40 ಪರ್ಸೆಂಟ್ ಆರೋಪ ಯಾವ ಸರ್ಕಾರದ ಮೇಲಾದರೂ ಬಂದಿತ್ತಾ? ಕಮಿಷನ್ ಆರೋಪ ಮಾಡಿ ಈವರೆಗೆ ಪ್ರಧಾನಿಗೆ ಯಾರಾದರೂ ಪತ್ರ ಬರೆದಿದ್ರಾ ಎಂದು ಪ್ರಶ್ನಿಸಿದರು.
ನಾನು ಹಿಂದೂ ವಿರೋಧಿಯಲ್ಲ: ಬಿಜೆಪಿ, ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಕಳೆದ ಚುನಾವಣೆಯಲ್ಲಿ ರಾಜಕೀಯ ಭಾಷಣಕ್ಕಾಗಿ ನಮ್ಮ ಸರ್ಕಾರದ ವಿರುದ್ಧ 10 ಪರ್ಸೆಂಟ್ ಆರೋಪ ಮಾಡಿದರು. ಆದರೆ ಆ ಆರೋಪಕ್ಕೆ ಯಾವುದೇ ದಾಖಲೆ ಇಲ್ಲ. ಈಗ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಸಾಕಷ್ಟು ದಾಖಲೆಗಳಿವೆ. ಗುತ್ತಿಗೆದಾರರ ಸಂಘದವರೇ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಈ ಹಿಂದಿನಿಂದಲೂ ಈ ಕುರಿತು ತನಿಖೆಗೆ ಆಗ್ರಹ ಮಾಡುತ್ತಲೇ ಇದ್ದೇನೆ. ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ನಮ್ಮ-ಅವರ ಸರ್ಕಾರದ ಎಲ್ಲಾ ಆರೋಪಗಳನ್ನು ತನಿಖೆಗೆ ನೀಡಿ. ದಮ್ ಮತ್ತು ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಬೊಮ್ಮಾಯಿ, ಇದರಲ್ಲಿ ಯಾಕೆ ಅವರ ತಾಕತ್ತು ತೋರಿಸ್ತಿಲ್ಲ ಎಂದು ಪ್ರಶ್ನಿಸಿದರು.