Asianet Suvarna News Asianet Suvarna News

ಅಕ್ರಮ ದಾಖಲೆ ಸೃಷ್ಟಿಮಾಡಿದ್ರೆ ಹೋರಾಟ: ಎಂಟಿಬಿ ನಾಗರಾಜ್‌

ತಾಲೂಕಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನುಗಳನ್ನು ಕಬಳಿಸಿರುವ ಶಾಸಕರ ಕುಟುಂಬದವರು ಹಾಗೂ ಅವರ ಹಿಂಬಾಲಕರ ಅಕ್ರಮ ಆಸ್ತಿಗಳನ್ನು ತಿದ್ದಿ ಸಕ್ರಮ ಮಾಡಿಕೊಳ್ಳಲು ನಿವೃತ್ತಿ ಅಂಚಿನಲ್ಲಿರುವ ಬಡ್ತಿ ಹೊಂದಿರುವ ತಹಸೀಲ್ದಾರ್‌ ರವರನ್ನು ಹಾಕಿಸಿಕೊಂಡು ಶಾಸಕ ಶರತ್‌ ಬಚ್ಚೇಗೌಡ ಅಕ್ರಮವೆಸಗುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ಆರೋಪಿಸಿದರು. 

Ex Minister MTB Nagaraj Slams On Mla Sharath Bachegowda gvd
Author
First Published Aug 10, 2023, 4:24 PM IST

ಹೊಸಕೋಟೆ (ಆ.10): ತಾಲೂಕಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನುಗಳನ್ನು ಕಬಳಿಸಿರುವ ಶಾಸಕರ ಕುಟುಂಬದವರು ಹಾಗೂ ಅವರ ಹಿಂಬಾಲಕರ ಅಕ್ರಮ ಆಸ್ತಿಗಳನ್ನು ತಿದ್ದಿ ಸಕ್ರಮ ಮಾಡಿಕೊಳ್ಳಲು ನಿವೃತ್ತಿ ಅಂಚಿನಲ್ಲಿರುವ ಬಡ್ತಿ ಹೊಂದಿರುವ ತಹಸೀಲ್ದಾರ್‌ ರವರನ್ನು ಹಾಕಿಸಿಕೊಂಡು ಶಾಸಕ ಶರತ್‌ ಬಚ್ಚೇಗೌಡ ಅಕ್ರಮವೆಸಗುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ಆರೋಪಿಸಿದರು. ನಗರದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಾಂತನಪುರ ಗ್ರಾಮದ ಸರ್ವೆ ನಂ 9 ರಲ್ಲಿ 263 ಎಕರೆ ಜಮೀನನ್ನು ಅಕ್ರಮವಾಗಿ ಕಬಳಿಸಿರುವ ಶಾಸಕರ ಕುಟುಂಬದವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಹೈಕೋರ್ಚ್‌, ಲೋಕಾಯುಕ್ತ, ಸಿವಿಲ್‌ ನ್ಯಾಯಾಲಯ, ಜಿಲ್ಲಾ​ಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೂ ಸಹ ತಹಸೀಲ್ದಾರ್‌ ರವರ ಮೂಲಕ ಅ​ಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಆಸ್ತಿಗೆ ಪೋಡಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ವಿಚಾರ ನನಗೆ ಕೇಳಿ ಬಂದಿರುವುದರಿಂದ ಈಗಾಗಲೆ ನಾನು ಮಾನ್ಯ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಮುಖ್ಯ ಕಾರ್ಯದರ್ಶಿಗಳು, ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಯಾರೇ ಅಧಿ​ಕಾರಿಗಳು ಅಕ್ರಮದಲ್ಲಿ ಭಾಗಿಯಾದರೆ ಅಧಿಕಾರಿಗಳೇ ಕಾನೂನು ಕ್ರಮ ಎದರಿಸಬೇಕಾಗುತ್ತದೆ. ಎಂದರು.

ಗ್ಯಾರಂಟಿ ಯೋಜನೆಗಳಿಂದ ವಿಪಕ್ಷದವರಿಗೆ ಊಟ ಸೇರ್ತಿಲ್ಲ, ನಿದ್ರೆ ಬರ್ತಿಲ್ಲ: ಸಚಿವ ಚಲುವರಾಯಸ್ವಾಮಿ

ಈ ಹಿಂದೆ ಉಪ ವಿಭಾಗಾಧಿಕಾರಿಗಳು ಶಾಂತನಪುರ ಗ್ರಾಮದ ಸರ್ವೆ ನಂ 9 ರಲ್ಲಿನ 263 ಎಕರೆ ಜಮೀನಿಗೆ ಸಂಬಂದಪಟ್ಟಂತೆ 24-00 ಎಕರೆಯನ್ನು ಸರ್ಕಾರದ ವಶಕ್ಕೆ ಪಡೆದಿದ್ದನ್ನು ಪ್ರಶ್ನಿಸಿ ಶರತ್‌ ಬಚ್ಚೇಗೌಡ ಕುಟುಂಬದವರು ಹೈಕೋಟ್‌ನಿಂದ ತಡೆಯಾಜ್ಞೆ ತಂದಿದ್ದರು. ಈಗ ಘನ ಉಚ್ಚ ನ್ಯಾಯಾಲಯವೆ ತಡೆಯಾಜ್ಞೆ ತೆರವುಗೊಳಿಸಿದೆ. ಈಗ ಶಾಸಕ ಶರತ್‌ ಬಚ್ಚೇಗೌಡ ಹಾಗೂ ಅವರ ಕುಟುಂಬದವರು ನೈತಿಕತೆ ಇದ್ದರೆ ಜಮೀನನ್ನು ಸರ್ಕಾರದ ವಶಕ್ಕೆ ಬಿಟ್ಟುಕೊಡುವಂತೆ ಸವಾಲು ಹಾಕಿದರು.

ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ: ಹೊಸಕೋಟೆ ತಾಲೂಕು ಕಚೇರಿಯಲ್ಲಿ ಪ್ರತಿಯೊಂದು ಕೆಲಸಕ್ಕೂ ದುಡ್ಡು ಕೊಡಲೇಬೇಕು. ನೇರವಾಗಿ ಹೋದರೆ ಯಾವುದೇ ಕೆಲಸ ಆಗುವುದಿಲ್ಲ. ಅಧಿ​ಕಾರಿಗಳು ದಲ್ಲಾಳಿಗಳನ್ನು ಏಜೆಂಟರಂತೆ ಬಳಸಿಕೊಳ್ಳುತ್ತಿದ್ದು, ದಲ್ಲಾಳಿಗಳ ಮೂಲಕ ಹೋದರೆ ಮಾತ್ರ ಕೆಲಸಗಳು ಆಗುತ್ತವೆ ಎಂದು ಸಾರ್ವಜನಿಕರು ದೂರುತ್ತಿದ್ದು, ಒಟ್ಟಿನಲ್ಲಿ ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ದರ್ಬಾರ್‌ಗೆ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಅ​ಧಿಕಾರಿಗಳು ಲಂಚ ಕೇಳಿದ್ರೆ ಅಥವಾ ದಲ್ಲಾಳಿಗಳ ಮೂಲಕ ಲಂಚ ಪಡೆಯುವುದು ಹಾಗೂ ವಿನಕಾರಣ ಸುತ್ತಾಡಿಸಿದರೆ ಅ​ಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಎಂಟಿಬಿ ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿ ಬಿಜೆಪಿ ವಕ್ತಾರರೇ?: ಸಚಿವ ಚಲುವರಾಯಸ್ವಾಮಿ

ಜನರ ಮುಂದೆ ಪ್ರಾಮಾಣಿಕತೆ ತೋರಿಸಿ: ಈ ಹಿಂದೆ ಬಿಜೆಪಿ ಸರ್ಕಾರದ ಅವ​ಧಿಯಲ್ಲಿ ಶಾಂತನಪುರ ಪ್ರಕರಣಕ್ಕೆ ಸಂಬಂದಪಟ್ಟಂತೆ ನ್ಯಾಯಾಲಯದ ತಡೆಯಾಜ್ಞೆ ತಂದು ಸರ್ಕಾರ ಅವರದೇ ಇರುವ ಕಾರಣ ಅ​ಧಿಕಾರಿಗಳು ಅವರ ಕೈಗೊಂಬೆಗಳಂತೆ ವರ್ತಿಸಿ ತೊಂದರೆ ಕೊಡುತ್ತಾರೆ ಎಂದು ತಡೆಯಾಜ್ಞೆ ತಂದಿರುವುದಾಗಿ ಹೇಳಿಕೆ ಕೊಡುತ್ತಿದ್ದರು. ಈಗ ಶರತ್‌ ಬಚ್ಚೇಗೌಡರೆ ಶಾಸಕರಾಗಿದ್ದಾರೆ, ಅವರದೇ ಸರ್ಕಾರ ಕೂಡ ಇದೆ. ಈಗಲಾದರೂ ನಿಮ್ಮಲ್ಲಿರುವ ಶಾಂತನಪುರದ ದಾಖಲೆಗಳನ್ನು ಪ್ರದರ್ಶನ ಮಾಡಿ ಜನತಾ ನ್ಯಾಯಾಲಯದಲ್ಲಿ ನಿಮ್ಮ ಪ್ರಾಮಾಣಿಕತೆ ತೋರಿಸಿ ಎಂದು ಎಂಟಿಬಿ ಸವಾಲೊಡ್ಡಿದರು.

Follow Us:
Download App:
  • android
  • ios