ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ವೋ ಎಂಬ ಗೊಂದಲ ಉಂಟಾಗಿದೆ: ಎಂಟಿಬಿ ನಾಗರಾಜ್
ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಮೂರ್ನಾಲ್ಕು ತಿಂಗಳು ಕಳೆದಿದ್ದರೂ ಸರ್ಕಾರ ಆಡಳಿತದಲ್ಲಿ ಇದೆಯೋ? ಇಲ್ವೋ ಎಂಬ ಗೊಂದಲ ಉಂಟಾಗಿದೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ಹೊಸಕೋಟೆ (ಆ.18): ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಮೂರ್ನಾಲ್ಕು ತಿಂಗಳು ಕಳೆದಿದ್ದರೂ ಸರ್ಕಾರ ಆಡಳಿತದಲ್ಲಿ ಇದೆಯೋ? ಇಲ್ವೋ ಎಂಬ ಗೊಂದಲ ಉಂಟಾಗಿದೆ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು. ನಗರದ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಸಾಕಷ್ಟು ವಿಶ್ವಾಸವಿಟ್ಟು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಕೊಟ್ಟು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಕಚೇರಿಗಳಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯಗಳು ಜರುಗುತ್ತಿಲ್ಲ. ಜನರು, ಗುತ್ತಿಗೆದಾರರು, ಬಿಲ್ಡರ್‌ಗಳು ಕಚೇರಿಗಳಿಗೆ ತಿರುಗಾಡುವುದೇ ದೊಡ್ಡ ಕಾಯಕವಾಗಿದೆ. ಕಳೆದ ಬಾರಿ ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿದ್ದಾಗ ಸಾಕಷ್ಟುಪಾರದರ್ಶಕ, ಸ್ವಚ್ಛ ಆಡಳಿತ ನೀಡಿದ್ದರು. ಆದರೆ ಈಗ ಏಕೋ ಅವರ ಕೈಕಟ್ಟಿಹಾಕಿ ಆಡಳಿತ ಮಾಡಿಸಿದಂತಿದೆ. ಆದ್ದರಿಂದ ಸಿದ್ದರಾಮಯ್ಯ ಅವರು ಬೆಂಗಳೂರು ನಗರದ ಕಡೆಗೆ ಹೆಚ್ಚಿನ ಆಸಕ್ತಿ ಕೊಡಬೇಕು.
ತಮಿಳುನಾಡಿನ ಹೊಸೂರು ಉದ್ಧಾರ ಆಗಲು ಎಚ್‌ಡಿಕೆ ಕಾರಣ: ಸಂಸದ ಡಿ.ಕೆ.ಸುರೇಶ್
ಬಿಡಿಎನಲ್ಲಿ ಫೆರಿಫೆರಲ್ ರಿಂಗ್ ರಸ್ತೆಗೆ 2007ರಲ್ಲಿ ನೋಟಿಫಿಕೇಷನ್ ಆಗಿದೆ. ರೈತರಿಗೆ ಪರಿಹಾರ ಕೊಡಬೇಕು. ಆದರೆ ರೈತರು ಭೂಮಿಯನ್ನು ಮಾರುವ ಹಾಗಿಲ್ಲ. ಅಡಮಾನ ಮಾಡೋ ಆಗಿಲ್ಲ. ಬ್ಯಾಂಕಲ್ಲಿ ಅಡವಿಟ್ಟು ಸಾಲ ಪಡೆಯುವ ಆಗಿಲ್ಲ. 2007ರಿಂದ 2023ರವರೆಗೆ ನಾಲ್ಕು ಸರ್ಕಾರಗಳು ಬಂದು ಹೋದ್ರೂ ನೋಟಿಫಿಕೇಷನ್ ಮಾಡಿಲ್ಲ, ಸಿಡಿಪಿ ಮಾಡಿಲ್ಲ, ಪರಿಹಾರ ಕೊಟ್ಟಿಲ್ಲ, ರಸ್ತೆ ಮಾಡಿಲ್ಲ, ಬೇರೆ ರಾಜ್ಯಗಳಲ್ಲಿ ಹೋಲಿಕೆ ಮಾಡಿದರೆ ಬೆಂಗಳೂರು ನಗರ ಅಭಿವೃದ್ಧಿಯಲ್ಲಿ ಸಾಕಷ್ಟುಹಿಂದುಳಿದಿದೆ. ಆದ್ದರಿಂದ ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ಅಭಿವೃದ್ಧಿ ಶೀಲ ಆಡಳಿತ ನೀಡಬೇಕು ಎಂದರು.
ಡಿಕೆಶಿ ಒಳಮರ್ಮ ಅರ್ಥ ಆಗ್ತಿಲ್ಲ: ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದು, ಕುಸಿತಗೊಂಡಿರುವ ಆಡಳಿತ ಯಂತ್ರಕ್ಕೆ ಜೀವ ತುಂಬುವ ಕೆಲಸ ಮಾಡಿ. ಸದ್ಯದ ಪರಿಸ್ಥಿತಿಯಲ್ಲಿ ಕಚೇರಿಗಳಲ್ಲಿ ಸಾರ್ವಜನಿಕೆ ಕೆಲಸ ಆಗದೆ ಬೆಂಗಳೂರಿನಲ್ಲಿ ಅಭಿವೃದ್ಧಿ ಕುಸಿತಗೊಂಡಿದೆ. ಇವರ ಒಳ ಮರ್ಮ ಏನೆಂದು ಅರ್ಥ ಆಗುತ್ತಿಲ್ಲ ಎಂದು ಎಂಎಲ್ಸಿ ಎಂಟಿಬಿ ನಾಗರಾಜ್ ತಿಳಿಸಿದರು.
ಬೆಂಗಳೂರಲ್ಲಿ ನಿಮ್ಮ ಗಾಡಿಗೆ ಫ್ಯಾನ್ಸಿ ನಂಬರ್ ಬೇಕಾ?: ಬರೋಬ್ಬರಿ ಇಷ್ಟು ದುಡ್ಡು ಕೊಟ್ರೆ ಸಾಕು!
ಘರ್ ವಾಪಸಿ ಆಗೋದು ಗೊತ್ತಿಲ್ಲ: ಸಮ್ಮಿಶ್ರ ಸರ್ಕಾರ ತೆಗೆದು ಬಿಜೆಪಿಗೆ ಬಂದ 17 ಜನರಲ್ಲಿ ನಾಲ್ಕೈದು ಶಾಸಕರು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಘರ್ ವಾಪಸಿ ಆಗುತ್ತಾರೆ ಎಂದು ಸುದ್ದಿ ಕೇಳಿದ್ದೇನೆ. ಆದರೆ ಯಾರು ಕಾಂಗ್ರೆಸ್‌ಗೆ ಹೋಗ್ತಾರ ಎಂದು ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ ಕಲೆ ಹಾಕ್ತೇನೆ. ನಂತರ ಅದರ ಬಗ್ಗೆ ಮಾತಾಡ್ತೇನೆ ಎಂದು ಬಾಂಬೆ ಬಾಯ್‌್ಸ ಘರ್ ವಾಪಸಿ ಬಗ್ಗೆ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದರು.