Asianet Suvarna News Asianet Suvarna News

ತಮಿ​ಳು​ನಾಡಿನ ಹೊಸೂರು ಉದ್ಧಾರ ಆಗಲು ಎಚ್‌ಡಿಕೆ ಕಾರಣ: ಸಂಸದ ಡಿ.ಕೆ.ಸುರೇಶ್‌

ನಿಮಗೆ ವ್ಯವ​ಹಾರ ಬೇಕು ಅಂದಾಗ ನೈಸ್‌ ರಸ್ತೆ ಬೇಕಾ​ಗಿತ್ತು. ಈಗ ವ್ಯವ​ಹಾರ ಇಲ್ಲ​ವಲ್ಲ ಅದಕ್ಕೆ ನೈಸ್‌ ರಸ್ತೆ​ಯನ್ನು ವಿರೋಧ ಮಾಡು​ತ್ತಿ​ದ್ದೀರಿ. ಅಷ್ಟಕ್ಕೂ ನೀವು ಮುಖ್ಯ​ಮಂತ್ರಿ ಆಗಿ​ದ್ದಾಗ ನೈಸ್‌ ರಸ್ತೆ ಯೋಜನೆ ಕುರಿತು ಒಂದೇ ಒಂದು ಸಭೆ ನಡೆ​ಸ​ಲಿಲ್ಲ ಏಕೆ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವ​ರನ್ನು ಸಂಸದ ಡಿ.ಕೆ. ಸು​ರೇಶ್‌ ಪ್ರಶ್ನಿ​ಸಿ​ದರು. 

MP DK Suresh Slams On HD Kumaraswamy gvd
Author
First Published Aug 18, 2023, 7:32 PM IST

ರಾಮ​ನ​ಗರ (ಆ.18): ನಿಮಗೆ ವ್ಯವ​ಹಾರ ಬೇಕು ಅಂದಾಗ ನೈಸ್‌ ರಸ್ತೆ ಬೇಕಾ​ಗಿತ್ತು. ಈಗ ವ್ಯವ​ಹಾರ ಇಲ್ಲ​ವಲ್ಲ ಅದಕ್ಕೆ ನೈಸ್‌ ರಸ್ತೆ​ಯನ್ನು ವಿರೋಧ ಮಾಡು​ತ್ತಿ​ದ್ದೀರಿ. ಅಷ್ಟಕ್ಕೂ ನೀವು ಮುಖ್ಯ​ಮಂತ್ರಿ ಆಗಿ​ದ್ದಾಗ ನೈಸ್‌ ರಸ್ತೆ ಯೋಜನೆ ಕುರಿತು ಒಂದೇ ಒಂದು ಸಭೆ ನಡೆ​ಸ​ಲಿಲ್ಲ ಏಕೆ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವ​ರನ್ನು ಸಂಸದ ಡಿ.ಕೆ. ​ಸು​ರೇಶ್‌ ಪ್ರಶ್ನಿ​ಸಿ​ದರು. ಬಿಡದಿ ಪಟ್ಟ​ಣ​ದಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿಯಮಿತದಿಂದ ಬಿಡದಿ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಮಂಜೂರಾಗಿರುವ ಕೆಸಿಸಿ ಬೆಳೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾಧ್ಯ​ಮ​ಗ​ಳಲ್ಲಿ ಪುಕ್ಕಟೆ ಪ್ರಚಾರ ಸಿಗು​ತ್ತದೆ ಅಂತ ನೈಸ್‌ ರಸ್ತೆ ಬಗ್ಗೆಯೇ ಮಾತ​ನಾ​ಡು​ತ್ತಿ​ದ್ದಾರೆ. ಆ ನೈಸ್‌ ರಸ್ತೆಗೆ ಸಹಿ ಹಾಕಿ​ದ​ವರು ಯಾರು? ಡಿ.ಕೆ.​ ಶಿ​ವ​ಕು​ಮಾರ್‌ ಅಥವಾ ಕಾಂಗ್ರೆಸ್‌ನ ಬೇರೆ ನಾಯ​ಕರು ಯಾರಾ​ದರು ಸಹಿ ಹಾಕಿ​ದ್ದರಾ? ನಿಮಗೆ ಸಹಿ ಹಾಕಲು ಯಾರಾ​ದರು ಹೇಳಿ​ದ್ದರು? ನಿಮ್ಮ​ವರೆ ತಾನೇ ಸಹಿ ಹಾಕಿ​ದ್ದು. ನಿಮಗೆ ವ್ಯವ​ಹಾರ ಬೇಕು ಅಂದಾಗ ನೈಸ್‌ ರಸ್ತೆ ಬೇಕಾ​ಗಿತ್ತು. ಈಗ ವ್ಯವ​ಹಾರ ಇಲ್ಲ​ವಲ್ಲ ಅದಕ್ಕೆ ಮಾತ​ನಾ​ಡು​ತ್ತಿ​ದ್ದೀರಾ ಎಂದು ಟೀಕಿ​ಸಿ​ದ​ರು. ನೈಸ್‌ ರಸ್ತೆ ಹೆಸ​ರಿ​ನಲ್ಲಿ ಬೆಂಗ​ಳೂರು - ಮೈಸೂರು ಭಾಗದ ರೈತ​ರಿಗೆ ಅನ್ಯಾ​ಯ​ವಾ​ಗಿ​ದ್ದರೆ ಅದು ನಿಮ್ಮಿಂದ ಅನ್ನೋ​ದನ್ನು ಮರೆ​ಯ​ಬಾ​ರದು. 

ಬೆಂಗಳೂರಲ್ಲಿ ನಿಮ್ಮ ಗಾಡಿಗೆ ಫ್ಯಾನ್ಸಿ ನಂಬರ್‌ ಬೇಕಾ?: ಬರೋಬ್ಬರಿ ಇಷ್ಟು ದುಡ್ಡು ಕೊಟ್ರೆ ಸಾಕು!

ತಮಿ​ಳು​ನಾಡಿನ ಹೊಸೂರು ಉದ್ಧಾರ ಆಗಲು ನೀವು ಕಾರಣ. ದೇವ​ನ​ಹ​ಳ್ಳಿ, ಹೊಸ​ಕೋಟೆ, ದೊಡ್ಡ​ಬ​ಳ್ಳಾ​ಪು​ರ,​ ಚಿ​ಕ್ಕ​ಬ​ಳ್ಳಾ​ಪು​ರದ ಕಡೆಗೆ ಜನರು ಹೋಗು​ತ್ತಿ​ದ್ದಾರೆ ಅಂದರೆ ಅದಕ್ಕೆ ನೀವು ಕಾರಣ. ನೈಸ್‌ ರಸ್ತೆ​ಯನ್ನು ಸಂಪೂ​ರ್ಣ​ಗೊ​ಳಿ​ಸಿ​ದ್ದರೆ ರೈತರ ಆಸ್ತಿ​ಮೌಲ್ಯ 5ರಿಂದ 10 ಕೋಟಿ ರುಪಾಯಿ ಬೆಲೆ ಬಾಳು​ತ್ತಿತ್ತು. ಮುಖ್ಯ​ಮಂತ್ರಿ ಆಗಿ​ದ್ದಾಗ ನೈಸ್‌ ರಸ್ತೆ ಯೋಜನೆ ಕುರಿತು ಒಂದೇ ಒಂದು ಸಭೆ ಕರೆ​ಯ​ಲಿಲ್ಲ. ಮಾಧ್ಯ​ಮ​ಗ​ಳಲ್ಲಿ ಪುಕ್ಕಟೆ ಪ್ರಚಾರ ಪಡೆ​ಯು​ತ್ತಿ​ದ್ದೀರಿ. ನೀವು ರೈತ​ರಿಗೆ ಮಾಡಿ​ರುವ ಅನ್ಯಾ​ಯ​ವನ್ನು ಮರೆ​ಯ​ಬೇಡಿ ಎಂದು ಸುರೇಶ್‌ ವಾಗ್ದಾಳಿ ನಡೆ​ಸಿ​ದ​ರು.

ನೈಸ್‌ ರಸ್ತೆ ಬಗ್ಗೆ ಏನಾ​ದರು ಒಂದು ತೀರ್ಮಾನ ತೆಗೆ​ದು​ಕೊ​ಳ್ಳ​ಲೇ ಬೇ​ಕಿದೆ. ನ್ಯಾಯಾ​ಲ​ಯ​ದಲ್ಲಿ ಕೇಸ್‌ ಮಾಡಲು ಆಗು​ವು​ದಿಲ್ಲ ಅಂತಲ್ಲ. ನಮಗೂ ವಯಸ್ಸು ಆಗುತ್ತಾ ಹೋಗು​ತ್ತದೆ. ಉಂಟು ಅಥವಾ ಇಲ್ಲ ಏನಾ​ದರೂ ತೀರ್ಮಾನ ಆಗ​ಲೇ​ಬೇಕು. ಇದಕ್ಕೆ ಏನು ಮಾಡ​ಬೇಕು ಎಂಬು​ದರ ಬಗ್ಗೆ ಆಲೋ​ಚನೆ ಮಾಡ​ಬೇಕು ಎಂದ​ರು. ಟಿವಿಯಲ್ಲಿ ಸ್ಟೇಟ್‌ಮೆಂಟ್‌ ಕೊಟ್ಟಾ​ಕ್ಷಣ ಸಮಸ್ಯೆ ಬಗೆ​ಹ​ರಿ​ಯು​ವುದಿಲ್ಲ. ರೈತರ ಜೀವಕ್ಕೆ ಸಮಾ​ಧಾನ ಆಗ​ಬೇ​ಕಾ​ದರೆ ನೈಸ್‌ ರಸ್ತೆ ಸಮ​ಸ್ಯೆಗೆ ಪರಿ​ಹಾರ ಕಂಡು​ಕೊ​ಳ್ಳ​ಬೇಕು. ಅದನ್ನು ಬಿಟ್ಟು ಇಲ್ಲ​ದಿ​ರುವ ಲಿಟಿ​ಗೇ​ಷನ್‌ ಸೃ​ಷ್ಟಿ​ಸಿ​ದರೆ ಲಿಟಿ​ಗೇ​ಷನ್‌ ನಡೆ​ಯು​ತ್ತಲೇ ಇರು​ತ್ತದೆ. 

ನನ್ನಿಂದ ಹಿಡಿದು ನನ್ನ ಮೊಮ್ಮ​ಕ್ಕಳ ಕಾಲ​ದ​ವ​ರೆಗೂ ಲಿಟಿ​ಗೇ​ಷನ್‌ ನಡೆ​ಯು​ತ್ತದೆಯೇ ಹೊರತು ಸಮಸ್ಯೆ ಬಗೆ​ಹ​ರಿ​ಯು​ವು​ದಿಲ್ಲ. ಯಾರು ಎಷ್ಟುದಿನ ಬದು​ಕು​ತ್ತಾರೊ ಗೊತ್ತಿ​ಲ್ಲ. ​ಇ​ರು​ವಷ್ಟುದಿನ ಬಡ​ವ​ರಿಗೆ, ರೈತ​ರಿಗೆ ಅನು​ಕೂ​ಲ​ವಾ​ಗುವ ಕೆಲಸ ಮಾಡ​ಬೇಕು. ಅದನ್ನು ಮಾಡಲು ನಿಮ್ಮ ಸಲಹೆ ಬೇಕಿದೆ. ಚುನಾ​ವಣೆ ಬಂದಾಗ ಟೀಕೆ ಮಾಡಲಿ, ಈಗ ರೈತ​ರಿಗೆ ಏನಾ​ಗ​ಬೇಕು ಎಂಬು​ದರ ಬಗ್ಗೆ ಸಕಾ​ರಾ​ತ್ಮ​ವಾದ ಸಲಹೆಗಳನ್ನು ನೀಡಲಿ ಎಂದು ಸುರೇಶ್‌ ಹೇಳಿ​ದರು.

ಕಾಂಗ್ರೆಸ್‌ ಸರ್ಕಾರ ಐದು ಗ್ಯಾರಂಟಿ ಘೋಷಿಸಿದಂತೆ ಅವು​ಗಳ ಅನುಷ್ಠಾನಕ್ಕೆ ಚಾಲನೆ ನೀಡಿದೆ. ಬಡ​ವರ ಏಳಿ​ಗೆ​ಯನ್ನು ಸಹಿ​ಸದ ಬಿಜೆಪಿ ಮತ್ತು ಜೆಡಿ​ಎಸ್‌ ನವರಿಗೆ ಹೊಟ್ಟೆನೋವು ಬಂದಿದ್ದು, ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಿಮಗೆ ತಾಕ​ತ್ತಿ​ದ್ದರೆ ಗ್ಯಾರಂಟಿ​ಗಳ ಅನು​ಕೂಲ ಪಡೆ​ಯು​ವು​ದಿ​ಲ್ಲ​ವೆಂದು ಬಹಿ​ರಂಗ​ವಾಗಿ ಘೋಷಣೆ ಮಾಡಿ ತೋರಿಸಿ ಎಂದು ಸವಾಲು ಹಾಕಿ​ದರು. ಐದು ಗ್ಯಾರಂಟಿ​ಗ​ಳನ್ನು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿ​ತ​ವಾಗಿ ಮಾಡಿಲ್ಲ. ಮಹಿ​ಳೆ​ಯರು ಖುಷಿ​ಯಾಗಿ ರಾಜ್ಯ ಪ್ರವಾಸ ಮಾಡು​ತ್ತಿ​ದ್ದಾರೆ. ದೇವ​ಸ್ಥಾ​ನದ ಹುಂಡಿ​ಗ​ಳಲ್ಲಿ 3-4 ಸಾವಿರ ಕೋಟಿ ಕಾಣಿಕೆ ಹಾಕಿ​ದ್ದಾರೆ. 

ಮಾರ್ಗ ​ಮ​ಧ್ಯೆ 2 ಸಾವಿರ ಕೋಟಿ ಖರ್ಚು ಮಾಡಿ​ದ್ದಾರೆ. ಹಣದ ಚಲಾ​ವಣೆ ನಡೆದು ಬಡ​ವರು ಏಳಿಗೆ ಕಾಣು​ತ್ತಿ​ದ್ದಾರೆ. ಇದನ್ನು ಬಿಜೆಪಿ ಮತ್ತು ಜೆಡಿ​ಎಸ್‌ ನವ​ರಿಗೆ ಸಹಿ​ಸಿ​ಕೊ​ಳ್ಳಲು ಆಗು​ತ್ತಿಲ್ಲ ಎಂದು ಟೀಕಿ​ಸಿ​ದ​ರು. ನೀವು ಅಧಿ​ಕಾ​ರ​ದ​ಲ್ಲಿದ್ದ ಸಂದ​ರ್ಭ​ದಲ್ಲಿ ಘೋಷ​ಣೆ ಮಾಡಿದ ಒಂದೇ ಒಂದು ಕಾರ್ಯ​ವನ್ನು ಜಾರಿಗೆ ತಂದಿ​ರುವ ಉದಾ​ಹ​ರಣೆ ಇದ್ದರೆ ಹೇಳಿ. ಅಧಿಕಾರ ಬಂದರೆ ಸಾಕು ಹೋಟೆಲ್‌ನಲ್ಲಿ ವಾಸ್ತವ್ಯ ಹೂಡು​ತ್ತಿ​ದ್ದರು. ಉದ್ಯ​ಮಿ​ಗಳ ಜೊತೆ ಕಾಲ ಕಳೆ​ಯು​ತ್ತಿ​ದ್ದರು. ನಿಮಗೆ ನಿಮ್ಮ ಶಾಸ​ಕರು ಮತ್ತು ಪಕ್ಷದ ಕಾರ್ಯ​ಕ​ರ್ತ​ರನ್ನು ಸರಿ​ಯಾಗಿ ನೋಡಿ​ಕೊ​ಳ್ಳಲು ಆಗ​ಲಿಲ್ಲ. ಇವತ್ತು ಬಾಯಿ ಬಡಿ​ದು​ಕೊ​ಳ್ಳು​ತ್ತಿ​ದ್ದೀರಿ ಎಂದು ಕುಮಾ​ರ​ಸ್ವಾಮಿ ವಿರುದ್ಧ ಸುರೇಶ್‌ ವಾಗ್ದಾಳಿ ನಡೆ​ಸಿ​ದರು. 

ಲೋಕೋ​ಪ​ಯೋಗಿ ಇಲಾಖೆ, ಜಲ​ಸಂಪ​ನ್ಮೂಲ, ಸಮಾ​ಜ ಕಲ್ಯಾಣ ಇಲಾಖೆ, ನಗ​ರ​ಸಭೆ ಸೇರಿ​ದಂತೆ ಯಾವುದೇ ಇಲಾ​ಖೆ​ಗ​ಳಲ್ಲಿ ಕಾಮ​ಗಾ​ರಿ​ಗಳ ಬಿಲ್‌ ಮಂಜೂರು ಮಾಡಿಲ್ಲ. ಮೂರು ನಾಲ್ಕು ತಿಂಗ​ಳಲ್ಲಿ ತನಿಖೆ ಪೂರ್ಣ​ಗೊ​ಳಿಸಿ ಬಿಲ್‌ ಪಾವತಿ ಮಾಡು​ತ್ತೇವೆ. ಅದಕ್ಕೆ ಕಮಿ​ಷನ್‌ ಪಡೆ​ಯು​ತ್ತಿ​ದ್ದಾ​ರೆಂದು ಹೆದ​ರಿ​ಸು​ತ್ತಿ​ದ್ದಾರೆ. ರಾಮ​ನ​ಗರವನ್ನು ಎಷ್ಟುಉದ್ಧಾರ ಮಾಡಿ​ದ್ದೀರಿ ಹೇಳಿ. ನಿಮ್ಮ ಬದ​ಲಾ​ವಣೆ ಆಗಿ​ದಿಯೇ ಹೊರತು ರೈತ​ರ ಪರಿಸ್ಥಿತಿ ಬದ​ಲಾ​ಗಿಲ್ಲ ಎಂದು ಹೇಳಿ​ದ​ರು.

ಇನ್ನೂ ಮೂರೇ ತಿಂಗಳು ಮುಂದಾನಾಗುತ್ತೆ ಕಾದು ನೋಡಿ: ಸಿ.ಟಿ.ರವಿ ಸ್ಫೋಟಕ ಹೇಳಿಕೆ

ಶಾಸಕ ಬಾಲಕೃಷ್ಣ, ವಿಧಾನಪರಿಷತ್‌ ಸದಸ್ಯ ಎಸ್‌.ರವಿ, ಮಾಜಿ ಸದಸ್ಯ ಸಿ.ಎಂ. ಲಿಂಗಪ್ಪ, ಬಿಡಿಸಿಸಿ ಬ್ಯಾಂಕ್‌ ಪ್ರಭಾರ ಅಧ್ಯಕ್ಷ ಯರೇಹಳ್ಳಿ ಮಂಜು, ಬಿಡದಿ ಸೊಸೈಟಿ ನಿರ್ದೇಶಕರಾದ ಕುಮಾರ್‌, ಮಹೇಶ್‌, ಜೀವನ್‌ ಬಾಬು, ನರಸಿಂಹಯ್ಯ, ಲೀಲಾ​ವತಿ, ರಘು, ಸಿಇಒ ಕಿರಣ್‌, ಬಿಡದಿ ಪುರಸಭೆ ಸದಸ್ಯ ಸಿ.ಉಮೇಶ್‌, ರಾಮಚಂದ್ರ, ಹೊಂಬಯ್ಯ, ತಾಪಂ ಮಾಜಿ ಅಧ್ಯಕ್ಷ ಗಾಣ​ಕಲ್‌ ನಟ​ರಾಜ್‌, ಮುಖಂಡರಾದ ಡಿ.ಎಂ. ವಿಶ್ವನಾಥ್‌, ಉಮಾ​ಶಂಕರ್‌, ಎಚ್‌.ಎಲ್. ಚಂದ್ರು, ಕಾವ್ಯ, ಗಾಯತ್ರಿ ಮತ್ತಿ​ತ​ರರು ಉಪ​ಸ್ಥಿ​ತ​ರಿ​ದ್ದ​ರು.

Follow Us:
Download App:
  • android
  • ios