ಬೆಂಗಳೂರಲ್ಲಿ ನಿಮ್ಮ ಗಾಡಿಗೆ ಫ್ಯಾನ್ಸಿ ನಂಬರ್‌ ಬೇಕಾ?: ಬರೋಬ್ಬರಿ ಇಷ್ಟು ದುಡ್ಡು ಕೊಟ್ರೆ ಸಾಕು!

ಒಂದೇ ಒಂದು ನಂಬರ್‌ಗೆ 20 ಲಕ್ಷ, ಮತ್ತೊಂದಕ್ಕೆ 3 ಲಕ್ಷ , ಇನ್ನೊಂದಕ್ಕೆ 2 ಲಕ್ಷ.. ಹೀಗೆ ಪ್ರತೀ ನಂಬರ್‌ಗಳು ಅಲ್ಲಿ ಲಕ್ಷ ಲಕ್ಷ ಹಣಕ್ಕೆ ಸೇಲ್‌ ಆಗಿದ್ದವು. ಫ್ಯಾನ್ಸಿ ನಂಬರ್‌ಗಳನ್ನ ಹರಾಜಿಗೆ ಇಟ್ಟಿದ್ದ ಸಾರಿಗೆ ಇಲಾಖೆ ಇದೀಗ ತನ್ನ ಬೊಕ್ಕಸವನ್ನ ತುಂಬಿಕೊಂಡಿದೆ.

Fancy number 1 auctioned for Rs 20 75 lakh in Bengaluru gvd

ಬೆಂಗಳೂರು (ಆ.18): ಒಂದೇ ಒಂದು ನಂಬರ್‌ಗೆ 20 ಲಕ್ಷ, ಮತ್ತೊಂದಕ್ಕೆ 3 ಲಕ್ಷ , ಇನ್ನೊಂದಕ್ಕೆ 2 ಲಕ್ಷ.. ಹೀಗೆ ಪ್ರತೀ ನಂಬರ್‌ಗಳು ಅಲ್ಲಿ ಲಕ್ಷ ಲಕ್ಷ ಹಣಕ್ಕೆ ಸೇಲ್‌ ಆಗಿದ್ದವು. ಫ್ಯಾನ್ಸಿ ನಂಬರ್‌ಗಳನ್ನ ಹರಾಜಿಗೆ ಇಟ್ಟಿದ್ದ ಸಾರಿಗೆ ಇಲಾಖೆ ಇದೀಗ ತನ್ನ ಬೊಕ್ಕಸವನ್ನ ತುಂಬಿಕೊಂಡಿದೆ. ಶಾಂತಿ ನಗರದ ಆರ್.ಟಿ.ಒ‌ ಕಚೇರಿಯಲ್ಲಿ ನಡೆದ ಹರಾಜಿನಲ್ಲಿ  KA-05/NJ ಸೀರಿಸ್‌ನ ಸುಮಾರು 64 ಫ್ಯಾನ್ಸಿ ನಂಬರ್‌ಗಳನ್ನು ನಿನ್ನೆ ಗುರುವಾರ ಹರಾಜಿಗೆ ಇಡಲಾಗಿತ್ತು. ಈ ಪೈಕಿ 24 ಫ್ಯಾನ್ಸಿ ನಂಬರ್‌ಗಳು ಹರಾಜಾಗಿದ್ದು, ಸಾರಿಗೆ ಇಲಾಖೆ ಬೊಕ್ಕಸಕ್ಕೆ ಬರೊಬ್ಬರಿ 48 ಲಕ್ಷ ಆದಾಯ ಹರಿದು ಬಂದಿದೆ.

ಯಾವ ನಂಬರ್‌ಗೆ ಎಷ್ಟು
1. KA-05/NJ-0001. ₹20,75,000

2. KA-05/NJ-0007. ₹3,25,000

3. KA-05/NJ-0009. ₹3,25,000

4. KA-05/NJ-0555. ₹3,25,000

5. KA-05/NJ-5555. ₹3,25,000

6. KA-05/NJ-9999. ₹3,05,000

7. KA-05/NJ-7777. ₹2,35,000

8. KA-05/NJ-0999. ₹2,25,000

9. KA-05/NJ-0666. ₹1,75,000

10. KA-05/NJ-6666. ₹1,70,000

ಬಂಡೀಪುರದಲ್ಲಿ ಕಟ್ಟಡ ಕಾಮಗಾರಿ: ಅರಣ್ಯ ಇಲಾಖೆಯಿಂದ ನಟ ಗಣೇಶ್‌ಗೆ ನೋಟೀಸ್

ಇದರ ಜೊತೆಗೆ, KAO5, NJ- 0001 ಅನ್ನೋ ನಂಬರ್‌ ಬರೋಬ್ಬರಿ 20 ಲಕ್ಷದ 75 ಸಾವಿರ ರುಪಾಯಿ ಮೊತ್ತಕ್ಕೆ ಸೇಲ್‌ ಆಗೋ ಮೂಲಕ ಸಾರಿಗೆ ಇಲಾಖೆ ಇತಿಹಾಸದಲ್ಲೇ ದಾಖಲೆ ಬರೆದಿದೆ. ಅದ್ರಂತೆ ಇದೇ ಸೀರಿಸ್‌ನ 555 ನಂಬರ್‌ 3 ಲಕ್ಷದ 25 ಸಾವಿರ ರುಪಾಯಿಗೆ ಸೇಲ್‌ ಆದ್ರೆ. 5555 ನಂಬರ್‌ 3ಲಕ್ಷದ 25 ಸಾವಿರ ರುಪಾಯಿ ಮಾರಾಟ ಆಗಿದೆ. 

Latest Videos
Follow Us:
Download App:
  • android
  • ios