ಸರ್ವಾಧಿಕಾರಿ ಇಂದಿರಾ ಗಾಂಧಿನಾ, ನರೇಂದ್ರ ಮೋದಿನಾ?: ಕೆ.ಎಸ್.ಈಶ್ವರಪ್ಪ
ಮೋದಿ ಪ್ರಧಾನಿಯಾದ್ರೇ ಇದೇ ಕೊನೆ ಚುನಾವಣೆ ಎಂಬ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮೋದಿ ಪ್ರಧಾನಿಯಾದರೇ ದೇಶದಲ್ಲಿ ಚುನಾವಣೆ ಆಗಲ್ಲ ಎಂದಿದ್ದಾರೆ.
ಶಿವಮೊಗ್ಗ (ಫೆ.03): ಮೋದಿ ಪ್ರಧಾನಿಯಾದ್ರೇ ಇದೇ ಕೊನೆ ಚುನಾವಣೆ ಎಂಬ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮೋದಿ ಪ್ರಧಾನಿಯಾದರೇ ದೇಶದಲ್ಲಿ ಚುನಾವಣೆ ಆಗಲ್ಲ ಎಂದಿದ್ದಾರೆ. ದೇಶದ ಜನರ ಮನಸ್ಸಿನಲ್ಲಿ ಒಂದು ಕಡೆ ರಾಮ,ಇನ್ನೊಂದು ಕಡೆ ಮೋದಿ ಇದ್ದಾರೆ. ತುರ್ತುಸ್ಥಿತಿಯನ್ನು ಯಾರು ತಂದಿದ್ದು ಎಂದು ಎಲ್ಲರಿಗೂ ಗೊತ್ತಿದೆ. ಸರ್ವಾಧಿಕಾರಿ ಇಂದಿರಾ ಗಾಂಧಿನಾ ಅಥವಾ ನರೇಂದ್ರ ಮೋದಿನಾ ಅಂತ ಖರ್ಗೆ ಹೇಳಲಿ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಒಂದು ಸೀಟು ಕಾಂಗ್ರೆಸ್‌ನವರು ಗೆದ್ದಿದ್ದರು. ಈ ಬಾರಿ ಒಂದೂ ಸೀಟು ಅವರು ಗೆಲ್ಲಲ್ಲ. 28ಕ್ಕೆ 28 ಸ್ಥಾನಗಳನ್ನೂ ಬಿಜೆಪಿ ಗೆಲ್ಲುತ್ತೇವೆ. ಇದರಲ್ಲಿ ಯಾವ ಅನುಮಾನ ಬೇಡ ಎಂದು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಿಂದ ಕಾಂತೇಶ್ ಸ್ಪರ್ಧೆ ಮಾಡಬೇಕು ಎಂಬುದು ಅಲ್ಲಿನ ಕಾರ್ಯಕರ್ತರು, ನಾಯಕರು, ಜನರ ಅಪೇಕ್ಷೆಯಾಗಿದೆ. ಅದರಂತೆ ಅವರು ಸ್ಪರ್ಧೆ ಮಾಡಲು ಇಚ್ಚಿಸಿದ್ದಾರೆ. ಈಗಾಗಲೇ ಕಾಂತೇಶ್ ಓಡಾಟ ಆರಂಭಿಸಿದ್ದಾರೆ. ಅವರು ಸ್ಪರ್ಧೆ ಮಾಡಿದರೆ ಖಚಿತವಾಗಿಯೂ ಅವರು ಗೆಲ್ಲುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಕೆಸು, ಡಿಕೆಶಿ ಅವರದು ಜಿನ್ನಾ ಸಂಸ್ಕೃತಿ: ಈಶ್ವರಪ್ಪ ಕಿಡಿ
ಇಂಡಿಯಾ ಒಕ್ಕೂಟ ಛಿದ್ರವಾಗುತ್ತದೆ: ಇಂಡಿಯಾ ಒಕ್ಕೂಟದಲ್ಲಿ ಒಡಕು ಮೂಡಿದೆ. ಕಾಂಗ್ರೆಸ್ ಜೊತೆ ಹೋಗಲ್ಲ ಅಂತಾ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂಡಿಯಾ ಒಕ್ಕೂಟ ಛಿದ್ರವಾಗಿ ಹೋಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸುಳ್ಳು ಗ್ಯಾರಂಟಿ ಮೂಲಕ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ನಿರ್ನಾಮ ಮಾಡ್ತೀವಿ ಅಂತ ಹೇಳಿದ್ದರು.
ಬಿಜೆಪಿಯಿಂದ ಕಾಂಗ್ರೆಸ್ ಗೆ ಶಾಸಕರು ಬರುತ್ತಾರೆ ಅಂತ ಹೇಳಿದ್ದರು. ಒಬ್ಬನೇ ಒಬ್ಬ ಶಾಸಕ ಇದುವರೆಗೆ ಹೋಗಲಿಲ್ಲ. ಕಾಂಗ್ರೆಸ್ ಪಕ್ಷವನ್ನು ಒಪ್ಪಲು ಯಾರೊಬ್ಬರೂ ಸಿದ್ದರಿಲ್ಲ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನವು ಸಿಗಲಿಲ್ಲ. ಈ ಬಾರಿ ವಿಪಕ್ಷ ಸ್ಥಾನವನ್ನಾದರೂ ಕೊಡು ಅಂತಾ ರಾಮನನ್ನು ಬೇಡುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಪೂರೈಸಲ್ಲ: ಇಂಡಿಯಾ ಒಕ್ಕೂಟದಲ್ಲಿ ಒಡಕು ಮೂಡಿದೆ. ಕಾಂಗ್ರೆಸ್ ಜೊತೆ ಹೋಗಲ್ಲ ಅಂತಾ ಕೇಜ್ರಿವಾಲ್, ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಂಡಿಯಾ ಒಕ್ಕೂಟ ಛಿದ್ರವಾಗಿ ಹೋಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ. ಸಿದ್ದರಾಮಯ್ಯ ಸರ್ಕಾರ ಪೂರ್ಣ ಅಧಿಕಾರ ಪೂರೈಸಲ್ಲ. ರಾಷ್ಟ್ರದಲ್ಲಿ ರಾಮಭಕ್ತರ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದರು.
ಸಂಸದ ಡಿ.ಕೆ.ಸುರೇಶ್ ದೇಶದ್ರೋಹಿ: ಅಪ್ಪಚ್ಚು ರಂಜನ್ ಆಕ್ರೋಶ
ಸಿದ್ದರಾಮಯ್ಯ ಇದೀಗ ಜೈ ಶ್ರೀರಾಮ್ ಅಂತಿದ್ದಾರೆ. ರಾಮ ಎಲ್ಲಾ ಹಿಂದೂಗಳನ್ನು ಒಟ್ಟು ಮಾಡಿದರೆ ಕಾಂಗ್ರೆಸ್ ಅಡ್ರೆಸ್ ಇಲ್ಲದಾಗೆ ಹೋಗುತ್ತದೆ. ಅದಕ್ಕೆ ನನ್ನ ಹೆಸರಿನಲ್ಲಿ ರಾಮ ಇದ್ದಾನೆ ಅಂತಿದ್ದಾರೆ. ರಾಮನ ಬಗ್ಗೆ ಈಗ ಭಕ್ತಿ ಬರುತ್ತಿದೆ. ಡಿ.ಕೆ.ಶಿವಕುಮಾರ್ ಅವರು ನನ್ನ ಹೆಸರಿನಲ್ಲಿ ಶಿವ ಇದ್ದಾನೆ ಅಂತಾರೆ. ರಾಮ ಬಜೆಪಿಯವರ ಮನೆ ಆಸ್ತಿನಾ? ಅಂತ ಹೇಳುತ್ತಿದ್ದಾರೆ. ರಾಮ ಯಾರ ಮನೆ ಆಸ್ತಿಯಲ್ಲ ಎಂದು ತಿರುಗೇಟು ನೀಡಿದರು.