ಕೇಂದ್ರ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು, ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರು ಜಮ್ಮು ಕಾಶ್ಮೀರದ 370ನೇ ವಿಧಿ ರದ್ದತಿ ಹಾಗೂ ರಾಮ ಮಂದಿರ ಟ್ರಸ್ಟ್ ರಚನೆಯ ಹಿಂದಿನ ಪ್ರಮುಖ ರೂವಾರಿಯಾಗಿದ್ದರು. ಇದೇ ಕಾರಣಕ್ಕಾಗಿ ಇವರ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ ಎಂಬುದು ಬಹಿರಂಗವಾಗಿದೆ.

ದೆಹಲಿ: ಕೇಂದ್ರ ಚುನಾವಣಾ ಆಯುಕ್ತ ಗ್ಯಾನೇಶ್​ ಕುಮಾರ್​ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ಕಾಕ್ರೋಚ್​ ಜನತಾ ಪಕ್ಷ ಮತ್ತು ಕಾಂಗ್ರೆಸ್ಸಿಗರು ಸೇರಿದಂತೆ ವಿರೋಧ ಪಕ್ಷಗಳು ಇವರ ರಾಜೀನಾಮೆಗೆ ಪಟ್ಟು ಹಿಡಿದಿರುವ ಕಾರಣದಿಂದಾಗಿ. ಅಕ್ರಮ ವಲಸಿಗರನ್ನು, ಮೃತಪಟ್ಟವರನ್ನು, ಡುಪ್ಲಿಕೇಟ್​ ಹೆಸರು ಇರುವವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಸಂಬಂಧ ರೂಪಿಸಿರುವ SIR ಅನ್ನೇ ವಿರೋಧಿಸಿ ಭಾರತವನ್ನು ಉದ್ಧಾರ ಮಾಡಲು ಬಂದಿರುವವರು ಅಮೆರಿಕದ ಅಭಿಜೀತ್​ ದೀಪ್ಕೆ ಮತ್ತು ಜರ್ಮನಿಯ ಧ್ರುವ್​ ರಾಠೋಡ್​! ಅವರಿಗೆ ಇಲ್ಲಿ ಇರುವ ಕಾಂಗ್ರೆಸ್​ ಬೆಂಬಲಿಗರ ಬೆಂಬಲ.

ಹಾಗಿದ್ರೆ ಕಾಂಗ್ರೆಸ್ಸಿಗರಿಗೆ ಅಥವಾ ಜಿರಳೆಗಳಿಗೆ ಗ್ಯಾನೇಶ್​ ಕುಮಾರ್​ ಅವರ ಮೇಲೆ ಏಕಿಷ್ಟು ಕೋಪ? ಇದು SIR ಕೋಪನಾ ಅಥವಾ ಇದರ ಹಿಂದೆ ಇನ್ನೇನು ಇದೆಯೋ ಎನ್ನುವುದು ಹಲವರನ್ನು ಕಾಡುತ್ತಿರುವುದು ಇದೆ. ಇದೀಗ ಗ್ಯಾನೇಶ್​ ಕುಮಾರ್​ ಅವರ ಹಿನ್ನೆಲೆಯ ಬಗ್ಗೆ ರಿವೀಲ್​ ಆಗಿದ್ದು, ಕೊನೆಗೂ ಜಿರಳೆಗಳು ಮತ್ತು ಕಾಂಗ್ರೆಸ್ಸಿಗರ ಕೋಪಕ್ಕೆ ಕಾರಣ ಸಿಕ್ಕಾಗಿದೆ. ಅಷ್ಟಕ್ಕೂ ಗ್ಯಾನೇಶ್​ ಕುಮಾರ್​ ಹಿನ್ನೆಲೆ ಸಿಕ್ಕಾಪಟ್ಟೆ ಕುತೂಹಲವೂ ಆಗಿದೆ.

ಯಾರೀ ಗ್ಯಾನೇಶ್​ ಕುಮಾರ್​?

ಚುನಾವಣಾ ಆಯುಕ್ತ ಗ್ಯಾನೇಶ್​ ಕುಮಾರ್​ ಅವರು, ಚುನಾವಣಾ ಆಯ್ತು ಆಗುವುದಕ್ಕೂ ಮುನ್ನ, ಇವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಹಲವಾರು ಪ್ರಮುಖ ನಿರ್ಧಾರ ತೆಗೆದುಕೊಂಡವರು. ಅದರಲ್ಲಿ ಮುಖ್ಯವಾದದ್ದು ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370 ನೇ ವಿಧಿ ರದ್ದತಿಯ ಶಿಲ್ಪಿ ಇವರೇ. ಈ ವಿಧಿಯನ್ನು ರದ್ದು ಮಾಡಿದ ಬಳಿಕ, ಜಮ್ಮು ಕಾಶ್ಮೀರದ ನಕ್ಷೆಯೇ ಈಗ ಬದಲಾಗಿದೆ. ಕಲ್ಲು ತೂರಾಟ, ಭಯೋತ್ಪಾದನಾ ಕೃತ್ಯ ಕಡಿಮೆಯಾಗಿದೆ. ದೇಶ ವಿದೇಶಗಳಿಂದ ಜನರು ನಿರ್ಭೀತರಾಗಿ ಕಾಶ್ಮೀರದ ಸೊಬಗನ್ನು ಸವಿಯಲು ಬರುತ್ತಿದ್ದಾರೆ. ದಿನ ಬೆಳಗಾದರೆ ಪಾಕಿಸ್ತಾನದಿಂದ ಫಂಡಿಂಗ್​ ಮಾಡಿಕೊಂಡು ಉಗ್ರ ಕೃತ್ಯ ನಡೆಸುತ್ತಿದ್ದವರೆಲ್ಲಾ ಈಗ ಮೂಲೆ ಗುಂಪಾಗಿದ್ದಾರೆ. ಪ್ರವಾಸೋದ್ಯಮ ಗರಿಗೆದರಿದೆ. ಅಲ್ಲಿ ಹಿಂದೆಂದಿಗಿಂತಲೂ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿದೆ. ಇದರ ಮಾಸ್ಟರ್​ ಮೈಂಡ್​ ಆಗಿರುವುದೇ ಗ್ಯಾನೇಶ್​ ಕುಮಾರ್​. ಇದನ್ನು ಸಹಿಸಲು ಆಗದವರೇ ಈಗ ಗ್ಯಾನೇಶ್​ ಕುಮಾರ್​ ಅವರನ್ನು ಬೇರೆ ನೆಪದಲ್ಲಿ ತುಳಿಯಲು ನೋಡುತ್ತಿದ್ದಾರೆ ಎನ್ನುವುದು ರಿವೀಲ್​ ಆಗಿದೆ.

ರಾಮ ಮಂದಿರದ ರೂವಾರಿ!

ಗ್ಯಾನೇಶ್​ ಕುಮಾರ್​ ಅವರ ಸ್ಟೋರಿ ಇಲ್ಲಿಗೇ ಮುಗಿಯುವುದಿಲ್ಲ. ಅವರು ರಾಮ ಮಂದಿರ ಟ್ರಸ್ಟ್‌ನ ಶಿಲ್ಪಿ ಕೂಡ. 500 ವರ್ಷಗಳಿಂದ ರಾಮ ಮಂದಿರಕ್ಕಾಗಿ ನಡೆದ ಹೋರಾಟದಲ್ಲಿ ಕೊನೆಗೂ ರಾಮಲಲ್ಲಾನಿಗೆ ವಿಜಯ ಸಿಕ್ಕಿರುವುದು, ಕೋಟಿ ಕೋಟಿ ರಾಮ ಭಕ್ತರ ಶತಮಾನಗಳ ಆಶಯ ಈಡೇರುವಂತೆ ಮಾಡಿರುವಲ್ಲಿ ಗ್ಯಾನೇಶ್​ ಕುಮಾರ್​ ಅವರ ಪಾಲು ಬಹುದೊಡ್ಡದಿದೆ. ರಾಮನೇ ಇಲ್ಲ ಎಂದುಕೊಂಡು ತಿರುಗಾಡುವವರಿಗೆ, ಚುನಾವಣೆ ಬಂದಾಗ ಮಾತ್ರ ರಾಮನ ನೆನಪಾಗುವವರಿಗೆ ಈಗ ಗ್ಯಾನೇಶ್​ ಕುಮಾರ್​ ಕಂಡರೆ ಆಗುತ್ತಿಲ್ಲ. ಇದಕ್ಕೆ ಕಾರಣ ಬೇರೆ ಹೇಳಬೇಕಾಗಿಲ್ಲ. ಇದೀಗ ಇದೇ ಗ್ಯಾನೇಶ್​ ಕುಮಾರ್​ SIR ಮೂಲಕ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಅದಕ್ಕಾಗಿಯೇ ಈ ದ್ವೇಷ!