Asianet Suvarna News Asianet Suvarna News

17 ಶಾಸಕರ ಕಾಂಗ್ರೆಸ್‌ ಸೇರ್ಪಡೆ ವಿಚಾರದಲ್ಲಿ ಈಗ ಡಿಕೆಶಿ ಮೌನ

  • ಬಿಜೆಪಿಗೆ ಪಕ್ಷಾಂತರ ಮಾಡಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ 17 ಮಂದಿ ಶಾಸಕರು 
  • ಕಾಂಗ್ರೆಸ್‌ಗೆ ಬರುವುದಾದರೆ ಅರ್ಜಿ ಹಾಕಿ ಎಂಬ ಹೇಳಿಕೆ ಭಾರೀ ಚರ್ಚೆಗೆ ಕಾರಣ
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಇದೀಗ ಆ ವಿಚಾರದಲ್ಲಿ ಮೌನಕ್ಕೆ ಶರಣು
DK Shivakumar Silence over 17 MlAs  issue snr
Author
Bengaluru, First Published Jul 7, 2021, 8:01 AM IST

ಬೆಂಗಳೂರು/ಉಡುಪಿ (ಜು.07): ಬಿಜೆಪಿಗೆ ಪಕ್ಷಾಂತರ ಮಾಡಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ 17 ಮಂದಿ ಶಾಸಕರು ಮತ್ತೆ ಕಾಂಗ್ರೆಸ್‌ಗೆ ಬರುವುದಾದರೆ ಅರ್ಜಿ ಹಾಕಿ ಎಂಬ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಇದೀಗ ಆ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ.

ಕಾಂಗ್ರೆಸ್ ಕದ ತಟ್ಟುತ್ತಿದ್ದಾರಾ ಬಿಜೆಪಿ ಬಾಂಬೆ ಫ್ರೆಂಡ್ಸ್..? ...

ಕಾಂಗ್ರೆಸ್‌ ತ್ಯಜಿಸಿ ಬಿಜೆಪಿಗೆ ಸೇರ್ಪಡೆ ಆಗಿರುವ ಶಾಸಕರನ್ನು ಮತ್ತೆ ಪಕ್ಷಕ್ಕೆ ಸ್ವಾಗತಿಸುವ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನು ಸದ್ಯ ಪ್ರತಿಕ್ರಿಯೆ ನೀಡುವುದಿಲ್ಲ. ಆಮೇಲೆ ಈ ವಿಚಾರ ಮಾತನಾಡೋಣ ಎಂದರು.

ಕಾಂಗ್ರೆಸ್‌, ಡಿಕೆಶಿ ವಿರುದ್ಧ ಮುಗಿಬಿದ್ದ ಬಿಜೆಪಿ ; ಹಡಗಿಗೆ ತೂತು ಬಿದ್ದಿದೆ

ಕೆಪಿಸಿಸಿ ಅಧ್ಯಕ್ಷನಾಗಿ ನಾನು ಯಾರನ್ನೂ ಅಸ್ಪೃಶ್ಯರಂತೆ ಕಾಣುವುದಿಲ್ಲ. ಪಕ್ಷ ಸೇರಬಯಸುವ ಬಿಜೆಪಿ ಶಾಸಕರು ಅರ್ಜಿ ಹಾಕಿಕೊಳ್ಳಲಿ. ರಾಜಕೀಯ ನಿಂತ ನೀರಲ್ಲ, ರಾಜಕಾರಣ ಯಾವಾಗಲೂ ಬದಲಾಗುತ್ತಿರುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಶುಕ್ರವಾರ ಹೇಳಿದ್ದರು. ಈ ಮೂಲಕ ಬಿಜೆಪಿಗೆ ಪಕ್ಷಾಂತರ ಮಾಡಿ ಸಮ್ಮಿಶ್ರ ಸಕಾರ ಪತನಕ್ಕೆ ಕಾರಣರಾದ 17 ಮಂದಿ ಶಾಸಕರು ಮತ್ತೆ ಕಾಂಗ್ರೆಸ್‌ಗೆ ಬರುವುದಾದರೆ ತಾವು ಮುಕ್ತ ಮನಸ್ಥಿತಿ ಹೊಂದಿದ್ದೇನೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

ಈ ಹೇಳಿಕೆ ಕುರಿತು ಬಿಜೆಪಿ ಮುಖಂಡರಿಂದ ತೀವ್ರ ಟೀಕೆವ್ಯಕ್ತವಾಗಿತ್ತು. ಮುಳುಗುವ ಹಡಗಾದ ಕಾಂಗ್ರೆಸ್‌ ಕನಸು ಕಾಣುತ್ತಿದ್ದು, ಅದನ್ನು ಹತ್ತುವವರು ಯಾರು ಎಂದು ಹಲವು ಮುಖಂಡರು ವ್ಯಂಗ್ಯವಾಡಿದ್ದರು.

Follow Us:
Download App:
  • android
  • ios