ಕುಮಾರ ಪಾರ್ಕ್‌ನ ಸರ್ಕಾರಿ ನಿವಾಸದಲ್ಲೇ ಇನ್ನು ಡಿಕೆಶಿ ಲಭ್ಯ: ಸದಾಶಿವನಗರಕ್ಕೆ ಬಾರದಂತೆ ಸೂಚನೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇನ್ನು ಮುಂದೆ ಕುಮಾರಪಾರ್ಕ್ ಪೂರ್ವದಲ್ಲಿ ತಮಗೆ ನೀಡಿರುವ ಸರ್ಕಾರಿ ನಿವಾಸದಲ್ಲಿಯೇ ಸಾರ್ವಜನಿಕರ ಭೇಟಿ ಹಾಗೂ ಇಲಾಖಾ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರು (ಜೂ.13): ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇನ್ನು ಮುಂದೆ ಕುಮಾರಪಾರ್ಕ್ ಪೂರ್ವದಲ್ಲಿ ತಮಗೆ ನೀಡಿರುವ ಸರ್ಕಾರಿ ನಿವಾಸದಲ್ಲಿಯೇ ಸಾರ್ವಜನಿಕರ ಭೇಟಿ ಹಾಗೂ ಇಲಾಖಾ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದ್ದಾರೆ. ಡಿಎಪಿಆರ್ ಇಲಾಖೆಯು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಳೆದ 10 ತಿಂಗಳ ಹಿಂದೆಯೇ ಗಾಂಧಿಭವನ ರಸ್ತೆಯ ಕುಮಾರಪಾರ್ಕ್ ಪೂರ್ವದಲ್ಲಿನ ಸರ್ಕಾರಿ ನಿವಾಸವನ್ನು ನಿಗದಿ ಮಾಡಿದ್ದರೂ, ಈವರೆಗೆ ಡಿ.ಕೆ.ಶಿವಕುಮಾರ್ ಅಲ್ಲಿಗೆ ತೆರಳಿರಲಿಲ್ಲ. ಇದೀಗ ಕುಮಾರಪಾರ್ಕ್ ಪೂರ್ವದ ಸರ್ಕಾರಿ ನಿವಾಸದಿಂದಲೇ ತಮ್ಮ ಕಾರ್ಯಚಟುವಟಿಕೆ ನಡೆಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸದಾಶಿವನಗರದ ತಮ್ಮ ಖಾಸಗಿ ನಿವಾಸಕ್ಕೆ ಯಾರೂ ಬರಬಾರದು ಹಾಗೂ ಕುಮಾರಪಾರ್ಕ್ ಪೂರ್ವದ ನಿವಾಸದಲ್ಲಿಯೇ ತಮ್ಮನ್ನು ಭೇಟಿಯಾಗಲು ಬರುವವರನ್ನು ಸಂಪರ್ಕಿಸುವುದಾಗಿಯೂ ಹೇಳಿದ್ದಾರೆ.
ಅಶೋಕ್‌ಗೆ ಡಿಕೆಶಿ ಚಾಟಿ: ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಶಾಸಕರಾಗಲೆಂದು ಈ ಹಿಂದೆ ನನ್ನ ಕ್ಷೇತ್ರ ಕನಕಪುರಕ್ಕೆ ಬಂದಿದ್ದರು. ಆದರೆ, ಆಗಲಿಲ್ಲ. ಈಗ ನನ್ನ ಸರ್ಕಾರಿ ನಿವಾಸ ಕೇಳುತ್ತಿದ್ದಾರೆ. ನನ್ನನ್ನೇ ಆ ಬಗ್ಗೆ ಕೇಳಿದ್ದರೆ ನಾನೇ ಬಿಟ್ಟುಕೊಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಆರ್. ಅಶೋಕ್ ಅವರು ಕುಮಾರಪಾರ್ಕ್‌ನಲ್ಲಿನ ಡಿಸಿಎಂ ಸರ್ಕಾರಿ ನಿವಾಸವನ್ನು ತಮಗೆ ನೀಡುವಂತೆ ಡಿಪಿಎಆರ್‌ಗೆ 3 ಬಾರಿ ಪತ್ರ ಬರೆದಿರುವ ಕುರಿತಂತೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಆರ್. ಅಶೋಕ್ ಅವರು ಮನೆ ಬೇಕು ಎಂದು ಕೇಳಿದ್ದರೆ ನಾನೇ ಬಿಟ್ಟುಕೊಡುತ್ತಿದೆ.
ಬೆಳಗಾವಿ ಕೋರ್ಟ್ ಆವರಣದಲ್ಲೇ ಕೈದಿಯಿಂದ ಪಾಕ್ ಪರ ಘೋಷಣೆ!
ಅವರಿಗೆ ಮನೆ ಕೊಡಿಸೋಣ. ಹಿಂದೆ ಶಾಸಕರಾಗಬೇಕೆಂದು ನನ್ನ ಕ್ಷೇತ್ರಕ್ಕೇ ಬಂದಿದ್ದರು. ಆದರೆ, ಅಲ್ಲಿಂದ ಶಾಸಕರಾಗಲು ಆಗಲಿಲ್ಲ. ಈಗ ಮನೆ ಕೇಳುತ್ತಿದ್ದಾರೆ ಎಂದರು. ಆಗ ಮಾಧ್ಯಮದವರು ಆ ಮನೆಗೆ ಹೋದರೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತಿದೆ ಎಂದು ಕೇಳಿದ್ದಕ್ಕೆ, ಈಗ ನಾನು ಪಡೆದಿರುವ ಸರ್ಕಾರಿ ನಿವಾಸದಲ್ಲಿ ಹಿಂದೆ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರಿದ್ದರು. ಅಲ್ಲಿ ನನಗೆ ಹಲವು ನೆನಪುಗಳಿವೆ. ಮೂರು ವರ್ಷಗಳ ಕಾಲ ಅಲ್ಲಿನ ಮರದ ಕೆಳಗೆ ಕುಳಿತುಕೊಂಡು ಹಲವು ಚರ್ಚೆ ಮಾಡಿದ್ದೇವೆ. ಆ ನೆನಪಿಗಾಗಿ ಆ ಮನೆ ಪಡೆದಿದ್ದೇನೆ. ಆರ್. ಅಶೋಕ್ ಅವರೂ ಸಿಎಂ ಆಗಲಿ ಬಿಡಿ ಎಂದರು.