ಸೋಮಣ್ಣ ಎಲ್ಲ ಪಾರ್ಟಿ ನೋಡಿಕೊಂಡು ಬಂದಿದ್ದಾರೆ; ಬಿಜೆಪಿಯಲ್ಲೇ ಇರುತ್ತಾರೆ: ಶ್ರೀರಾಮುಲು
ಎಲ್ಲಾ ರಾಜಕೀಯ ಪಕ್ಷದವರ ಮೇಲೆ ಸಿಬಿಐ ಕೇಸ್ ಗಳಿವೆ. ಹಾಗಂತ ಇಂತಹ ನಿರ್ಧಾರಗಳು ಹಿಂದೆ ನಡೆದಿಲ್ಲ ಎಂದು ಡಿಕೆಶಿ ಮೇಲಿನ ಸಿಬಿಐ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಕಿಡಿಕಾರಿದರು.
ಕೋಲಾರ (ನ.26): ಎಲ್ಲಾ ರಾಜಕೀಯ ಪಕ್ಷದವರ ಮೇಲೆ ಸಿಬಿಐ ಕೇಸ್ ಗಳಿವೆ. ಹಾಗಂತ ಇಂತಹ ನಿರ್ಧಾರಗಳು ಹಿಂದೆ ನಡೆದಿಲ್ಲ ಎಂದು ಡಿಕೆಶಿ ಮೇಲಿನ ಸಿಬಿಐ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಕಿಡಿಕಾರಿದರು.
ಕೋಲಾರದಲ್ಲಿಂದು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಇಡಿ ಶಿಫಾರಸ್ಸು ಮಾಡಿದಕ್ಕೆ ನಾವು ಸಿಬಿಐಗೆ ವಹಿಸಿದ್ವಿ. ರಾಜಕೀಯ ದ್ವೇಷ ಎಂಬುದೆಲ್ಲ ಸುಳ್ಳು. ಕಾನೂನು ಸಲಹೆ ಪಡೆದು ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ಇನ್ನೇನು ಚಾರ್ಜ್ ಶೀಟ್ ಆಗುವ ಕ್ಷಣದಲ್ಲಿ ಈ ರೀತಿ ಮೂರ್ಖತನದ ಕೆಲಸ ಮಾಡಿದ್ದಾರೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಕ್ರಾಸ್ ಮಾಡಲ್ಲ: ಶ್ರೀರಾಮುಲು
ಸರ್ಕಾರ ಡಿಕೆಶಿ ಕೈಗೊಂಬೆಯಾಗಿದೆ:
ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಈ ತರಹದ ನಿರ್ಧಾರ ಮಾಡಿಲ್ಲ. ಕಾಂಗ್ರೆಸ್‌ನ ಈ ನಿರ್ಧಾರದಿಂದ ಕಾನೂನು ಮತ್ತು ರಾಜಕಾರಣಕ್ಕೆ ಸಂಘರ್ಷ ಆಗುವಂತೆ ಮಾಡಿದೆ. ತಪ್ಪು ಮಾಡಿಲ್ಲ ಅನ್ನೋ ವಿಶ್ವಾಸ ಡಿಕೆಶಿ ಗೆ ಇರಬೇಕಾಗಿತ್ತು. ಆದರೆ ಅವರು ತಪ್ಪು ಮಾಡಿದ್ದರಿಂದಲೇ ಇಂಥ ನಿರ್ಧಾರ ಮಾಡಿದ್ದಾರೆ. ಸರ್ಕಾರವನ್ನು ಕೈಗೊಂಬೆಯಂತೆ ಡಿಕೆಶಿ ಆಡಿಸುತ್ತಿದ್ದಾರೆ. ಈ ನಿರ್ಧಾರದಿಂದ ಸರ್ಕಾರಕ್ಕೆ ಘೋರ ಅಪಚಾರವೆಸಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರವನ್ನ ಜನರೇ ಓಡಿಸುತ್ತಾರೆ:
ಇನ್ನು ಬೆಳಗಾವಿಯಲ್ಲಿ ಮೈತ್ರಿ ಸರ್ಕಾರ ಪತನ ಎಂದು ಆರ್.ಅಶೋಕ್ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರಕಾರಕ್ಕೆ ಜನರು ಬಹುಮತ ನೀಡಿದ್ದಾರೆ. ಆದರೆ ನೆನಪಿಡಿ ಮುಂದಿನ ದಿನಗಳಲ್ಲಿ ಶಾಸಕರನ್ನು ಜನರೇ ಬೆನ್ನಟ್ಟಿ ಕಲ್ಲಲ್ಲಿ ಓಡಿತ್ತಾರೆ. 5 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಬೇಕು. ಆಗ ಮಾತ್ರ ಸರ್ಕಾರದ ಬಂಡವಾಳ ಜನರಿಗೆ ತಿಳಿಯಲಿದೆ. ಶೇ.25 ರಷ್ಟು ಜನರಿಗೆ ಆಶ್ವಾಸನೆಗಳು ತಲುಪಿಲ್ಲ. ಅನುದಾನ ಇಲ್ಲದೆ ಶಾಸಕರು ಕ್ಷೇತ್ರದಲ್ಲಿ ಓಡಾಡಲು ಆಗ್ತಿಲ್ಲ ಎಂದರು.
ಯತ್ನಾಳ್ ಸೋಮಣ್ಣ ಇಬ್ಬರು ನಮ್ಮ ನಾಯಕರು:
ರಾಜ್ಯ ಬಿಜೆಪಿಯ ಭಿನಮತ ಕುರಿತು ಪ್ರತಿಕ್ರಿಯಿಸಿದ ಅವರು ಯತ್ನಾಳ್, ಸೋಮಣ್ಣ ಇಬ್ಬರೂ ನಮ್ಮ ಪಕ್ಷದ ಹಿರಿಯ ನಾಯಕರು. ಬಿಜೆಪಿಯಲ್ಲಿ ಕಿರಿಯರಾದ ವಿಜಯೇಂದ್ರ ಅವರಿಗೆ ಅಧಿಕಾರ ನೀಡಿದಕ್ಕೆ ಅಸಮಾಧಾನ ಗೊಂಡಿದ್ದಾರೆ. BSY, ಯತ್ನಾಳ್, ಸೋಮಣ್ಣ ಮಾರ್ಗದರ್ಶನದಲ್ಲೇ ವಿಜಯೇಂದ್ರ ಮುಂದುವರಿಯುತ್ತಾರೆ. ಸೋಮಣ್ಣ ಎಲ್ಲಾ ಪಾರ್ಟಿಯನ್ನು ನೋಡಿಕೊಂಡು ಬಂದಿದ್ದಾರೆ. ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವ ಕೆಲಸ ಆಗಲಿದೆ ಎಂದರು.
ಸರ್ಕಾರವನ್ನು ಬುಗುರಿಯಂತೆ ಆಡಿಸುತ್ತಿದ್ದಾರೆ; ಡಿಕೆಶಿ ವಿರುದ್ಧ ಶ್ರೀರಾಮುಲು ವಾಗ್ದಾಳಿ
ಕಾಂಗ್ರೆಸ್ ಒಳಜಗಳ ಡಿಕೆಶಿಗೆ ಖೆಡ್ಡಾ:
ಇನ್ನು ಕಾಂಗ್ರೆಸ್ ನಲ್ಲಿ ಒಳಗೆ ಜಗಳ ಕುರಿತು ಡಿಕೆ ಶಿವಕುಮಾರ್‌ಗೆ ಖೆಡ್ಡಾ ತೋಡಿದ್ದಾರೆ ಎಂಬ ವಿಚಾರ ಸಂಬಂಧ ಮಾತನಾಡಿದ ಅವರು, ಗಂಡ ಹೆಂಡತಿ ರೀತಿ ಕಾಂಗ್ರೆಸ್ ನಲ್ಲಿ ಹಗಲು ಜಗಳವಾಡ್ತಾರೆ, ರಾತ್ರಿ ಒಂದಾಗುತ್ತಾರೆ. ಸರ್ಕಾರ ಎಷ್ಟು ದಿನಗಳ ಕಾಲ ಇರುತ್ತೆ ಅನ್ನೋದನ್ನ ನೋಡಬೇಕು. ಇದೇ ವೇಳೆ ಜನಾರ್ಧನ ರೆಡ್ಡಿ ಬಿಜೆಪಿಗೆ ವಾಪಸ್ಸು ಆಗುವ ಚರ್ಚೆ ನಡೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಜನಾರ್ದನರೆಡ್ಡಿ ಅವರು ಬಿಜೆಪಿ ಗೆ ವಾಪಸ್ಸು ಬರುವ ಚರ್ಚೆ ಆಗ್ತಿದೆ. ಎಲ್ಲರೂ ಸೇರಿದ್ರೆ ಪಾರ್ಟಿ ಆಗುತ್ತೆ, ಕೇವಲ ರಾಮುಲು ಮಾತ್ರವಲ್ಲ.
ಆ ವಿಚಾರದಲ್ಲಿ ನನ್ನದು ಅಭ್ಯಂತರವಿಲ್ಲ ಎಂದರು.