ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಕ್ರಾಸ್ ಮಾಡಲ್ಲ: ಶ್ರೀರಾಮುಲು

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಧೃಡಸಂಕಲ್ಪ ಮಾಡಬೇಕು. ಇದು ಕೇವಲ ಒಬ್ಬರಿಂದ ಆಗುವ ಕೆಲಸವಲ್ಲ, ಇದೊಂದು ಸಾಮೂಹಿಕ ಪ್ರಯತ್ನ. ಎಲ್ಲ ಕಾರ್ಯಕರ್ತರು ಹೊಸ ಹುಮ್ಮಸ್ಸಿನಿಂದ ದುಡಿಯಬೇಕು. ರಾಜ್ಯದಿಂದ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದ ಮಾಜಿ ಸಚಿವ ಬಿ.ಶ್ರೀರಾಮುಲು 

Congress Not Cross Double Digits in Lok Sabha Elections 2024 Says B Sriramulu grg

ವಿಜಯಪುರ(ನ.18):  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ಕ್ರಾಸ್ ಮಾಡುವುದಿಲ್ಲ. ರಾಜ್ಯದಲ್ಲಿ ಅವರದೇ ಸರ್ಕಾರ ಇದೆ. ಆದರೂ ಒಂದಿಬ್ಬರು ಆಯ್ಕೆಯಾಗಬಹುದು ಅಷ್ಟೇ. ಜನರಿಗೆ ಕಾಂಗ್ರೆಸ್ ಮೋಸದ ಬಗ್ಗೆ ಅರಿವಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ವಿಜಯಪುರ ಕಾರ್ಯಕರ್ತರ ಜೊತೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಸಂಪೂರ್ಣ ಕಡಿಮೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಧೃಡಸಂಕಲ್ಪ ಮಾಡಬೇಕು. ಇದು ಕೇವಲ ಒಬ್ಬರಿಂದ ಆಗುವ ಕೆಲಸವಲ್ಲ, ಇದೊಂದು ಸಾಮೂಹಿಕ ಪ್ರಯತ್ನ. ಎಲ್ಲ ಕಾರ್ಯಕರ್ತರು ಹೊಸ ಹುಮ್ಮಸ್ಸಿನಿಂದ ದುಡಿಯಬೇಕು. ರಾಜ್ಯದಿಂದ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ, ಜೆಡಿಎಸ್‌ನಿಂದ ತೋರಿಕೆಗಾಗಿ ಬರ ವೀಕ್ಷಣೆ: ಸಚಿವ ಎಂ.ಬಿ.ಪಾಟೀಲ

ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು ಸಹ ಹಿರಿಯ ರಾಜಕೀಯ ಧುರೀಣರು, ಲಕ್ಷಾಂತರ ಕಾರ್ಯಕರ್ತರ ಪ್ರೀತಿಯನ್ನು ಸಂಪಾದಿಸಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್. ಪಾಟೀಲ ಕೂಚಬಾಳ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ವಿಭಾಗೀಯ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ, ನಗರ ಮಂಡಳ ಅಧ್ಯಕ್ಷ ಮಳುಗೌಡ ಪಾಟೀಲ, ಮುಖಂಡ ವಿವೇಕಾನಂದ ಡಬ್ಬಿ, ಮಲ್ಲಿಕಾರ್ಜುನ ಜೋಗೂರ, ಬಸರಾಜ ಬಿರಾದಾರ, ಸಂಜು ಐಹೊಳಿ, ಶಿವರುದ್ರ ಬಾಗಲಕೋಟ, ಬಿಜೆಪಿ ಮಹಾನಗರ ಪಾಲಿಕೆ ಸದಸ್ಯರು, ಮಹಿಳಾ ಮೋರ್ಚಾ ಸೇರಿದಂತೆ ಇತರರು ಇದ್ದರು.

Latest Videos
Follow Us:
Download App:
  • android
  • ios