Asianet Suvarna News Asianet Suvarna News

ಹಿರಿಯ ರಾಜಕಾರಣಿ ಕಾಗೋಡು ತಿಮ್ಮ​ಪ್ಪರಿಗೆ ದೇವ​ರಾಜ ಅರಸು ಪ್ರಶ​ಸ್ತಿ ಗರಿ

ರಾಜ್ಯ ಸರ್ಕಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಈ ಸಾಲಿನ ದೇವರಾಜ ಅರಸು ಪ್ರಶಸ್ತಿಯನ್ನು ಘೋಷಿಸಿದೆ. ಸಮಾಜವಾದಿ ಮೂಸೆಯಿಂದ ಬಂದಿರುವ ಕಾಗೋಡು ತಿಮ್ಮಪ್ಪ ಅವರು ಸಮಾಜವಾದಿ ಪಕ್ಷದಿಂದಲೇ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದವರು. 

devaraja arasu award for former speaker kagodu thimmappa gvd
Author
First Published Aug 18, 2023, 7:58 PM IST

ಸಾಗರ (ಆ.18): ರಾಜ್ಯ ಸರ್ಕಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಈ ಸಾಲಿನ ದೇವರಾಜ ಅರಸು ಪ್ರಶಸ್ತಿಯನ್ನು ಘೋಷಿಸಿದೆ. ಸಮಾಜವಾದಿ ಮೂಸೆಯಿಂದ ಬಂದಿರುವ ಕಾಗೋಡು ತಿಮ್ಮಪ್ಪ ಅವರು ಸಮಾಜವಾದಿ ಪಕ್ಷದಿಂದಲೇ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದವರು. ಹಿರಿಯ ಸಮಾಜವಾದಿ ಗೋಪಾಲಗೌಡರ ಗರಡಿಯಲ್ಲಿ ಬೆಳೆದಿರುವ ಕಾಗೋಡು, ಸಾಮಾಜಿಕ ನ್ಯಾಯದ ಪರವಾದ ಧ್ವನಿಯಾಗಿ ಕೆಲಸ ಮಾಡಿದವರು, ಸಮಸಮಾಜದ ಕನಸು ಕಂಡವರು. ದೇವರಾಜ ಅರಸು ಕೂಡ ಸಾಮಾಜಿಕ ನ್ಯಾಯದ ಹರಿಕಾರರಾಗಿ ಗುರುತಿಸಿಕೊಂಡವರು. 

ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಈ ಬಾರಿ ಅರ್ಹ ವ್ಯಕ್ತಿಗೆ ದೇವರಾಜ ಅರಸು ಹೆಸರಿನ ಪ್ರಶಸ್ತಿಯನ್ನು ನೀಡುತ್ತಿದೆ ಎನ್ನಬಹುದು. ಸಮ ಸಮಾಜದ ಕಲ್ಪನೆಯಲ್ಲಿಯೇ ಕಾಗೋಡು ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕಾಗೋಡು ತಿಮ್ಮಪ್ಪ ಅವರು ತಮಗೆ ರಾಜಕೀಯ ಅಧಿಕಾರ ದೊರೆತಾಗ ಅದನ್ನು ಸರ್ಕಾರದ ಮಟ್ಟದಲ್ಲಿ ಪ್ರತಿಪಾದಿಸಿದರು. ಇವರ ಸಾಮಾಜಿಕ ಕಳಕಳಿಯನ್ನು ಅರ್ಥ ಮಾಡಿಕೊಂಡ ಮುಖ್ಯಮಂತ್ರಿ ದೇವರಾಜ ಅರಸು ಅವರು, ಸದನದಲ್ಲಿ ಏನು ಮಾಡಬೇಕು ಹೇಳೋ ಎಂದು ಕಾಗೋಡರನ್ನು ಕೇಳಿದ್ದಲ್ಲದೇ, ಇದಕ್ಕಾಗಿ ಕಾಗೋಡರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ನೀಡಲು ಆದೇಶ ನೀಡಿದ್ದರು.

ರಾಜ್ಯ​ದಲ್ಲಿ ಸರ್ಕಾರ ಇದೆಯೋ, ಇಲ್ವೋ ಎಂಬ ಗೊಂದಲ ಉಂಟಾಗಿದೆ: ಎಂಟಿಬಿ ನಾಗರಾಜ್‌

ವರದಿ ಆಧಾರದ ಮೇಲೆಯೇ ‘ಉಳುವವನೆ ಹೊಲದೊಡೆಯ’ ಎನ್ನುವ ಭೂ ಸುಧಾರಣಾ ಕಾನೂನು ಜಾರಿಗೆ ತಂದರು. ಹಾಗಾಗಿ, ಭೂಸುಧಾರಣಾ ಕಾನೂನು ಜಾರಿಗೆ ಬರುವಲ್ಲಿ ಕಾಗೋಡರ ಪಾತ್ರ ಪ್ರಮುಖವಾಗಿದೆ. ಕಾನೂನು ಜಾರಿಯಾದ ನಂತರ ಕಾಗೋಡು ಗೇಣಿ ರೈತರಿಗೆ ಭೂಮಿ ಕೊಡಿಸಿ ಸಾಫಲ್ಯತೆಯನ್ನು ಕಂಡವರು. ಮುಂದೆ ಕಾಗೋಡು ತಿಮ್ಮಪ್ಪ ಅವರು ಶಾಸಕರಾದಾಗಲೆಲ್ಲ, ಸಚಿವ ಸ್ಥಾನ ದೊರಕಿದಾಗೆಲ್ಲ ಸಮಾಜದ ಶೋಷಿತರ, ಭೂರಹಿತರ ಪರವಾಗಿ ಶಕ್ತಿಮೀರಿ ಕೆಲಸ ಮಾಡಿದರು. 

ತಮಿ​ಳು​ನಾಡಿನ ಹೊಸೂರು ಉದ್ಧಾರ ಆಗಲು ಎಚ್‌ಡಿಕೆ ಕಾರಣ: ಸಂಸದ ಡಿ.ಕೆ.ಸುರೇಶ್‌

ಕಳೆದ ಬಾರಿಯ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಸ್ಥಾನ ದೊರಕಿದಾಗಲೂ ರೈತರ ಪರವಾಗಿ ಕೆಲಸ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ಎಲ್ಲ ಕಾರಣಕ್ಕಾಗಿ ರಾಜ್ಯ ಸರ್ಕಾರ ಹಿರಿಯರಾದ ಕಾಗೋಡು ತಿಮ್ಮಪ್ಪ ಅವರಿಗೆ ಅರಸು ಪ್ರಶಸ್ತಿಯನ್ನು ಘೋಷಿಸಿದೆ. ತಾಲೂ​ಕಿ​ನ​ವರೇ ಅದ ಕಾಗೋಡು ಸತ್ಯಾ​ಗ್ರಹ ರೂವಾರಿ ಎಚ್‌ ಗಣ​ಪ​ತಿ​ಯಪ್ಪ ಅವ​ರಿಗೆ ಈ ಹಿಂದೆ ದೇವ​ರಾಜ ಅರಸು ಪ್ರಶಸ್ತಿ ಬಂದಿ​ದ್ದನ್ನು ಸ್ಮರಿ​ಸ​ಬ​ಹು​ದು.

Follow Us:
Download App:
  • android
  • ios