Asianet Suvarna News Asianet Suvarna News

Council Election karnataka :ಈ ಬಾರಿ ಗೆಲುವು ಕಾಂಗ್ರೆಸ್‌ನದ್ದೇ- ಅಭ್ಯರ್ಥಿ ವಿಶ್ವಾಸ

  • ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲವು ನಮ್ಮದೇ 
  • ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಪ್ರಸನ್ನ ಕುಮಾರ್‌ ಹೇಳಿಕೆ
Congress will in MLC Election  shivamogga  Says candidate  Prasanna  Kumar snr
Author
Bengaluru, First Published Dec 2, 2021, 7:36 AM IST

 ಹೊನ್ನಾಳಿ(ಡಿ.02):  ಯಾವ ಪಕ್ಷದವರು ಏನೇ ಹೇಳಿದರೂ ಕೂಡ ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಗೆಲವು ನಮ್ಮದೇ ಈ ಬಗ್ಗೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ (Congress) ಅಭ್ಯರ್ಥಿ ಆರ್‌.ಪ್ರಸನ್ನ ಕುಮಾರ್‌ (Prasanna Kumar) ಹೇಳಿದರು. ತಾಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ಕೆಲವು ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತಯಾಚನೆ ಮಾಡಿ ಮಾತನಾಡಿದರು. ಕಾಂಗ್ರೆಸ್‌ನ (Congress) ಮಾಜಿ ಸಚಿವ ಕಾಗೋಡು ತಿಮ್ಮಪ್ಪ (Kagodu Thimmappa), ಕಿಮ್ಮನೆ ರತ್ನಾಕರ್‌, ಚನ್ನಗಿರಿ ಮಾಜಿ ಶಾಸಕ ವಡ್ನಾಳ್‌ ರಾಜಣ್ಣ, ಹೊನ್ನಾಳಿ ತಾಲೂಕಿನ ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಶಿವಮೊಗ್ಗ (Shivamogga) ಹಾಗೂ ದಾವಣಗೆರೆ (Davanagere) ಕಾಂಗ್ರೆಸ್‌ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ಎಲ್ಲ ಹಂತಗಳ ಮುಖಂಡರು ತಮ್ಮ ಪರವಾಗಿ ಹೆಚ್ಚಿನ ಪ್ರಚಾರ ಕೈಗೊಂಡಿದ್ದು, ನನ್ನ ಗೆಲುವಿಗೆ ಜೆಡಿಎಸ್‌, ಬಿಜೆಪಿ ಸದಸ್ಯರೂ ಪರೋಕ್ಷವಾಗಿ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.

ಶಿವಮೊಗ್ಗ (Shivamogga) ವಿಧಾನ ಪರಿಷತ್‌ ಕ್ಷೇತ್ರದಲ್ಲಿ 4180 ಮತದಾರರಿದ್ದು ಈ ಪೈಕಿ 3840 ಮತದಾರರು ಗ್ರಾಪಂ ಸದಸ್ಯರು ಎಂದು ಮಾಹಿತಿ ನೀಡಿದರು. ಇನ್ನುಳಿದ 340 ನಗರ, ಪುರಸಭೆ, ಹಾಗೂ ಪಟ್ಟಣ ಪಂಚಾಯಿತಿ ಇತರೆ ಮತದಾರರಿದ್ದಾರೆ ಎಂದು ಹೇಳಿದರು.

ಚೀಲೂರು , ನ್ಯಾಮತಿ, ಸವಳಂಗ, ಕೆಂಚಿಕೊಪ್ಪ, ಬೆಳಗುತ್ತಿ, ಭೇಟಿ ನೀಡಿದ್ದು ಕೂಲಂಬಿ, ಕುಂದೂರು, ಯಕ್ಕನಹಳ್ಳಿ ಸಾಸ್ವೇಹಳ್ಳಿಗಳಿಗೆ ಭೇಟಿ ನೀಡಲಾಗುವುದು ಎಂದು ಹೇಳಿದರು. ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.

ಕಾಂಗ್ರೆಸ್‌ (Congress) ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ಬಸನಗೌಡ, ಸಾಸ್ವೇ ಹಳ್ಳಿ ಬ್ಲಾಕ್‌ ಅಧ್ಯಕ್ಷ ಗದ್ದಿಗೇಶ್‌, ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್‌.ಎ. ಉಮಾಪತಿ, ಜಿಪಂ ಮಾಜಿ ಸದಸ್ಯ ಡಿ.ಜಿ.ವಿಶ್ವಾನಾಥ್‌, ಎಂ.ರಮೇಶ್‌, ಆರ್‌.ನಾಗಪ್ಪ, ಹಿರಿಯಮುಖಂಡ ಬಿ.ಸಿದ್ದಪ್ಪ, ಯುವ ಕಾಂಗ್ರೆಸ್‌ ಅಧ್ಯಕ್ಷ ಪ್ರಶಾಂತ್‌ ಬಣ್ಣಜ್ಜಿ, ಜಿಲ್ಲಾ ಉಪಾಧ್ಯ್ಯಕ್ಷ ಎಚ್‌.ಎಸ್‌.ರಂಜಿತ್‌, ಬೇಲಿಮಲ್ಲೂರು ನರಸಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಬೀರಪ್ಪ, ನ್ಯಾಮತಿ ನುಜ್ಜಿನ ವಾಗೀಶ್‌, ತರಗನಳ್ಳಿ ರಮೇಶ್‌ಗೌಡ, ಕಮ್ಮಾರಗಟ್ಟೆಶಿವಕುಮಾರ್‌ ಮತ್ತಿತರರಿದ್ದರು.

ಶಂಕರಮೂರ್ತಿ ಪುತ್ರನ ಪರ ಬಿಎಸ್‌ವೈ , ಈಶ್ವರಪ್ಪ ಹೋರಾಟ ? 
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ಅವರಿಗೆ ಪ್ರತಿಷ್ಠೆ ಕಣವಾಗಿರುವ ಶಿವಮೊಗ್ಗ (Shivamogga) ವಿಧಾನ ಪರಿಷತ್ ಕ್ಷೇತ್ರದಲ್ಲಿ ನಿಧಾನವಾಗಿ ಚುನಾವಣೆ ಬಿಸಿಯೇರುತ್ತಿದೆ. ಕಾಂಗ್ರೆಸ್, ಬಿಜೆಪಿ ಇನ್ನಿಲ್ಲದ ಪೈಪೋಟಿಯೊಂದಿಗೆ ಕ್ಷೇತ್ರದಲ್ಲಿ ನೇರ ಹಣಾಹಣಿಗೆ ಸಿದ್ಧವಾಗಿದೆ. 

ಕಾಂಗ್ರೆಸ್‌ನಿಂದ (Congress) ಹಾಲಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮತ್ತು ಬಿಜೆಪಿಯಿಂದ ಹಿರಿಯ ಮುಖಂಡ ಡಿ.ಎಚ್.ಶಂಕರಮೂರ್ತಿ ಅವರ ಪುತ್ರ ಡಿ.ಎಸ್.ಅರುಣ್ ಕಣಕ್ಕೆ ಇಳಿದಿದ್ದು, ಸದ್ಯಕ್ಕೆ ಸಮಬಲದ ಹೋರಾಟ ಕಾಣಿಸಿದೆ. ಜೆಡಿಎಸ್ ಮತಗಳೇ ನಿರ್ಣಾಯಕವಾಗಿದ್ದು, ಈವರೆಗೆ ಈ ಪಕ್ಷದ ಬೆಂಬಲ ಯಾರಿಗೆಂದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ನಡುವೆ ಬಿ.ಎಸ್.ಯಡಿಯೂರಪ್ಪ ಇಲ್ಲೇ ಹಲವು ದಿನಗಳಿಂದ ಇದ್ದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. 

ತಂತ್ರ-ಪ್ರತಿತಂತ್ರ ರೂಪಿಸುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ (Congress) ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಜಯಿಸಿದ್ದರೆ, ಬಿಜೆಪಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಳ್ಳುವ ಸ್ಥಿತಿ ಎದುರಾಗಿತ್ತು. ಯಾರೂ ನಿರೀಕ್ಷಿಸದ ರೀತಿ ಜೆಡಿಎಸ್ 2ನೇ ಸ್ಥಾನ ಗಳಿಸಿತ್ತು. ಈ ಬಾರಿ ಜೆಡಿಎಸ್ ಅಭ್ಯರ್ಥಿ ಇಲ್ಲ. ಸಂಯುಕ್ತ ಜನತಾದಳದಿಂದ ಬಿ.ಕೆ. ಶಶಿಕುಮಾರ್ ಅಭ್ಯರ್ಥಿ ಆಗಿದ್ದರೂ ಸದ್ಯ ಆ ಪಕ್ಷಕ್ಕೆ ಜಿಲ್ಲೆಯಲ್ಲಿ ನೆಲೆಯಿಲ್ಲ. 

ಪಿ.ವೈ.ರವಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ (DS Arun) ಪಕ್ಷ ಮತ್ತು ಸಮಾಜದ ವಲಯದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ವೈಯಕ್ತಿಕ ಜಾತಿ ಲೆಕ್ಕಾಚಾರದ ಲಾಭ ಇವರಿಗಿಲ್ಲ. ಸ್ವತಃ ಯಡಿಯೂರಪ್ಪ (Yediyurappa), ಸಂಸದ ರಾಘವೇಂದ್ರ, ಸಚಿವ ಈಶ್ವರಪ್ಪ ಮಾತ್ರವಲ್ಲದೇ, ಜಿಲ್ಲೆಯ ಉಳಿದ ಪಕ್ಷದ ನಾಲ್ಕು ಶಾಸಕರ ಜೊತೆಗೆ ಹೊನ್ನಾಳಿ ಹಾಗೂ ಚನ್ನಗಿರಿಯ ಬಿಜೆಪಿ ಶಾಸಕರು ಗೆಲ್ಲಿಸುವ ಭರವಸೆ ನೀಡಿದ್ದಾರೆ. 

ಕಾಂಗ್ರೆಸ್ ನಿಂದ ಆರ್.ಪ್ರಸನ್ನಕುಮಾರ್ ಮರು ಆಯ್ಕೆ ಬಯಸಿ ಟಿಕೆಟ್ ಪಡೆದಿದ್ದಾರೆ. ಯಾವುದೇ ವಿವಾದವನ್ನು ಮೈಮೇಲೆ ಎಳೆದುಕೊಂಡವರಲ್ಲ. ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡಿರುವುದು ಇವರ ಪ್ಲಸ್ ಪಾಯಿಂಟ್. 

Follow Us:
Download App:
  • android
  • ios