Asianet Suvarna News Asianet Suvarna News

ರಂಗೇರಿದ ಮೈಸೂರು ಮೇಯರ್ ಚುನಾವಣೆ: ಯಾವ ಪಕ್ಷಕ್ಕೆ ಅಧಿಕಾರ..?

ಮೈಸೂರು ಪಾಲಿಕೆ ಮೇಯರ್,ಉಪಮೇಯರ್ ಚುನಾವಣೆ ರಂಗೇರಿದ್ದು ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.

Congress MLA tanveer sait Talks about Mysuru mayor Election rbj
Author
Bengaluru, First Published Feb 23, 2021, 5:39 PM IST

ಮೈಸೂರು, (ಫೆ.3): ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಇದರ ಬೆನ್ನಲ್ಲೇ ಮೈಸೂರು ಮಹಾ ನಗರ ಪಾಲಿಗೆ ಮೇಯರ್, ಉಪ ಮೇಯರ್ ಚುನಾವಣೆ ಮೈತ್ರಿ ರಾಜಕೀಯ ತೀವ್ರ ಕುತೂಹಲ ಮೂಡಿಸಿದೆ. ಒಂದೆಡೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಜೆಡಿಎಸ್-ಕಾಂಗ್ರೆಸ್‌ಗೆ ಬೆಂಬಲಿಸಿದೆ ಎನ್ನುವುದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಮೈಸೂರು ಪಾಲಿಕೆ ಮೇಯರ್,ಉಪಮೇಯರ್ ಚುನಾವಣೆ ರಂಗೇರಿದ್ದು ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.

ಬಿಜೆಪಿಗರು ಬಂದು ನನ್ನ ಬಳಿ ಮಾತಾಡಿದ್ದಾರೆ ಎಂದ ಸಾರಾ : ಅನುಕಂಪ ತೋರಿ ಎಂದ ಸಚಿವ

ಈ ಕುರಿತು ಶಾಸಕ ತನ್ವೀರ್​​ ಸೇಠ್​ ಪ್ರತಿಕ್ರಿಯೆ ನೀಡಿದ್ದು, ಒಪ್ಪಂದದಂತೆ ಜೆಡಿಎಸ್​, ಕಾಂಗ್ರೆಸ್​ ಮೈತ್ರಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ತನ್ವೀರ್​ ಸೇಠ್​​, ಜೆಡಿಎಸ್, ಕಾಂಗ್ರೆಸ್ ಒಪ್ಪಂದದಂತೆ ಮೈತ್ರಿ ಮುಂದುವರಿಯುತ್ತದೆ. ಯಾವು ಸಂಶಯ ಬೇಡ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇವೆ. ಮೈಸೂರು ಪಾಲಿಕೆಯಲ್ಲಿ ಮೈತ್ರಿ ಮುಂದುವರಿಸಲು ಅಸ್ತು ಅಂದಿದ್ದಾರೆ ಎಂದರು.

 ಹೆಚ್.ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಸಭೆ ನಡೆಸಲಿದ್ದಾರೆ. ಅದಾದ ಬಳಿಕ ಕುಮಾರಸ್ವಾಮಿಯವರೊಂದಿಗೆ ಚರ್ಚೆ ಮಾಡುತ್ತೇವೆ. ಈಗಾಗಲೇ ಕುಮಾರಸ್ವಾಮಿಯರೊಂದಿಗೆ ಮಾತನಾಡಿದ್ದೇನೆ. ಮತ್ತೊಮ್ಮೆ ಸಂಜೆ ಭೇಟಿ ಮಾಡುತ್ತೇವೆ. ನಮ್ಮ ಮೈತ್ರಿಯನ್ನು ಮುರಿಯುವ ಯತ್ನ ಮಾಡುತ್ತಿರೋದು ಬಿಜೆಪಿಯವರು. ಆದರೆ ಏನೇ ಮಾಡಿದರೂ ಆಗೋದಿಲ್ಲ ಎಂದು ಹೇಳಿದರು.

Follow Us:
Download App:
  • android
  • ios