ಮೈಸೂರು ಮೇಯರ್ ದಂಗಲ್: ಕುತೂಹಲ ಮೂಡಿಸಿದ ಮಧು ಯಷ್ಕಿ ಗೌಡ ವರದಿ
ಮೈಸೂ ಮೇಯರ್ ಪಟ್ಟವನ್ನು ಬಿಟ್ಟುಕೊಟ್ಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಇದೀಗ ಈ ಸಂಬಂಧ ವರದಿ ಹೈಕಮಾಂಡ್‌ನತ್ತ ಹೊರಟಿದೆ.
ಬೆಂಗಳೂರು, (ಮಾ.05): ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಮೈತ್ರಿ ದಂಗಾಲ್ ಕುರಿತಂತೆ ವರದಿ ಸಿದ್ಧವಾಗಿದೆ.
ಇಂದು (ಶುಕ್ರವಾರ) ಎಐಸಿಸಿ ಕಾರ್ಯದರ್ಶಿ ಮಧು ಯಷ್ಕಿ ಗೌಡ್ ಅವರು ತಮ್ಮ ವರದಿಯನ್ನು ರಾಹುಲ್ ಗಾಂಧಿ ಅವರಿಗೆ ಸಲ್ಲಿಕೆ ಮಾಡಲಿದ್ದಾರೆ.
ಸಿದ್ದರಾಮಯ್ಯ ಹಠಕ್ಕೆ ಮಣಿದ ಹೈಕಮಾಂಡ್, ತನ್ವೀರ್ ಸೇಠ್‌ಗೆ ಬಿಗ್ ಶಾಕ್
ನವದೆಹಲಿಯ ರಾಹುಲ್ ಗಾಂಧಿ ನಿವಾಸಕ್ಕೆ ಶುಕ್ರವಾರ ಸಂಜೆ ವೇಳೆಗೆ ಮಧು ಯಷ್ಕಿ ಗೌಡ್ ಅವರು ಭೇಟಿ ನೀಡಿರುವ ಸಾಧ್ಯತೆ ಇದ್ದು, ಈ ವೇಳೆ ತಮ್ಮ ವರದಿಯನ್ನು ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಆದ್ರೆ, ವರದಿಯಲ್ಲಿ ಯಾವೆಲ್ಲಾ ಅಂಶಗಳಿವೆ. ಯಾರ ವಿರುದ್ಧ ಶಿಸ್ತು ಕ್ರವಾಗುತ್ತೆ ಎನ್ನುವುದು ಮಾತ್ರ ಕುತೂಹಲ ಮೂಡಿಸಿದೆ.
ಮೈಸೂರು ಮೇಯರ್ ಚುನಾವಣೆಯೊಂದಿಗೆ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು, ಮೇಯರ್ ಸ್ಥಾನವನ್ನು ಬಿಟ್ಟುಕೊಟ್ಟಿದ್ದ ಕುರಿತಂತೆ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರು ಬೇಸರಗೊಂಡಿದ್ದರು.
ಮೈಸೂರು ಮೇಯರ್ ಮಲ್ಲಯುದ್ಧ: ಡಿಕೆಶಿ ಭೇಟಿ ಬಳಿಕ ತನ್ವೀರ್ ಸೇಠ್ ಮಹತ್ವದ ಹೇಳಿಕೆ
ಅಲ್ಲದೇ ಹೈ ಕಮಾಂಡ್ ಎದುರು ಈ ಕುರಿತಂತೆ ತಮ್ಮ ಸಮಾಧಾನವನ್ನು ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಮಧು ಯಷ್ಕಿ ಗೌಡ್ ಅವರನ್ನು ಕರ್ನಾಟಕಕ್ಕೆ ತೆರಳಿ ವರದಿ ಸಂಗ್ರಹಿಸಲು ಸೂಚಿಸಿಲಾಗಿತ್ತು.
ರಾಜ್ಯಕ್ಕೆ ಆಗಮಿಸಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮೈಸೂರು ಪಾಲಿಕೆ ಸದಸ್ಯರು ಹಾಗೂ ಶಾಸಕ ತನ್ವೀರ್ ಸೇಠ್ ಸೇರಿದಂತೆ ಹಲವರಿಂದ ಮಾಹಿತಿ ಯಷ್ಕಿ ಗೌಡ್ ಮಾಹಿತಿ ಕಲೆ ಹಾಕಿದ್ದರು.