ವಿಧಾನಸಭಾ ಚುನಾವಣೆ ವೇಳೆ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ಸೆಡ್ಡು ಹೊಡೆದು ಕೊನೆಗೆ ಜೆಡಿಎಸ್‌ ಸೇರ್ಪಡೆಗೊಂಡಿದ್ದ ಆಯನೂರು ಮಂಜುನಾಥ್‌ ಈಗ ಮತ್ತೆ ಕಾಂಗ್ರೆಸ್‌ ಪಕ್ಷದ ಕದ ತಟ್ಟುತ್ತಿದ್ದಾರೆ. 

ಶಿವಮೊಗ್ಗ (ಆ.21): ವಿಧಾನಸಭಾ ಚುನಾವಣೆ ವೇಳೆ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವಿರುದ್ಧ ಸೆಡ್ಡು ಹೊಡೆದು ಕೊನೆಗೆ ಜೆಡಿಎಸ್‌ ಸೇರ್ಪಡೆಗೊಂಡಿದ್ದ ಆಯನೂರು ಮಂಜುನಾಥ್‌ ಈಗ ಮತ್ತೆ ಕಾಂಗ್ರೆಸ್‌ ಪಕ್ಷದ ಕದ ತಟ್ಟುತ್ತಿದ್ದಾರೆ. ಇವರು ಪಕ್ಷ ಸೇರುವುದು ಬಹುತೇಕ ಖಚಿತ ಎಂದು ಹೇಳುತ್ತಿರುವ ಬೆನ್ನಲ್ಲೆ ಕಾಂಗ್ರೆಸ್‌ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್‌ ಮುಖಂಡ ಎಚ್‌.ಸಿ. ಯೋಗೀಶ್‌ ಪತ್ರಿಕಾಗೋಷ್ಠಿ ನಡೆಸಿ, ಚಳಿಗಾಲದಲ್ಲಿ ಬಿಜೆಪಿಯಲ್ಲಿದ್ದು, ಬೇಸಿಗೆಗಾಲದಲ್ಲಿ ಜೆಡಿಎಸ್‌ ಸೇರ್ಪಡೆಗೊಂಡ ಆಯನೂರು ಮಂಜುನಾಥ್‌ ಅವರು ಈಗ ಮಳೆಗಾಲದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯಲ್ಲಿ ಇದ್ದಾಗ ಕಾಂಗ್ರೆಸ್‌ ನಾಯಕ ವಿರುದ್ಧ ಕೀಳಾಗಿ ಮಾತನಾಡಿದ ಆಯನೂರು ಈಗ ಅದೇ ಕಾಂಗ್ರೆಸ್‌ ಮುಖಂಡರ ಬಳಿ ಹೋಗಿ ನಾನು ಕಾಂಗ್ರೆಸ್‌ಗೆ ಸೇರುತ್ತೇನೆ ಎನ್ನುತ್ತಿದ್ದಾರೆ. ಇವರು ವಿಧಾನಸಭಾ ಚುನಾವಣೆಯಲ್ಲಿ ಕೇವಲ 8863 ಮತ ತೆಗೆದುಕೊಂಡು ಠೇವಣಿ ಕಳೆದುಕೊಂಡಿದ್ದಾರೆ. ಈಗ ಕಾಂಗ್ರೆಸ್‌ಗೆ ಬರುತ್ತೇನೆ ಅಂದಿದ್ದಾರೆ. ಇವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಬರಮಾಡಿಕೊಳ್ಳಬಾರದು ಎಂದು ನಾನೇ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ರಾಜ​ಕಾ​ರ​ಣ​ದಲ್ಲಿ ಹೊಸ ಸಂಸ್ಕೃತಿ, ಸಂಪ್ರ​ದಾಯ ಬೆಳೆ​ಯ​ಬೇ​ಕು: ಕಾಗೋಡು ತಿಮ್ಮಪ್ಪ

ಜೆಡಿಎಸ್‌ನಲ್ಲೇ ಇದ್ದು ನಿಮ್‌ ಧಮ್‌ ತೋರಿಸಿ: ಬಿಜೆಪಿಯಲ್ಲಿ ಇದ್ದಾಗ ಸಿದ್ದರಾಮಯ್ಯ ವಿರುದ್ಧ ಮಾತನಾಡಿ ಧಮ್ಮಿದ್ದರೆ ಎಂದು ಸವಾಲು ಹಾಕಿದ್ದ ಆಯನೂರು ಮಂಜುನಾಥ್‌ ಅವರು ಈಗ ಅವರ ಬಳಿಯೇ ಹೋಗಿ ನಾನು ನಿಮ್ಮ ಜೊತೆ ಬರುತ್ತೇನೆ ಎನ್ನುತ್ತಿದ್ದಾರೆ. ನಿಮಗೆ ಧಮ್‌ ಇದ್ದರೆ ಜೆಡಿಎಸ್‌ ಪಕ್ಷದಲ್ಲೇ ಇದ್ದು ಧಮ್‌ ತೋರಿಸಲಿ ಎಂದು ಸವಾಲು ಎಸೆದರು. ಆಯನೂರು ಮಂಜುನಾಥ್‌ ಹಾಗೂ ಈಶ್ವರಪ್ಪ ನಡುವೆ ಗಲಾಟೆ ಯಾಕೆ ಎಂದರೆ ಗುದ್ದಲಿ ಪೂಜೆಗೆ ಕರೆಯುತ್ತಿಲ್ಲ ಅಂತ ಅಷ್ಟೇ ಹೊರತು, ಅಭಿವೃದ್ಧಿ ವಿಚಾರವಾಗಿ ಅಲ್ಲ. 

ಬಿಜೆಪಿ ಅವರನ್ನು ಹೊರತುಪಡಿಸಿ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್‌ ಗೆಲ್ಲಲ್ಲ ಎಂದಿದ್ದರು. ಈಗ ಕಾಂಗ್ರೆಸ್‌ ಬಂದ ತಕ್ಷಣ ನೀವು ಗೇಲ್ಲುತ್ತೀರಾ, ಈಗಾಗಲೇ ನಮ್ಮ ಪಕ್ಷದ ಅಭ್ಯರ್ಥಿಗಳು ಕೆಪಿಸಿಸಿಗೆ ಪದವೀಧರರ ಕ್ಷೇತ್ರಕ್ಕೆ ಅಭ್ಯರ್ಥಿ ಬಯಸಿ ಅರ್ಜಿ ಹಾಕಿದ್ದಾರೆ. ಆಯನೂರು ಮಂಜುನಾಥ್‌ ಕಾಂಗ್ರೆಸ್‌ ಸೇರ್ಪಡೆಗೆ ನಮ್ಮೆಲ್ಲರ ವಿರೋಧ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯ ಆರ್‌.ಪ್ರಸನ್ನಕುಮಾರ್‌, ಪ್ರಮುಖರಾದ ಶಾಮೀರ್‌ ಖಾನ್‌, ವಿಶ್ವನಾಥ್‌ ಕಾಶಿ, ರಂಗೇಗೌಡ, ಅಲ್ತಾಫ್‌ ಮತ್ತಿತರರು ಇದ್ದರು.

ಇಡೀ ರಾಜ್ಯ ಬರಗಾಲಪೀಡಿತ ಎಂದು ಘೋಷಿಸಿ: ಸಂಸದ ರಾಘವೇಂದ್ರ ಆಗ್ರ​ಹ

ಆಯನೂರು ಮಂಜುನಾಥ್‌ ಪಕ್ಷಕ್ಕೆ ಸೇಪರ್ಡಡೆ ಆಗುವುದರಿಂದ ಲೋಕಸಭಾ ಚುನಾವಣೆಯಲ್ಲಿ ನಮಗೇನು ಪ್ರಯೋಜನ ಆಗಲ್ಲ. ಹೀಗಾಗಿ ಪಕ್ಷದ ನಾಯಕರು ಅವರನ್ನು ಸೇರಿಕೊಳ್ಳುವ ಮುನ್ನ ಯೋಚನೆ ಮಾಡಬೇಕು. ನಮ್ಮ ನಾಯಕರ ಬಗ್ಗೆ ಏಕವಚನದಲ್ಲೇ ಮಾತನಾಡಿರುವ ವಿಡಿಯೋ ಕ್ಲಿಪ್‌ಗಳನ್ನು ನಮ್ಮ ಹೈಕಮಾಂಡ್‌ಗೆ ಕಳಿಸಿಕೊಡಲಾಗಿದೆ. ಪಕ್ಷದಲ್ಲಿ ದುಡಿದವರಿಗೆ ಪಕ್ಷ ಅವಕಾಶ ನೀಡಬೇಕು. ಆಯನೂರು ಮಂಜುನಾಥ್‌ ಜೆಡಿಎಸ್‌ ಪಕ್ಷವನ್ನೇ ಕಟ್ಟಲಿ, ಕಾಂಗೆಸ್‌ ಪಕ್ಷವನ್ನು ನಾವೇ ಕಟ್ಟುತ್ತೇವೆ. ನಮ್ಮ ಮೇಲೆ ಹೈಕಮಾಂಡ್‌ ನಂಬಿಕೆ ಇಡಬೇಕು
- ಎಚ್‌.ಸಿ.ಯೋಗೇಶ್‌, ಕಾಂಗ್ರೆಸ್‌ ಮುಖಂಡ