ರಾಜ​ಕಾ​ರ​ಣ​ದಲ್ಲಿ ಹೊಸ ಸಂಸ್ಕೃತಿ, ಸಂಪ್ರ​ದಾಯ ಬೆಳೆ​ಯ​ಬೇ​ಕು: ಕಾಗೋಡು ತಿಮ್ಮಪ್ಪ

ರಾಜಕಾರಣ ಒಂದು ಸೇವಾ ಕ್ಷೇತ್ರವೇ ಹೊರತು, ಅಧಿಕಾರ ಹಿಡಿಯುವ ಮಾರ್ಗವಲ್ಲ ಎಂದು ಈ ಬಾರಿಯ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು. 

A new culture and tradition should be developed in politics Says Kagodu Thimmappa gvd

ಸಾಗರ (ಆ.20): ರಾಜಕಾರಣ ಒಂದು ಸೇವಾ ಕ್ಷೇತ್ರವೇ ಹೊರತು, ಅಧಿಕಾರ ಹಿಡಿಯುವ ಮಾರ್ಗವಲ್ಲ ಎಂದು ಈ ಬಾರಿಯ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು. ಪಟ್ಟ​ಣದ ಪ್ರೆಸ್‌ ಟ್ರಸ್ಟ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಹೊಸ ಸಂಸ್ಕೃತಿ, ಸಂಪ್ರದಾಯ ಬೆಳೆಯಬೇಕು. ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿಕೊಳ್ಳಬೇಕು ಎಂದರು.

ರಾಜಕೀಯದಲ್ಲಿ ಶುದ್ಧ ಜೀವನ ನಡೆಸಬೇಕು. ಈ ವಿಷಯದಲ್ಲಿ ನಾನು ಸಫಲನಾಗಿದ್ದೇನೆ. ಸಾಮಾಜಿಕ ನ್ಯಾಯದ ತುಡಿತ ನನಗೆ ಮೊದಲಿನಿಂದಲೂ ಇತ್ತು. ಇದಕ್ಕೆ ಪೂರಕವಾಗಿ ಅದೇ ರೀತಿಯ ಕಾಳಜಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೂ ಇದ್ದುದರಿಂದ ಜನರಿಗೆ ನ್ಯಾಯ ಕೊಡಲು ಅನುಕೂಲವಾಯಿತು. ದೇವರಾಜ ಅರಸು ಅವರಂತಹ ವ್ಯಕ್ತಿಯೊಂದಿಗೆ ಕೆಲಸ ಮಾಡಲು ಅವಕಾಶ ದೊರಕಿದ್ದು ನನ್ನ ಸುದೈವ ಎಂದು ಹೇಳಿದರು.

ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣಕ್ಕೆ ಭೂಸ್ವಾಧೀನ: ಪರಿಹಾರ ನೀಡದಿದ್ದರೆ ನಮ್ ಭೂಮಿ ನಮ್ಗೇ

1972 ರಲ್ಲಿ ಶಾಸನಸಭೆಗೆ ಹೋದಾಗ ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸು ಅವರು ಬಡವರು, ಹಿಂದುಳಿದ ವರ್ಗದ ಜನರ ಕಲ್ಯಾಣದ ಕಾಳಜಿ, ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಹಲವಾರು ಕಾರ್ಯಕ್ರಮ ಹಾಕಿದ್ದರು. ಇದರ ಜೊತೆಗೆ ಭೂ ಸುಧಾರಣೆ ಬಗ್ಗೆ ಒಂದು ಶಾಸನ ಸಮಿತಿ ರಚಿಸಿ ನನ್ನನ್ನೂ ಸದಸ್ಯನನ್ನಾಗಿ ಮಾಡಿದರು. ಗೇಣಿ ರೈತರಿಗೆ ಭೂಮಿ ಕೊಡುವ ವಿಚಾರದಲ್ಲಿ ಅರಸು ಅವರು ಬದ್ಧತೆ ಮೆರೆದ ಕಾರಣಕ್ಕಾಗಿ ನಮ್ಮ ಹೋರಾಟಕ್ಕೆ ನ್ಯಾಯ ದೊರಕಿದಂತಾಯಿತು ಎಂದು ನೆನಪಿಸಿಕೊಂಡರು.

ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ದೇವರಾಜ ಅರಸು ಅವರು ಅವಕಾಶ ವಂಚಿತ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದರು. ಭೂ ಸುಧಾರಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು. ಅಂದಿನ ಶಾಸಕರಾಗಿದ್ದ ಕಾಗೋಡು ತಿಮ್ಮಪ್ಪ ಅವರ ಜೊತೆಗೂಡಿ ಕಾನೂನು ಸರಳೀಕರಣ ಮಾಡಿದರು. ಸಾಮಾಜಿಕ ನ್ಯಾಯ ಕೊಡಲು ಅರಸು ಹಾಗೂ ಕಾಗೋಡು ತಿಮ್ಮಪ್ಪ ಇಬ್ಬರೂ ಇಚ್ಛಾಶಕ್ತಿ ಹೊಂದಿದ್ದರು ಎಂದರು.

ಕಾಗೋಡು ಪುತ್ರಿ ಡಾ.ರಾಜನಂದಿನಿ, ಜಿಪಂ ಮಾಜಿ ಸದಸ್ಯೆ ಅನಿತಾಕುಮಾರಿ ಮಾತನಾಡಿದರು. ಹಿರಿಯ ಪತ್ರಕರ್ತರಾದ ಕೆ.ಎನ್‌. ವೆಂಕಟಗಿರಿ ಹಾಗೂ ಲಕ್ಷಿ ್ಮೕನಾರಾಯಣ ಹೆಗಡೆ ಕಾಗೋಡರನ್ನು ಅಭಿನಂದಿಸಿ ಮಾತನಾಡಿದರು. ಗಣಪತಿ ಶಿರಳಗಿ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎಚ್‌.ವಿ. ರಾಮಚಂದ್ರ ರಾವ್‌ ಉಪಸ್ಥಿತರಿದ್ದರು.

ರಾ​ಮ​ನ​ಗ​ರದ ಜಲ​ದಾ​ಹ ನೀಗಿ​ಸ​ಲಿದೆ ನೆಟ್ಕಲ್‌ ಯೋಜನೆ!

ಅನ್ಯಾಯ ಬಯಲು- ಹೋರಾಟವೇ ಜೈಲು: ಅನ್ಯಾಯದ ವಿರುದ್ಧ ಹೋರಾಟ ಅಂದಿನ ಪ್ರಮುಖ ವಿಷಯವಾಗಿತ್ತು. ಭೂ ಹೋರಾಟದಲ್ಲಿ ಲೋಹಿಯಾ, ಜಯಪ್ರಕಾಶ್‌ ನಾರಾಯಣ, ಬಸವಾನಿ ರಾಮಚಂದ್ರ ಮುಂತಾದವರ ಒಡನಾಟ ನನಗೆ ಸಿಕ್ಕಿತು. ಎಲ್ಲ ಹೋರಾಟವೂ ಅಹಿಂಸಾತ್ಮಕವಾಗಿ ನಡೆಯಿತು. ಎಲ್ಲೂ ಇನ್ನೊಬ್ಬರ ಬಗ್ಗೆ ತೆಗಳಿಕೆಯಾಗಲೀ, ಕಹಿಯಾಗಿ ನಡೆದುಕೊಳ್ಳುವುದಾಗಿ ಮಾಡಲಿಲ್ಲ. ಅನ್ಯಾಯ ಬಯಲು- ಹೋರಾಟವೇ ಜೈಲು ಎಂಬುದು ನಮ್ಮ ಗುರಿಯಾಗಿತ್ತು ಎಂದು ಕಾಗೋಡರು ತಮ್ಮ ಮಾತಲ್ಲಿ ಉಲ್ಲೇಖಿಸಿದರು.

Latest Videos
Follow Us:
Download App:
  • android
  • ios