Asianet Suvarna News Asianet Suvarna News

ಕಲಬುರಗಿಯಲ್ಲಿ ನಾಳೆ ಕಾಂಗ್ರೆಸ್‌ ಕಲ್ಯಾಣ ಕ್ರಾಂತಿ ಸಮಾವೇಶ

ಎಐಸಿಸಿ ಅಧ್ಯಕ್ಷರಾದ ನಂತರ ಖರ್ಗೆ ತವರು ಜಿಲ್ಲೆ ಕಲಬುರಗಿಗೆ ಡಿ.10ರಂದು ಚೊಚ್ಚಲ ಭೇಟಿ, ಇದೇ ದಿನವನ್ನು ಕಲ್ಯಾಣ ಕ್ರಾಂತಿ ರೂಪದಲ್ಲಿ ಸಂಘಟಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ

Congress Convention Will Be Held in Kalaburagi on December 10th grg
Author
First Published Dec 9, 2022, 10:30 PM IST

ಕಲಬುರಗಿ(ಡಿ.09):  ಹಿರಿಯ ಕಾಂಗ್ರೆಸ್‌ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್‌ ಕಮೀಟಿ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಡಿ.10ರಂದು ತಮ್ಮ ತವರು ಜಿಲ್ಲೆ ಕಲಬುರಗಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭವನ್ನೇ ಕಲ್ಯಾಣದ 7 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಬಲಪಡಿಸಲು ಬಳಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್‌ ಪಕ್ಷ ಕಲಂ 371 (ಜೆ) ಈ ಭಾಗದಲ್ಲಿ ಜಾರಿಗೆ ಬಂದು ದಶಕ ಪೂರೈಸಿರುವ ಈ ಅವಧಿಯಲ್ಲಿ ಕಲ್ಯಾಣ ಕ್ರಾಂತಿ ಎಂಬ ಹೆಸರಲ್ಲಿ ಬೃಹತ್‌ ಸಮಾವೇಶವನ್ನೇ ಆಯೋಜಿಸಿದೆ.

ಕಲ್ಯಾಣ ನಾಡಿನ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಹರಡಿರುವ ಎಲ್ಲಾ 41 ಅಸೆಂಬ್ಲಿ ಕ್ಷೇತ್ರಗಳಿಂದ 3 ರಿಂದ 4 ಲಕ್ಷದಷ್ಟುಜನರನ್ನು ಡಿ. 10 ರಂದು ಕಲಬುರಗಿಯಲ್ಲಿ ಜಮಾಯಿಸಲು ಮಂದಾಗಿರುವ ಕಾಂಗ್ರೆಸ್‌ ಮುಖಂಡರು ಕಲ್ಯಾಣ ನಾಡಿನ ಅಭಿವೃದ್ಧಿಗೆ ಕಾಂಗ್ರೆಸ್‌ ಮಾಡಿದ್ದೇನು? ಬಿಜೆಪಿ ಅದ್ಹೇಗೆ ಅಡ್ಡಿಯಾಯ್ತು ಎಂಬುದನ್ನೆಲ್ಲ ಜನರ ಗಮನಕ್ಕೆ ತಂದು ಅಸೆಂಬ್ಲಿ ಚುನಾವಣೆಯ ಈ ಸಂಧಿ ಕಾಲದಲ್ಲಿ ಕಲ್ಯಾಣದ ಜನಮನಕ್ಕೆ ಹತ್ತಿರವಾಗಲು ಮುಂದಾಗಿದ್ದಾರೆ.

ಕಲಬುರಗಿ: ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಉಸ್ತುವಾರಿ ಸಚಿವ ನಿರಾಣಿ: ಬಿ.ಆರ್‌. ಪಾಟೀಲ್‌

ಇಲ್ಲಿನ ಎನ್‌ವಿ ಶಾಲೆಯ ಮೈದಾನದಲ್ಲಿ ಕಲ್ಯಾಣ ಕ್ರಾಂತಿ ಸಮಾವೇಶ ಡಿ. 10ರಂದು ಮಧ್ಯಾಹ್ನ 1 ಗಂಟೆಗೆ ಶುರುವಾಗಲಿದೆ. ಇದಕ್ಕೂ ಮುನ್ನ ದೆಹಲಿಯಿಂದ ಖರ್ಗೆಯವರು ಅದೇ ದಿನ ಬೆಳಗ್ಗೆ ವಿಶೇಷ ವಿಮಾನದಲ್ಲಿ 10 ಗಂಟೆ 40 ನಿಮಿಷಕ್ಕೆ ಕಲಬುರಗಿಗೆ ಬಂದಿಳಿಯಲಿದ್ದಾರೆ. ಇಲ್ಲಿಂದ ನಗರವೇಶ್ವರ ಶಾಲೆಯ ಮೈದಾನಕ್ಕೆ ತೆರಳಿ ಅಲ್ಲಿಂದ ಪಕ್ಷದ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಬೃಹತ್‌ ಮೆರವಣಿಗೆ ಸಂಘಟಿಸಿದ್ದಾರೆ. 4 ಕಿಮೀ ಮೆರವಣಿಗೆ 3 ಗಂಟೆಕಾಲ ನಡೆಸಿ ಜಗತ್‌ ವೃತ್ತದಲ್ಲಿ ಸಂಪನ್ನಗೊಳ್ಳಲಿದೆ.

ಎಐಸಿಸಿ ಪ್ರ. ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪಸಿಂಗ್‌ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್‌ ವಿಪಕ್ಷ ನಾಯಕ ಹರಿಪ್ರಸಾದ್‌ ಬಿಕೆ, ದಿನೇಶ ಗುಂಡೂರಾವ್‌, ಎಂಬಿ ಪಾ…ೕ, ಸತೀಶ ಜಾರಕಿಹೋಳಿ, ಎಚ್‌ಕೆ ಪಾಟೀಲ್‌, ಕೆಎಚ್‌ ಮುನಿಯಪ್ಪ, ಡಾ. ಜಿ ಪರಮೇಶ್ವರ, ಆರ್‌ ಧೃವನಾರಾಯಣ, ಸಲೀಂ ಅಹ್ಮದ್‌ ಸೇರಿದಂತೆ ಕಲಬುರಗಿ ಸೇರಿದಂತೆ ಕಲ್ಯಾಣದ 7 ಜಿಲ್ಲೆಗಳ ಎಲ್ಲಾ ಶಾಸಕರು, ಮಾಜಿ ಶಾಸಕರು, ಪಕ್ಷದ ಪ್ರಮುಖರು, ಮುಂಚೂಣಿ ಘಟಕದ ಮುಖ್ಯಸ್ಥರೆಲ್ಲರೂ ಪಾಲ್ಗೊಳ್ಳುತ್ತಿದ್ದಾರೆ.

ಪೂರ್ವ ಸಿದ್ಧತೆ:

ಕಲಬುರಗಿಯಲ್ಲಿ ಕಲ್ಯಾಣ ಕ್ರಾಂತಿಗಾಗಿ ಕಾಂಗ್ರೆಸ್‌ ಪಕ್ಷ ಕಳೆದ 1 ತಿಂಗಳಿಂದ ಭರದ ತಯ್ಯಾರಿ ನಡೆಸುತ್ತಿದ್ದು ಇವ್ಲೆವೂ ಕೊನೆಯ ಹಂತ ತಲುಪಿವೆ. ಪ್ರತಿ ಸೆಂಬ್ಲಿ ಕ್ಷೇತ್ರಕ್ಕೆ ವೀಕ್ಷಕರು, ಉಸ್ತುವಾರಿಗಳು, ಅಲ್ಲಿನ ಹಾಲಿ, ಮಾಜಿ ಶಾಸಕರೆಲ್ಲರನ್ನೂ ಸೇರಿಸಿ ಹೆಚ್ಚಿನ ಜನ ಕಲಬುರಗಿಗೆ ತರುವಂತೆ ಸೂಚಿಸಲಾಗಿದೆ. ಈಗಾಗಲೇ ಎಲ್ಲರೂ ಖರ್ಗೆಯವರನ್ನು ತವರೂರಲ್ಲಿ ಸ್ವಾಗತಿಸಲು ಸಜ್ಜಾಗುತ್ತಿದ್ದಾರೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಡಾ. ಮಲ್ಲಿಕಾರ್ಜುನ ಖರ್ಗೆ ಅವರ ರಾಜನೀತಿಕ ಕೌಶಲ್ಯದಿಂದಲೇ ದೆಹಲಿ ಹಂತದಲ್ಲಿ ಎಲ್ಲರ ಸಮ್ಮತಿಯಿಂದ ಕಲ್ಯಾಣ ನಾಡಿಗೆ ಕಲಂ 371 (ಜೆ) ದಕ್ಕಿತು. ಈ ವಿಶೇಷ ಸಂರಕ್ಷಣೆ ದೊರಕಿ ದಶಕ ಪೂರೈಸಿದೆ. ಈ ಹಂತದಲ್ಲಿ ನಾವು ಅದನ್ನೂ ಸಂಭ್ರಮಿಸುತ್ತಿದ್ದೇವೆ. ನಾವು ಕಲ್ಯಾಣದ ಬಾಗ್ಯದ ಆಗಿಲು ತೆರಯಲು ಇಂತಹ ಯೋಜನೆ ನೀಡಿದ್ದೇವೆ. ಆದರೆ ಬಿಜೆಪಿ ಇಂದಿಗೂ ಮಿಕ್ಕುಳಿದ ವೃಂದದಲ್ಲಿ ಕಲ್ಯಾಣದ ಪ್ರತಿಭೆಗಳಿಗೆ ಪರಿಗಣಿಸದೆ ಮೀಸಲಾತಿಯಲ್ಲೂ ಮೋಸ ಮಾಡುತ್ತಿದೆ.

ಕರ್ನಾಟಕದಲ್ಲಿ ಮೋದಿ ಆಟ ನಡೆಯಲ್ಲ: ಪ್ರಿಯಾಂಕ್‌ ಖರ್ಗೆ

ಬಿಜೆಪಿ ಕಲ್ಯಾಣ ಭಾಗದತ್ತ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೆಕೆಆರ್‌ಡಿಬಿಗೆ 3 ಸಾವಿರ ಕೋಟಿ ರು ಹಣ ಕೊಡೋದಾಗಿ ಹೇಳಿ ವಾಸ್ತವದಲ್ಲಿ 1, 500 ಕೋಟಿ ರು ಮಾತ್ರ ಮಂಜೂರು ಮಡಿದೆ. ಬರೀ ಮಾತಿನಲ್ಲೇ ಅಭಿವೃದ್ಧಿ, ವಾಸ್ತವದಲ್ಲಿ ಎಲ್ಲವೂ ಶೂನ್ಯ. ಇವನ್ನೆಲ್ಲ ಕಲ್ಯಾಣದ ಜನರು ಗಮನಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೆಸೆದು ಕಲ್ಯಾಣ ನಾಡು ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್‌ ಪಕ್ಷಕ್ಕೆ ಜನ ಬೆಂಬಲ ದೊರಕಲಿದೆ ಎಂದು ಖಂಡ್ರೆ, ಡಾ. ಶರಣಪ್ರಕಾಶ ಹೇಳಿದರು.

ವಿಧಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕ ಡಾ. ಅಜಯ್‌ ಸಿಂಗ್‌, ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ, ಮಾಇ ಎಂಎಲ್‌ಸಿ ತಿಪ್ಪಣ್ಣ ಕಮಕನೂರ್‌, ಅಲ್ಲಂಪ್ರಭು ಪಾಟೀಲ್‌, ಕೆಪಿಸಿಸಿ ಪ್ರ. ಕಾರ್ಯದರ್ಶಿ ಶರಣು ಮೋದಿ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್‌, ದೀಪಕನಾಗ್‌ ಪುಣ್ಯಶೆಟ್ಟಿ, ಶಾಸಕ ಎಂವೈ ಪಾಟೀಲ್‌, ಶಿವಾನಂದ ಪಾಟೀಲ್‌, ಬಸವರೆಡ್ಡಿ ಪಾಟೀಲ್‌ ಅನಪೂರ್‌, ಶರಣಪ್ಪ ಮಟ್ಟೂರ್‌, ಬಾಬೂ ಒಂಟಿ ಇದ್ದರು.
 

Follow Us:
Download App:
  • android
  • ios