ಕಳೆದ 10 ವರ್ಷಗಳ ನರೇಂದ್ರ ಮೋದಿಯವರ ಅನ್ಯಾಯಕಾಲದ ವಿವರಗಳನ್ನು ಅಂಕಿ-ಅಂಶಗಳ ಸಹಿತ ಕರ್ನಾಟಕದ ಜನತೆಯ ಮುಂದೆ ಇಡುತ್ತಿದ್ದೇನೆ. ದೇಶ ಇಂದು ಅಮೃತ ಕಾಲದಲ್ಲಿ ಇದೆಯೋ? ಅನ್ಯಾಯದ ಕಾಲದಲ್ಲಿ ಇದೆಯೋ? ಎಂದು ಜನರೇ ತೀರ್ಮಾನಿಸಲಿ’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು(ಫೆ.11):  ಕಳೆದ 10 ವರ್ಷಗಳ ಬಿಜೆಪಿ ಆಡಳಿತವನ್ನು ನರೇಂದ್ರ ಮೋದಿಯವರು ಮತ್ತು ಬಿಜೆಪಿಯ ನಾಯಕರು ‘ಅಮೃತ ಕಾಲ’ ಎಂದು ಬಣ್ಣಿಸುತ್ತಿದ್ದಾರೆ. ವಾಸ್ತವದಲ್ಲಿ ಇದು ಭಾರತದ ವಿನಾಶ ಕಾಲ. ಈ ಅವಧಿಯಲ್ಲಿ ಎಲ್ಲಾ ವರ್ಗಗಳ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳು ಐದರಿಂದ ಹತ್ತು ಪಟ್ಟು ಹೆಚ್ಚಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

‘ಹತ್ತು ವರ್ಷಗಳ ಅನ್ಯಾಯದ ಕಾಲ’ ಹೆಸರಿನಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕಳೆದ 10 ವರ್ಷಗಳ ನರೇಂದ್ರ ಮೋದಿಯವರ ಅನ್ಯಾಯಕಾಲದ ವಿವರಗಳನ್ನು ಅಂಕಿ-ಅಂಶಗಳ ಸಹಿತ ಕರ್ನಾಟಕದ ಜನತೆಯ ಮುಂದೆ ಇಡುತ್ತಿದ್ದೇನೆ. ದೇಶ ಇಂದು ಅಮೃತ ಕಾಲದಲ್ಲಿ ಇದೆಯೋ? ಅನ್ಯಾಯದ ಕಾಲದಲ್ಲಿ ಇದೆಯೋ? ಎಂದು ಜನರೇ ತೀರ್ಮಾನಿಸಲಿ’ ಎಂದಿದ್ದಾರೆ.

ದಲಿತ ಸಮುದಾಯ ತುಳಿಯುವ ಪ್ರಯತ್ನ ನಡೆಸುತ್ತಿರುವ ಸಿದ್ದರಾಮಯ್ಯಗೆ ನಮ್ಮ ಧಿಕ್ಕಾರ: ಬಂಜಾರ ಸಮುದಾಯ

ಒಂದೂ ಭರವಸೆ ಈಡೇರಿಸಿಲ್ಲ:

10 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಈ ದೇಶದ ಮತದಾರರಿಗೆ ನೀಡಿದ್ದ ಒಂದೇ ಒಂದು ಭರವಸೆಯನ್ನು ಕೂಡ ಪೂರ್ಣ ಪ್ರಮಾಣದಲ್ಲಿ ಈಡೇರಿಸಿಲ್ಲ ಎಂದು ಹರಿಹಾಯ್ದಿದ್ದಾರೆ. ರೈತರ ಆದಾಯದ ದುಪ್ಪಟ್ಟು, ಯುವಜನರಿಗೆ ವಾರ್ಷಿಕ 2 ಕೋಟಿ ಉದ್ಯೋಗ, ಮಹಿಳೆಯರಿಗೆ ರಕ್ಷಣೆ, ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಶೋಷಿತ ಸಮುದಾಯಗಳಿಗೆ ರಕ್ಷಣೆ, ಅಗ್ಗದ ದರದಲ್ಲಿ ಅಗತ್ಯವಸ್ತುಗಳ ಪೂರೈಕೆ ಮೊದಲಾದ ಬಣ್ಣ ಬಣ್ಣದ ಭರವಸೆಗಳನ್ನು ನೀಡಿ ಮೋದಿಯವರು ಚುನಾವಣೆಯಲ್ಲಿ ಗೆದ್ದಿದ್ದರು. ಗೆದ್ದ ನಂತರ ಜನರಿಗೆ ನೀಡಿದ್ದ ಭರವಸೆಗಳನ್ನು ಮರೆತು ದೇವರು-ಧರ್ಮದ ಹೆಸರಿನ ಭಾವನಾತ್ಮಕ ರಾಜಕಾರಣ, ಉದ್ಯಮಿಗಳ ತುಷ್ಟೀಕರಣದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೂಕರಾಗಿದ್ದಾರೆ:

ಕಳೆದ 10 ವರ್ಷಗಳಿಂದ ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದ ಪ್ರಧಾನಿಗಳು ಮೂಕರಾಗಿದ್ದಾರೆ, ಕಷ್ಟ ಕೇಳಬೇಕಾದ ಕೇಂದ್ರದ ಸಚಿವರುಗಳು ಕಿವುಡರಾಗಿದ್ದಾರೆ. ನರೇಂದ್ರ ಮೋದಿ ಅವರ ಉದ್ಯಮಮಿತ್ರರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಶರವೇಗದಲ್ಲಿ ಮುಂದಕ್ಕೆ ಹೋಗುತ್ತಿದ್ದರೆ, ಈ ದೇಶದ ಜನಸಾಮಾನ್ಯರು ಕೇಂದ್ರ ಸರ್ಕಾರದ ದುರಾಡಳಿತ, ವೈಫಲ್ಯಗಳ ಭಾರ ಹೊತ್ತು ಕುಸಿದು ಬಿದ್ದಿದ್ದಾರೆ ಎಂದಿದ್ದಾರೆ.

ಅನ್ಯಾಯ ಕಾಲ ಏಕೆ?

- ನಿರುದ್ಯೋಗ ಪ್ರಮಾಣ 4 ಕೋಟಿಗೆ ಏರಿಕೆ
- ಎಲ್ಪಿಜಿ ದರ 410 ರು.ನಿಂದ 903 ರು.ಗೆ ಹೆಚ್ಚಳ
- ಪೆಟ್ರೋಲ್‌ ಶೇ.37, ಡೀಸೆಲ್‌ ಶೇ.64, ಅಡುಗೆ ಎಣ್ಣೆ ಶೇ.59 ದುಬಾರಿ
- ರೈತರ ಆದಾಯ ದುಪ್ಪಟ್ಟು, ಯುವಜನರಿಗೆ 2 ಕೋಟಿ ಉದ್ಯೋಗ ಭರವಸೆ ಹುಸಿ
- ಬಡವರು, ಶೋಷಿತರಿಗೆ ಅಗ್ಗದ ದರದ ಅಗತ್ಯವಸ್ತು ಪೂರೈಕೆ ಭರವಸೆ ಹುಸಿ