Asianet Suvarna News Asianet Suvarna News

ಕೇಸ್‌ ವಾಪಸ್‌ ಪಡೆಯಲು ಸಿದ್ದರಾಮಯ್ಯ ಹಣ ನೀಡಿದ್ದಾರೆ: ಸಿ.ಟಿ.ರವಿ ಆರೋಪ

ಆತ್ಮಸಾಕ್ಷಿ ಬಗ್ಗೆ ಮಾತಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕೇಸ್‌ ವಾಪಸ್‌ ಪಡೆಯಲು ಹಣ ನೀಡಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿಯವರು ಗಂಭೀರ ಆರೋಪ ಮಾಡಿದ್ದಾರೆ.

CM Siddaramaiah gave money to withdraw the case Says CT Ravi gvd
Author
First Published Oct 17, 2024, 7:59 AM IST | Last Updated Oct 17, 2024, 7:59 AM IST

ಕಲಬುರಗಿ (ಅ.17): ಆತ್ಮಸಾಕ್ಷಿ ಬಗ್ಗೆ ಮಾತಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕೇಸ್‌ ವಾಪಸ್‌ ಪಡೆಯಲು ಹಣ ನೀಡಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿಯವರು ಗಂಭೀರ ಆರೋಪ ಮಾಡಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ವಿರುದ್ಧ ಇ.ಡಿ. ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು, ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ಚುನಾವಣೆಗೆ ಬಳಕೆಯಾಗಿರುವುದು ಸಾಬೀತಾಗಿದೆ. 

ಅಲ್ಲದೆ ಮುಡಾ ಪ್ರಕರಣ ತಮ್ಮ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ ಎಂದು ಸಿದ್ದರಾಮಯ್ಯ ಅವರಿಗೆ ಮನದಟ್ಟಾಗಿದೆ. ಇದೆಲ್ಲವನ್ನೂ ವಿಷಯಾಂತರ ಮಾಡಲು ಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್ ಪಡೆದಿದ್ದಾರೆ. ಆತ್ಮಸಾಕ್ಷಿಯ ಬಗ್ಗೆ ಮಾತನಾಡುವ ಸಿಎಂ ಒಂದು ಕೇಸ್ ವಾಪಸ್ ಪಡೆಯಲು ಒಬ್ಬ ವ್ಯಕ್ತಿಗೆ ಎಷ್ಟು ಕೊಟ್ಟಿದ್ದಾರೆ ಅನ್ನೋದು ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸಲಾಗುವುದು ಎಂದು ಆರೋಪಿಸಿದರು. 

ಕಾವೇರಿ 6ನೇ ಹಂತದ ಕುಡಿಯುವ ನೀರು ಯೋಜನೆಗೆ ಸೂಚನೆ: ಸಿಎಂ ಸಿದ್ದರಾಮಯ್ಯ

ಪೊಲೀಸರು ಮತ್ತು ದೇವರ ಮೂರ್ತಿಗಳ ಮೇಲೆ ಕಲ್ಲು ತೂರುವವರು ಅಮಾಯಕರು ಎನ್ನುವ ಸಿದ್ದರಾಮಯ್ಯ ಅವರು ಸಿಎಂ ಮಾತ್ರವಲ್ಲ ನ್ಯಾಯವಾದಿ ಸಹ ಆಗಿದ್ದು, ಎಲ್ಲವನ್ನೂ ತನಿಖೆ ಮಾಡಿ ನೋಡೋಣ ಎಂದು ಸಿಎಂ ವಾಗ್ದಾಳಿ ನಡೆಸಿದರು. ಹಿಜಾಬ್ ಪರ ಹೋರಾಟಗಾರರ ಬಗ್ಗೆ ಅಷ್ಟೊಂದು ಒಲವು ಹೊಂದಿರುವ ಕಾಂಗ್ರೆಸ್ ನಾಯಕರು ಬುರ್ಖಾ ಧರಿಸಿಕೊಂಡು ಓಡಾಡುವುದಾದರೆ ಸ್ವತಃ ನಾನೇ ಬುರ್ಖಾ ಖರೀದಿಸಿ ಕೊಡುವೆ. ಹಾಕಿಕೊಂಡು ತಿರುಗಾಡಲಿ ಎಂದು ಲೇವಡಿ ಮಾಡಿದರು.

ನನ್ನ ಮೇಲಿನ ಆರೋಪ ಸಾಬೀತಾದರೆ ರಾಜೀನಾಮೆ: ನನ್ನ ವಿರುದ್ಧ ರಾಜ್ಯಪಾಲರಿಗೆ ಯಾವುದಾದರೂ ದೂರು ದಾಖಲಾಗಿರುವುದನ್ನು ಕಾಂಗ್ರೆಸ್‌ ಸಚಿವರು ಸಾಬೀತುಪಡಿಸಿದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುವೆ. ಇಲ್ಲವಾದರೆ, ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು ಎಂದು ಸಚಿವರಿಗೆ ಸವಾಲು ಹಾಕಿದರು.ಗೆ ಮಾತನಾಡಿ, ನನ್ನ ಮೇಲೆ ಯಾರೂ ಯಾವುದೇ ಅರ್ಜಿ ಕೊಟ್ಟಿಲ್ಲ. ಯಾವುದೇ ಕೇಸ್ ದಾಖಲಾಗಿಲ್ಲ. ಪ್ರಿಯಾಂಕ್ ಖರ್ಗೆ ಸರ್ವಜ್ಞ ಅಲ್ವಾ?. 

ಬೆಂಗಳೂರಿನ ದಾಹ ಇಂಗಿಸಲು ಕಾವೇರಿ 6ನೇ ಹಂತ ಜಾರಿ: ಸಿಎಂ ಸಿದ್ದರಾಮಯ್ಯ

ನನ್ನ ಮೇಲಿನ ಯಾವುದಾದರೂ ಪ್ರಕರಣವನ್ನು ಕ್ಯಾಬಿನೇಟ್‌ನಲ್ಲಿ ವಾಪಸ್ ಪಡೆದಿದ್ದರೆ ಎಂಎಲ್‌ಸಿ ಸ್ಥಾನಕ್ಕೆ ರಾಜಿನಾಮೆ ನೀಡುವುದರ ಜತೆಗೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುವೆ. ಒಂದು ವೇಳೆ ಆರೋಪ ಸುಳ್ಳಾದರೆ ಪ್ರಿಯಾಂಕ್ ಖರ್ಗೆ, ಎಚ್‌.ಕೆ.ಪಾಟೀಲ ಸೇರಿ ಸಂಪುಟದ ಎಲ್ಲ ಸಚಿವರು ರಾಜೀನಾಮೆ ನೀಡಬೇಕು. ‘ಕಾಂಗ್ರೆಸ್ ಸರ್ಕಾರಕ್ಕೆ ಇದು ನನ್ನ ಚಾಲೆಂಜ್’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios