Asianet Suvarna News Asianet Suvarna News

ನಳೀನ್‌ ಕುಮಾರ್ ಕಟೀಲ್‌ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ

ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ‌ ಪ್ರತಿಮೆಯನ್ನು ಲೋಕಾರ್ಪಣೆ ನೆರವೇರಿಸಲು ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾರ್ಯಕ್ರಮಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನ್‌ ಕುಮಾರ್ ಕಟೀಲ್‌ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

CM Bommai inquired about the health of Nalin Kumar Kateel sat
Author
First Published Nov 19, 2022, 12:16 PM IST

ಮಂಗಳೂರು (ನ.19) : ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ‌ ಪ್ರತಿಮೆಯನ್ನು ಲೋಕಾರ್ಪಣೆ ನೆರವೇರಿಸಲು ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾರ್ಯಕ್ರಮಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನ್‌ ಕುಮಾರ್ ಕಟೀಲ್‌ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ನಗರದ ಎ.ಜೆ. ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಸದ ನಳೀನ್‌ ಕುಮಾರ್‍‌ ಕಟೀಲ್‌ (Nalin Kumar Kateel) ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj bommai) ಅವರು ಮಂಗಳೂರು ಪ್ರವಾಸದ (Mangalore tour) ಸಂದರ್ಭದಲ್ಲಿ ಎ.ಜೆ. ಆಸ್ಪತ್ರೆಯಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಕುಶಲ ವಿಚಾರಿಸಿದರು. ಫಲಾಹಾರವನ್ನು ಕೊಟ್ಟು ಶೀಘ್ರ ಗುಣಮುಖರಾಗಿ ಬರುವಂತೆ ಹಾರೈಸಿದರು. ಈ ವೇಳೆ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ (Sadanandagowda) ಉಪಸ್ಥಿತರಿದ್ದರು.

ದೇಶದ ಗಮನ ಸೆಳೆದ ಕೆಂಪೇಗೌಡರ ಪ್ರತಿಮೆ: ಇದರ ವಿಶೇಷತೆ ಏನು?

ಶೌರ್ಯ ಪ್ರತಿಮೆ ಲೋಕಾರ್ಪಣೆ: ಆಸ್ಪತ್ರೆಯಿಂದ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಂಗಳೂರಿನ ಬಾವುಟಗುಡ್ಡೆ (Bavutagudde)ಯಲ್ಲಿ ನಿರ್ಮಾಣ ಮಾಡಲಾಗಿರುವ ಕೆದಂಬಾಡಿ ರಾಮಯ್ಯಗೌಡರ (Ramaiahgowda) ಕಂಚಿನ ಶೌರ್ಯ ಪ್ರತಿಮೆ (Statue)ಯನ್ನು ಲೋಕಾರ್ಪಣೆ ಮಾಡಿದರು. 1837 ರಲ್ಲಿಯೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಮಯ್ಯಗೌಡ ಸಮರವೀರ ಎನಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಸ್ಮಾರಕ ಉಸ್ತುವಾರಿ ಸಮಿತಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಎಸ್‌.ಅಂಗಾರ, ಅಶ್ವಥ್ ನಾರಾಯಣ್, ಜಿಲ್ಲೆಯ ಶಾಸಕರು ಭಾಗಿಯಾಗಿದ್ದರು. 

ಬ್ರಿಟೀಷರನ್ನು ಸೋಲಿಸಿದ್ದ ರಾಮಯ್ಯಗೌಡರು: 1837ರಲ್ಲಿ ಬ್ರಿಟಿಷರ ವಿರುದ್ದ ನಡೆದಿದ್ದ ಅಮರ ಸುಳ್ಯ ‌ಕ್ರಾಂತಿ (Sulya Revolution) ನಡೆದಿತ್ತು. ಇದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲು ನಡೆದ ಅಮರ ಸುಳ್ಯ ದಂಗೆ ಯಾಗಿದೆ. ಇದರಲ್ಲಿ ರಾಮಯ್ಯಗೌಡರ ನೇತೃತ್ವದಲ್ಲಿ ರೈತರು ಬ್ರಿಟಿಷರ (British) ವಿರುದ್ದ ಹೋರಾಡಿದ್ದರು. ಆಗ ಬ್ರಿಟಿಷ್ ಸೈನ್ಯವನ್ನು ಹಿಮ್ಮೆಟ್ಟಿಸಿ ದಕ್ಷಿಣ ಕೆನರಾ ಜಿಲ್ಲೆಯ (South canara District) ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಎರಡು ವಾರಗಳ ಕಾಲ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸರ್ಕಾರ ನಡೆಸಿದ್ದ ಕೆದಂಬಾಡಿ ರಾಮಯ್ಯ ಗೌಡ ಅವರನ್ನು ಪುನಃ ಬ್ರಿಟಿಷರ ಭಾರಿ ಸೈನ್ಯ ಆಗಮಿಸಿ ಹತ್ಯೆ (Kill) ಮಾಡಿತ್ತು. ಈ ವೇಳೆ ನೂರಾರು ರೈತರನ್ನು (Farmers) ಕೂಡ ಹತ್ತೆ ಮಾಡಲಾಗಿದೆ. 

ಮಂಗಳೂರು: ಕರಾವಳಿಯಲ್ಲಿ ಸೇನಾ ಪೂರ್ವ ಕೇಂದ್ರದ ಮೊದಲ ತರಬೇತಿ ಆರಂಭ


ಕರಾವಳಿ ಉತ್ಸವ ಮೈದಾನದಲ್ಲಿ ಸಭೆ: ನಗರದ ಕರಾವಳಿ ಉತ್ಸವ (Karavali Utsav) ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಮಾರು 25 ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಕೊಡಗು ಭಾಗಗಳಿಂದ ಜನರು ಆಗಮಿಸಿದ್ದಾರೆ. 

Follow Us:
Download App:
  • android
  • ios