ಹುಬ್ಬಳ್ಳಿ[ಫೆ.10]: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲ ಭಾರೀ ಸದ್ದು ಮಾಡುತ್ತಿದ್ದು, ರಾಜಕೀಯ ನಾಯಕರ ನಡುವೆ ಆಡಿಯೋ ಕಾಳಗ ಆರಂಭವಾಗಿದೆ. ಫೆ. 8ರಂದು ಬಜೆಟ್‌ ಮಂಡನೆಗೂ ಮೊದಲು ಸಿಎಂ ಕುಮಾರಸ್ವಾಮಿ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಭಾರೀ ಸಂಚಲನ ಮೂಡಿಸಿತ್ತು. ಹೀಗಿರುವಾಗ ಬಿಎಸ್‌ವೈ ಆಡಿಯೋದಲ್ಲಿರುವುದು ನನ್ನ ಧ್ವನಿ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು. ಇತ್ತ ಧರ್ಮಸ್ಥಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ ಆಡಿಯೋದಲ್ಲಿರುವುದು ಯಡಿಯೂರಪ್ಪ ಧ್ವನಿ ಅಲ್ಲವೆಂದಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಶಪಥ ಮಾಡಿದ್ದರು. ಸದ್ಯ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಯಡಿಯೂರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದು, ತಾನು ಶರಣು ಗೌಡನ ಜೊತೆ ಮಾತನಾಡಿರುವುದು ನಿಜ ಎಂದಿದ್ದಾರೆ. 

ಧರ್ಮಸ್ಥಳದಲ್ಲಿ ಸಿಎಂ ಶಪಥ: ಯಡಿಯೂರಪ್ಪ ಧ್ವನಿ ಅಲ್ಲಾಂದ್ರೆ ರಾಜೀನಾಮೆ!

ಹುಬ್ಬಳ್ಳಿಯಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ ಎಸ್ ಯಡಿಯೂರಪ್ಪ 'ಕುಮಾರಸ್ವಾಮಿ ತರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡುತಿದ್ದಾರೆ. MLA ಮಗನನ್ನು ಕಳಿಸಿಕೊಟ್ಟು ತಮಗೆ ಬೇಕಾದ ಹಾಗೆ ಮಾತನಾಡಿಸಿಕೊಂಡಿದ್ದಾರೆ. ಆದರೆ ನಾನು ಮಾತನಾಡಿರುವುದರಲ್ಲಿ ತಮಗೆ ಬೇಕಾದನ್ನು ಮಾತ್ರ ಬಳಕೆ ಮಾಡಿಕೊಂಡ್ರು. ನನ್ನ ಬಳಿ ಶರಣುಗೌಡ ಬಂದದ್ದು ನಿಜ. ಕುಮಾರಸ್ವಾಮಿ ಕುತಂತ್ರದಿಂದ ನನ್ನ ಬಳಿ ಶರಣುಗೌಡ ಅವರನ್ನು ಕಳುಹಿಸಿ ಕೊಟಿದ್ದಾರೆ. ಯಾವುದೇ ಮುಖ್ಯಮಂತ್ರಿಯೂ ಈವರೆಗೂ ಹೀಗೆ ನಡೆದುಕೊಂಡಿಲ್ಲ. ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕೆಲ ಸತ್ಯಗಳನ್ನು ಮರೆಮಾಚಿದ್ದಾರೆ' ಎಂದಿದ್ದಾರೆ.

"

ಆಪರೇಷನ್ ಕಮಲ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ: ಬಿಎಸ್‌ವೈ

ಇದೇ ಸಂದರ್ಭದಲ್ಲಿ ಎಚ್. ಡಿ ರೇವಣ್ಣ ಮಗ ಪ್ರಜ್ವಲ್ ವಿಚಾರವನ್ನು ಉಲ್ಲೇಖಿಸಿದ ಯಡಿಯೂರಪ್ಪ 'ಸ್ವತಃ ಪ್ರಜ್ವಲ್ ರೇವಣ್ಣrವರೇ ನಮ್ಮದು ಸೂಟ್ ಕೇಸ್ ಸಂಸ್ಕೃತಿ, ಸೂಟ್‌ಕೇಸ್ ಇಲ್ಲದೇ ಯಾವುದೇ ಕೆಲಸ ಆಗಲ್ಲಾ ಎಂದು ಹೇಳಿದ್ದಾರೆ. ಈ ಬಗ್ಗೆ ನನ್ನ ಬಳಿಯೂ ದಾಖಲೆ ಇವೆ. ಸೋಮವಾರ ಅವರ ಬಂಡವಾಳ ಬಯಲು ಮಾಡುವೆ. ನನ್ನ ಬಳಿಯೂ ಆಡಿಯೋ ಇದೆ’ ಎಂದಿದ್ದಾರೆ.

ದೇವರ ಹೆಸರಲ್ಲಿ ಯಡಿಯೂರಪ್ಪ ದೇವದುರ್ಗ ಭೇಟಿ ರಹಸ್ಯ ಬಯಲು

ಒಟ್ಟಾರೆಯಾಗಿ ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಶಪಥ ಮಾಡಿರುವ ಬೆನ್ನಲ್ಲೇ ಬಿ. ಎಸ್‌ ಯಡಿಯೂರಪ್ಪ ಇಂತಹ ಹೇಳಿಕೆ ನೀಡಿರುವುದು ಭಾರೀ ಚರ್ಚೆ ಹುಟ್ಟು ಹಾಕಿದ್ದು, ಸಿಎಂ ಶಪಥಕ್ಕೆ ಹೆಸರಿ ಅವರು ತಾವು ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡರಾ ಎಂಬ ಮಾತುಗಳೂ ಜೋರಾಗಿದೆ.

ಅದು ಯಡಿಯೂರಪ್ಪ ಧ್ವನಿಯಂತೂ ಅಲ್ವೇ ಅಲ್ಲ: ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ